ಉಚಿತವಾಗಿ ವಿಷಯಗಳನ್ನು ನೀಡುವ ಚುನಾವಣೆಯಲ್ಲಿನ ಆಶ್ವಾಸನೆಯು ವಿಷಯವು ಗಂಭೀರವಿದೆ!- ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ಚುನಾವಣೆಗಳಲ್ಲಿ `ಉಚಿತ ನೀರು ಕೊಡುತ್ತೇವೆ, ಉಚಿತ ವಿದ್ಯುತ್ ಕೊಡುತ್ತೇವೆ, ಎಂದು ಆಶ್ವಾಸನೆ ನೀಡುವುದು ಗಂಭೀರ ವಿಷಯವಾಗಿದೆ. ಏಕೆಂದರೆ ಇದರಿಂದ ದೊಡ್ಡ ಪ್ರಮಾಣದಲ್ಲಿ ಹಣ ವೆಚ್ಚವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ. ಉಚಿತವಾಗಿ ನೀಡುತ್ತೇವೆಂದು ಆಶ್ವಾಸನೆ ನೀಡುವುದರ ಮೇಲೆ ಕಾನೂನುರೀತ್ಯಾ ನಿಷೇಧ ಹೇರಬೇಕು, ಎಂಬ ಬೇಡಿಕೆಗಳಿರುವ ಮನವಿಯನ್ನು ಭಾಜಪ ಮುಖಂಡ ನ್ಯಾಯವಾದಿ ಶ್ರೀ ಅಶ್ವಿನಿ ಉಪಾಧ್ಯಾಯ ಇವರು ದಾಖಲಿಸಿದ್ದಾರೆ. ಅದಕ್ಕೆ ನ್ಯಾಯಾಲಯವು ಮೇಲಿನಂತೆ ಹೇಳಿಕೆ ನೀಡಿದೆ. ನ್ಯಾಯಾಲಯವು ಮುಂದುವರಿಸುತ್ತಾ , ಈ ದೂರಿನ ಮೇಲೆ ಇಂದು ಯಾವುದೇ ನಿರ್ದೇಶನ ಅಥವಾ ಆದೇಶವನ್ನು ನೀಡುವುದಿಲ್ಲ. ಸಂಪೂರ್ಣ ಆಲಿಸುವಿಕೆಯಾದ ಬಳಿಕವೇ ಆದೇಶ ನೀಡಲಾಗುವುದು’, ಎಂದು ಹೇಳಿದೆ. ಈ ದೂರಿನ ಮೇಲೆ ಮುಂದಿನ ಆಲಿಕೆಯು 17 ಅಗಸ್ಟರಂದು ನಡೆಯಲಿದೆ.

1. ನ್ಯಾಯಮೂರ್ತಿ ಎನ್.ವ್ಹಿ. ರಮಣಾ ಇವರು ಆಲಿಸುವಿಕೆಯ ಸಂದರ್ಭದಲ್ಲಿ ಮುಂದಿನಂತೆ ಹೇಳಿದರು, ಈ ಅಂಶವು ಅತ್ಯಂತ ಗಂಭೀರವಾಗಿದೆ ಎಂಬುದನ್ನು ನಿರಾಕರಿಸುವಂತಿಲ್ಲ. ನಮ್ಮ ದೇಶ ಜನಕಲ್ಯಾಣಕಾರಿಯಾಗಿದ್ದು, ಯಾರಿಗೆ ಉಚಿತ ವಿಷಯಗಳು ಸಿಗುತ್ತಿವೆಯೋ, ಅವರಿಗೆ ಅದು ಬೇಕಾಗಿದೆ. ಇನ್ನು ಕೆಲವರು ಹೇಳುವುದೇನೆಂದರೆ, `ನಾವು ತೆರಿಗೆ ಕಟ್ಟುತ್ತೇವೆ ಮತ್ತು ತೆರಿಗೆಯಿಂದ ಜಮೆಯಾಗಿರುವ ಹಣವನ್ನು ಅಭಿವೃದ್ಧಿಗಾಗಿ ಉಪಯೋಗಿಸಬೇಕು’, ಆದುದರಿಂದ ಇದು ಗಂಭೀರವಾದ ವಿಷಯವಾಗಿದೆ. ಎರಡೂ ಪಕ್ಷದವರ ಅಭಿಪ್ರಾಯವನ್ನು ಆಲಿಸಬೇಕು.

2. ಆಮ್ ಆದ್ಮಿ ಪಕ್ಷವು ಮಧ್ಯಂತರ ಮನವಿ ದಾಖಲಿಸಿದ್ದು, ಅವರ ನ್ಯಾಯವಾದಿಗಳು ಆಲಿಕೆಯ ಸಂದರ್ಭದಲ್ಲಿ `ಜನಕಲ್ಯಾಣ ಮತ್ತು ಉಚಿತ ವಿಷಯಗಳಲ್ಲಿ ಬಹಳಷ್ಟು ವ್ಯತ್ಯಾಸವಿದೆ’, ಎಂದು ಹೇಳಿದರು. ಆಗ ನ್ಯಾಯಾಲಯವು `ಅದರಿಂದ ಅರ್ಥವ್ಯವಸ್ಥೆಯ ಮೇಲೆ ಏನು ಪರಿಣಾಮವಾಗುತ್ತಿದೆ?’, ಎಂದು ಕೂಡ ನೋಡಬೇಕು ಎಂದು ಹೇಳಿತು.

ಸಂಪಾದಕೀಯ ನಿಲುವು

ಚುನಾವಣಾ ಆಯೋಗವೇ ಈಗ ಇಂತಹ ಆಶ್ವಾಸನೆ ನೀಡುವುದರ ಮೇಲೆ ನಿರ್ಬಂಧ ಹೇರಬೇಕು!