ಛತ್ತೀಸ್‌ಗಡದ ಘುಮಕಾ ಗ್ರಾಮದಿಂದ ಸರಾಯಿಗೆ ನಿಷೇಧ !

  • ಸಾರಾಯಿ ಮಾರಾಟ ತಡೆಯುವುದಕ್ಕಾಗಿ ಗ್ರಾಮದಲ್ಲಿ ಸಿ.ಸಿ. ಟೀವಿ ಕ್ಯಾಮರಾ ಅಳವಡಿಸಲಾಗುವುದು !

  • ಸಾರಾಯಿ ಮಾರಾಟ ಮಾಡಿದರೆ ೫೧ ಸಾವಿರ ರೂಪಾಯಿ ದಂಡ ವಿಧಿಸಲಾಗುವುದು

ರಾಯಪುರ (ಛತ್ತಿಸ್‌ಗಢ) – ಛತ್ತಿಸ್‌ಗಢ ರಾಜ್ಯದ ಬಾಲೋದ ಜಿಲ್ಲೆಯ ಘುಮಕಾ ಗ್ರಾಮದಲ್ಲಿ ಗ್ರಾಮಸ್ಥರಿಂದ ಸಾರಾಯಿ ನಿಷೇಧ ಘೋಷಿಸಲಾಗಿದೆ. ಗ್ರಾಮದಲ್ಲಿ ಯಾರಾದರೂ ಸಾರಾಯಿ ಮಾರಾಟ ಮಾಡಿದರೆ, ಅವರಿಗೆ ೫೧ ಸಾವಿರ ರೂಪಾಯಿ ದಂಡ ಭರಿಸುವ ನಿಯಮ ಮಾಡಲಾಗಿದೆ. ಸಾರಾಯಿ ಮಾರಾಟದ ಕಡೆಗೆ ನಿಗಾ ವಹಿಸಲು ೩ ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಸಾರಾಯಿ ಕುಡಿಯುವುದರಿಂದ ಆಗುವ ಅಪರಾಧಗಳನ್ನು ತಡೆಯುವದಕ್ಕಾಗಿ ಗ್ರಾಮಸ್ಥರು ಈ ನಿರ್ಣಯ ತೆಗೆದುಕೊಂಡ್ಡಿದ್ದಾರೆ. ಸರಪಂಚ ಮಿಲಾಪ ಸಿಂಹ ಠಾಕೂರ ಅವರು, ಘುಮಕಾ ಗ್ರಾಮದ ಪ್ರತಿಯೊಂದು ಮನೆಯ ಒಬ್ಬ ವ್ಯಕ್ತಿ ವ್ಯಸನಾಧೀನನಾಗಿದ್ದರು. ಇದರಿಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆಗುವ ತೊಂದರೆ ಸಹಿಸಬೇಕಾಗುತ್ತಿತ್ತು. ಮಹಿಳೆಯರು ಈ ಸಂದರ್ಭದಲ್ಲಿ ಮಾಡಿರುವ ವಿನಂತಿಯ ಮೇರೆಗೆ ಗ್ರಾಮದಲ್ಲಿ ಸಾರಾಯಿ ನಿಷೇಧಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಪ್ರತಿಯೊಂದು ಸರಕಾರ ತೆರಿಗೆಗಾಗಿ ಸಾರಾಯಿ ಮಾರಾಟಕ್ಕೆ ಅನುಮತಿ ನೀಡುತ್ತದೆ ಮತ್ತು ಸಮಾಜದ ಅಧೋಗತಿ ಮಾಡುತ್ತದೆ. ‘ಕೆಲವು ರಾಜ್ಯಗಳಲ್ಲಿ ಸಾರಾಯಿ ಮಾರಾಟ ನಿಷೇಧವಿದ್ದರೂ ಅದು ಕೇವಲ ಕಾಗದ ಪತ್ರಗಳ ಮೇಲೆ ಇರುತ್ತದೆ’, ಅದು ನಮಗೆ ಇಲ್ಲಿಯವರೆಗೆ ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಘುಮಕಾ ಗ್ರಾಮ ಮಾಡಿರುವ ಪ್ರಯತ್ನ ಶ್ಲಾಘನೀಯವಾಗಿದೆ. ದೇಶದ ಪ್ರತಿಯೊಂದು ಗ್ರಾಮವು ಈ ರೀತಿಯಲ್ಲಿ ಪ್ರಯತ್ನಿಸಿದರೇ, ಭಾರತದಲ್ಲಿ ನಡೆಯುವ ಅಧೋಗತಿ ಸ್ವಲ್ಪ ಪ್ರಮಾಣದಲ್ಲಿ ನಿಲ್ಲುವುದು !