ಸಾಮಾಜಿಕ ಮಾಧ್ಯಮಗಳ ಮೂಲಕ ಬೇಡಿಕೆ
ಮುಂಬಯಿ – ನಟ ಆಮೀರ ಖಾನ ಮತ್ತು ನಟಿ ಕರೀನಾ ಕಪೂರ ಇವರ ‘ಲಾಲಸಿಂಗ ಚಡ್ಡಾ’ ಈ ಹೊಸ ಚಲನಚಿತ್ರ ಅಗಸ್ಟ ೧೧ ರಂದು ಪ್ರದರ್ಶನಗೊಳ್ಳಲಿದೆ. ಅದರ ಮೊದಲೇ ಅದನ್ನು ಬಹಿಷ್ಕರಿಸುವಂತೆ ಅಥವಾ ನಿಷೇಧಿಸುವಂತೆ ಬೇಡಿಕೆ ತೀವ್ರವಾಗುತ್ತಿದೆ. ಟ್ವಿಟರನಲ್ಲಿ ‘#BoycottLaalSinghCaddha’ ‘ಟ್ರೆಂಡ್’ ಮಾಡಲಾಗುತ್ತಿದೆ.
ವಿರೋಧದ ಹಿಂದಿನ ಕಾರಣ
ಈ ಚಲನಚಿತ್ರದ ವಿಷಯದ ಕುರಿತು ಜನರಲ್ಲಿ ಅಸಮಧಾನ ಮೂಡಿರುವ ಹಿಂದೆ ಆಮೀರ ಖಾನ ಮತ್ತು ಕರೀನಾ ಕಪೂರ ಇವರು ನೀಡಿರುವ ಹಳೆಯ ಹೇಳಿಕೆಗಳು ಕಾರಣೀಭೂತವಾಗಿವೆಯೆಂದು ಹೇಳಲಾಗುತ್ತಿದೆ. ‘ನಮ್ಮ ಚಲನಚಿತ್ರವನ್ನು ನೋಡಬೇಡಿರಿ, ಯಾರೂ ಒತ್ತಾಯ ಮಾಡುತ್ತಿಲ್ಲ’, ಎಂದು ಕರೀನಾ ಕಪೂರ ಕೆಲವು ದಿನಗಳ ಹಿಂದೆ ಹೇಳಿದ್ದರು. ಈ ವಿಷಯದಲ್ಲಿ ಸಾಮಾಜಿಕ ಮಾಧ್ಯಮದಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತ ಪಡಿಸಲಾಗುತ್ತಿದೆ.
೧. ಒಬ್ಬ ಟ್ವೀಟರ್ ಉಪಯೋಗಿಸುವವನು, ನಿಮ್ಮ (ಆಮೀರಖಾನ ಇವರ) ಪತ್ನಿ, ‘ಭಾರತದಲ್ಲಿ ವಾಸಿಸುವುದು ಸುರಕ್ಷಿತವಲ್ಲ’, ಎಂದು ಹೇಳಿದ್ದರು. ಹೀಗಿರುವಾಗ ನೀವು ನಿಮ್ಮ ಚಲನಚಿತ್ರಗಳನ್ನು ಇಲ್ಲೇಕೆ ಪ್ರದರ್ಶಿಸುತ್ತಿದ್ದೀರಿ ? ಎಂದು ಹೇಳಿದನು.
೨. ಮತ್ತೊಬ್ಬನು, ಜನರು ಬೆವರು ಸುರಿಸಿ ದುಡಿದಿರುವ ಹಣವನ್ನು ‘ಲಾಲಸಿಂಗ ಚಡ್ಡಾ’ ಚಲನಚಿತ್ರದ ಮೇಲೆ ಖರ್ಚು ಮಾಡಬಾರದು ಎಂದು ಕರೆ ನೀಡುತ್ತೇನೆ ಎಂದು ಹೇಳಿದರು. ಕೆಲವು ವರ್ಷಗಳ ಹಿಂದೆ ಆಮೀರ ಖಾನ ‘ಶಿವಲಿಂಗದ ಮೇಲೆ ಹಾಲು ಅರ್ಪಿಸುವುದು ವ್ಯರ್ಥವಾಗಿದೆ’, ಎಂದು ಹೇಳಿಕೆ ನೀಡಿದ್ದರು.
೩. ಕೆಲವು ಜನರು, ‘ಲಾಲಸಿಂಗ ಚಡ್ಡಾ’ ನೋಡುವುದಕ್ಕಿಂತ ‘ಫಾರೆಸ್ಟ ಗಂಪ್’ ಈ ಮೂಲ ಚಲನಚಿತ್ರವನ್ನು ನೋಡುವುದು ಒಳ್ಳೆಯದು ಎಂದು ಅಭಿಪ್ರಾಯ ಪಟ್ಟಿದ್ದಾರೆ.