ಯೋಗಿ ಆದಿತ್ಯನಾಥರನ್ನು ಬೆಂಬಲಿಸಿದ್ದರಿಂದ ಮುಸಲ್ಮಾನ ಮಹಿಳೆಗೆ ತಲಾಕನ ನೋಟಿಸ್ ನೀಡಿದ ಪತಿ

ಮಹಿಳೆಯ ದೂರಿನ ನಂತರ ಪತಿಯ ಬಂಧನ

ಮೂರಾದಾಬಾದ (ಉತ್ತರಪ್ರದೇಶ) – ಇಲ್ಲಿಯ ಸನಾ ಇರಮ ಈ ಮಹಿಳೆಯು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರನ್ನು ಬೆಂಬಲಿಸಿದ್ದಕ್ಕೆ ಹಾಗೂ ಭಾಜಪಕ್ಕೆ ಮತದಾನ ಮಾಡಿದ್ದರಿಂದ ಆಕೆಯ ಪತಿ ಆಕೆಗೆ ತಲಾಕನ ನೋಟಿಸ್ ಕಳಸಿದ್ದಾನೆ. ಇದರ ನಂತರ ಈ ಮಹಿಳೆಯೂ ಕೂಡ ಪತಿ ಮತ್ತು ಅತ್ತೆ ಮನೆಯವರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಇದರ ನಂತರ ಪೊಲೀಸರು ಪತಿ ನದಿಮನನ್ನು ಬಂದಿದ್ದಾರೆ.

ಸನಾ ಇರಮ ಇವರು ಟ್ವೀಟ್ ಮಾಡಿ ಆಕೆಗೆ ತಲಾಕನ ನೋಟೀಸ್ ನೀಡಿರುವ ಮಾಹಿತಿಯನ್ನು ಯೋಗಿ ಆದಿತ್ಯನಾಥರಿಗೆ ನೀಡಿದ ನಂತರ ದೆಹಲಿಯ ಒಂದು ಹಿಂದುತ್ವನಿಷ್ಠ ಸಂಘಟನೆಯ ಅಧ್ಯಕ್ಷರಿಂದ ಮುರಾದಾಬಾದದ ಪೊಲೀಸರಿಗೆ ತಿಳಿಸಿ ಆ ಮಹಿಳೆಗೆ ನ್ಯಾಯ ಕೊಡಿಸಲು ವಿನಂತಿಸಿದ್ದರು.

ಸಂಪಾದಕೀಯ ನಿಲುವು

ಇಂತಹ ಪ್ರಸಂಗದಲ್ಲಿ ಮಹಿಳಾ ಆಯೋಗ ಮತ್ತು ಮಹಿಳಾ ಸಂಘಟನೆ ಮುಸಲ್ಮಾನ ಮಹಿಳೆಗಾಗಿ ಎಂದಾದರೂ ಧ್ವನಿ ಎತ್ತುವರೇ ?