ಉತ್ತರಪ್ರದೇಶ ಮತ್ತು ಆಸ್ಸಾಂ ಗಡಿ ಭಾಗದಲ್ಲಿ ಮುಸಲ್ಮಾನರ ಜನಸಂಖ್ಯೆಯಲ್ಲಿ ಶೇ. ೩೨ ರಷ್ಟು ಹೆಚ್ಚಳ

  • ಹೆಚ್ಚಳವಾಗುವುದರ ಹಿಂದೆ ನುಸುಳುಖೋರರ ಸಹಭಾಗ

  • ಗಡಿ ಭದ್ರತಾ ಪಡೆಯ ಕ್ಷೇತ್ರ ೧೦೦ ಕಿ.ಮೀ. ವರೆಗೆ ಹೆಚ್ಚಿಸಲು ಬೇಡಿಕೆ

ನವದೆಹಲಿ – ಗ್ರಾಮಪಂಚಾಯತಿಯ ಹೊಸ ನೊಂದಣಿಯ ಆಧಾರದಲ್ಲಿ ಉತ್ತರಪ್ರದೇಶ ಮತ್ತು ಆಸ್ಸಾಂ ರಾಜ್ಯಗಳ ಪೊಲೀಸರು ಕೇಂದ್ರ ಗೃಹಸಚಿವಾಲಯಕ್ಕೆ ಪ್ರತ್ಯೇಕವಾಗಿ ವರದಿ ಸಲ್ಲಿಸಿವೆ. ಎರಡೂ ವರದಿಗಳನುಸಾರ ೨೦೧೧ ರಿಂದ ಈ ರಾಜ್ಯಗಳ ಗಡಿಪ್ರದೇಶಗಳ ಜಿಲ್ಲೆಗಳಲ್ಲಿ ಮುಸಲ್ಮಾನರ ಜನಸಂಖ್ಯೆಯಲ್ಲಿ ಶೇ. ೩೨ರಷ್ಟು ಹೆಚ್ಚಳವಾಗಿದೆ. ಅದೇ ರೀತಿ ದೇಶಾದ್ಯಂತ ಶೇ. ೧೦ ರಿಂದ ೧೫ ತನಕ ಹೆಚ್ಚಳವಾಗಿದೆ. ಇದರ ಅರ್ಥ ಮುಸಲ್ಮಾನರ ಜನಸಂಖ್ಯೆಯಲ್ಲಿ ಸಾಮಾನ್ಯ ಜನಸಂಖ್ಯೆಗಿಂತ ಶೇ. ೨೦ ರಷ್ಟು ಹೆಚ್ಚಳವಾಗಿದೆ. ಪೊಲೀಸರು ಈ ಬದಲಾವಣೆಯನ್ನು ದೇಶದ ಭದ್ರತೆಯ ದೃಷ್ಟಿಕೋನದಿಂದ ಅತ್ಯಂತ ಸೂಕ್ಷ್ಮಬಾಗಿದೆ ಎಂದು ತಿಳಿದಿದ್ದಾರೆ. ಆದ್ದರಿಂದ ಎರಡೂ ರಾಜ್ಯಗಳು ಗಡಿ ಭದ್ರತಾ ಪಡೆಯ ಅಧಿಕಾರ ಕ್ಷೇತ್ರದ ಮಿತಿಯನ್ನು ೫೦ ಕಿ.ಮಿ ಗಳಿಂದ ೧೦೦ ಕಿ.ಮೀಗಳ ವರೆಗೆ ಹೆಚ್ಚಿಸುವಂತೆ ಶಿಫಾರಸ್ಸು ಮಾಡಿದ್ದಾರೆ; ಅಂದರೆ ಗಡಿಯ ಹಿಂದೆ ೧೦೦ ಕೀ.ಮಿ.ವರೆಗೆ ತನಿಖೆ ಮತ್ತು ಶೋಧಕಾರ್ಯ ನಡೆಸುವಂತೆ ಅಧಿಕಾರವನ್ನು ಗಡಿ ಭದ್ರತಾ ದಳದವರಿಗೆ ಇದೆ.

೧. ಗುಜರಾತವನ್ನು ಹೊರತುಪಡಿಸಿ ಇತರೆ ಗಡಿರಾಜ್ಯಗಳಾದ ಪಂಜಾಬ, ಉತ್ತರಪ್ರದೇಶ, ರಾಜಸ್ಥಾನ, ಆಸ್ಸಾಂ, ಬಂಗಾಳ ಮತ್ತು ಪೂರ್ವ ಮತ್ತು ಉತ್ತರದ ರಾಜ್ಯಗಳ ಗಡಿ ಭದ್ರತಾ ದಳ ಅಧಿಕಾರ ಕ್ಷೇತ್ರ ೧೫ ಕಿ.ಮೀ ವರೆಗೆ ಸೀಮಿತಗೊಳಿಸಿತ್ತು. ಅಕ್ಟೋಬರ ೨೦೨೧ ರಲ್ಲಿ ತಪಾಸಣೆ ನಡೆಸಿದ ಬಳಿಕ ಆ ಕ್ಷೇತ್ರವನ್ನು ೫೦ ಕಿ.ಮೀ ವರೆಗೆ ಹೆಚ್ಚಿಸಲಾಗಿದೆ. ಕೆಲವು ರಾಜ್ಯಗಳು ಇದಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದವು.

೨. ಕೇಂದ್ರ ಗೃಹಸಚಿವಾಲಯದ ಓರ್ವ ಹಿರಿಯ ಅಧಿಕಾರ, ಜನಸಂಖ್ಯೆಯಲ್ಲಿ ಇಷ್ಟು ದೊಡ್ಡ ಬದಲಾವಣೆಯು ಕೇವಲ ಜನಸಂಖ್ಯೆ ಹೆಚ್ಚಳದ ಅಂಶವಲ್ಲ. ಇದು ಭಾರತದಲ್ಲಿರುವ ನುಸುಳುಖೋರರ ಹೊಸ ಸಂಚು ಆಗಿರಬಹುದು. ಆದ್ದರಿಂದ ರಾಷ್ಟ್ರೀಯ ಸುರಕ್ಷತೆಯ ಅರಿವು ಇಟ್ಟುಕೊಂಡು ಈಗಿನಿಂದಲೇ ಅಧಿಕ ಸಿದ್ಧತೆ ಮಾಡಬೇಕಾಗಿದೆ ಎಂದು ಹೇಳಿದರು.

ಉತ್ತರಪ್ರದೇಶ ಪೊಲೀಸರ ವರದಿಯ ಮಾಹಿತಿ

ಅ. ಉತ್ತರಪ್ರದೇಶದ ನೇಪಾಳ ಗಡಿಗೆ ತಾಗಿರುವ ಪಿಲೀಭೀತ, ಖೇರಿ, ಮಹಾರಾಜಗಂಜ, ಬಲರಾಮಪೂರ ಮತ್ತು ಬಹರೈಚ ಈ ೫ ಜಿಲ್ಲೆಗಳಲ್ಲಿ ೨೦೧೧ ರಲ್ಲಿ ರಾಷ್ಟ್ರೀಯ ಸರಾಸರಿ ಅಂದಾಜಿಗಿಂತ ಮುಸಲ್ಮಾನರ ಜನಸಂಖ್ಯೆಯಲ್ಲಿ ಶೇ. ೨೦ಕ್ಕಿಂತ ಅಧಿಕ ಹೆಚ್ಚಳವಾಗಿದೆ.

ಆ. ಈ ೫ ಜಿಲ್ಲೆಗಳಲ್ಲಿ ೧ ಸಾವಿರಕ್ಕಿಂತ ಹೆಚ್ಚು ಗ್ರಾಮಗಳು ನೆಲೆಸಿವೆ. ಇದರಲ್ಲಿ ೧೧೬ ಗ್ರಾಮಗಳಲ್ಲಿ ಮುಸಲ್ಮಾನರ ಜನಸಂಖ್ಯೆ ಈಗ ಶೇ. ೫೦ಕ್ಕಿಂತ ಹೆಚ್ಚಾಗಿದೆ. ಮುಸಲ್ಮಾನರ ಜನಸಂಖ್ಯೆ ಶೇ. ೩೦ ರಿಂದ ೫೦ ರಷ್ಟು ಹೆಚ್ಚಳವಾಗಿರುವ ಒಟ್ಟು ೩೦೩ ಗ್ರಾಮಗಳಿವೆ.

 

ಸಂಪಾದಕೀಯ ನಿಲುವು

ಇಷ್ಟು ಪ್ರಮಾಣದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿರುವಾಗ ಪೊಲೀಸರು, ಸರಕಾರ ಮತ್ತು ಗುಪ್ತಚರ ಇಲಾಖೆ ಮಲಗಿತ್ತೇ ? ಈಗಲಾದರೂ ಇದರ ಮೇಲೆ ನಿಯಂತ್ರಣ ಸಾಧಿಸಿ ದೇಶದ ಸುರಕ್ಷತೆಯ ಕಾಳಜಿಯನ್ನು ವಹಿಸಲಾಗುವುದೇ ?