ತಲೆಯ ಮೇಲೆ ಕೇಸರಿ ಫೆಟಾ ಕಟ್ಟಿ ಗೋರಿಯ ಮೇಲೆ ದಾಳಿ ಮಾಡಿದ ಇಬ್ಬರು ಮುಸ್ಲಿಮರು !

ಜಿಲ್ಲೆಯಲ್ಲಿ ಕಾವಡ ಯಾತ್ರೆ ವೇಳೆ ಗಲಭೆ ಎಬ್ಬಿಸುವ ಸಂಚು ಬಯಲು !

ಬಿಜ್ನೋರ್ (ಉತ್ತರ ಪ್ರದೇಶ) – ಜಿಲ್ಲೆಯ ಶೇರ್ಕೋಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಿಂದೂಗಳ ವೇಷ ಧರಿಸಿ ೩ ಮಜಾರಗಳ (ಮುಸ್ಲಿಂ ಗೋರಿ) ಮೇಲೆ ದಾಳಿ ಮಾಡಿ ಕೋಮು ಗಲಭೆ ಸೃಷ್ಟಿಸಲು ಮತಾಂಧರು ನಡೆಸಿದ ಪ್ರಯತ್ನವನ್ನು ಸ್ಥಳೀಯರು ವಿಫಲಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮೊಹಮ್ಮದ್ ಆದಿಲ್ ಮತ್ತು ಮೊಹಮ್ಮದ್ ಕಮಾಲ್ ಎಂಬ ಇಬ್ಬರು ಸಹೋದರರನ್ನು ಬಂಧಿಸಿದ್ದಾರೆ.

೧. ಮುಹಮ್ಮದ್ ಆದಿಲ್ ಮತ್ತು ಮುಹಮ್ಮದ್ ಕಮಾಲ್ ಅವರು ಮಜಾರನ್ನು ಧ್ವಂಸಗೊಳಿಸಿದರು ಮತ್ತು ಅದರ ಮೇಲಿನ ಚಾದರ ಮತ್ತು ಪರದೆಗಳನ್ನು ಸುಟ್ಟುಹಾಕಿದರು.

೨. ಈ ಘಟನೆ ನಡೆಯುತ್ತಿರುವಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪೊಲೀಸ್ ಅಧೀಕ್ಷಕ ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ಹಿಡಿದರು.

೩. ಪೊಲೀಸರು ಕೂಲಂಕುಷವಾಗಿ ವಿಚಾರಣೆ ನಡೆಸುತ್ತಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಕೃತ್ಯದ ಹಿಂದಿನ ನಿಖರವಾದ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ‘ಈ ಇಬ್ಬರು ಸಹೋದರರು ಸಿಕ್ಕಿ ಬೀಳದಿದ್ದರೆ ಹಿಂದೂಗಳ ವಿರುದ್ಧ ಹಿಂಸಾಚಾರ ನಡೆಯುತ್ತಿತ್ತು’, ಎಂಬ ಆತಂಕ ವ್ಯಕ್ತಪಡಿಸಲಾಗುತ್ತಿದೆ.

೪. ಇಡೀ ಘಟನೆಯನ್ನು ವಿವರಿಸಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ ಕುಮಾರ ಇವರು, ಶೇರ್ಕೋಟ್ ಪೊಲೀಸರು ದೊಡ್ಡ ಘಟನೆ ಸಂಭವಿಸದಂತೆ ತಡೆದಿದ್ದಾರೆ. ಪೊಲೀಸರಿಗೆ ಜುಲೈ ೨೪ ರಂದು ಸಂಜೆ ೫ ಗಂಟೆ ಸುಮಾರಿಗೆ ‘ಜಲಾಲ್ ಶಾ ಮಜಾರ್ ಧ್ವಂಸ ಮಾಡಿ ಚಾದರನ್ನು ಸುಟ್ಟು ಹಾಕಲಾಗಿದೆ’ ಎಂಬ ಮಾಹಿತಿ ಸಿಕ್ಕಿತ್ತು. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಪೊಲೀಸರು ತನಿಖೆ ನಡೆಸುವಷ್ಟರಲ್ಲಿ ಅದೇ ಠಾಣೆಯ ಗಡಿಯಲ್ಲಿನ ಭೂರೇಶಹಾ ಮಜಾರ್ ಧ್ವಂಸಗೊಳಿಸಿರುವುದು ವರದಿಯಾಗಿದೆ. ಪೊಲೀಸರು ಅಲ್ಲಿಗೆ ಆಗಮಿಸಿ ಅಲ್ಲಿಯೂ ಕ್ರಮ ಕೈಗೊಂಡರು. ಆರೋಪಿ ಆದಿಲ್ ಮತ್ತು ಕಮಾಲ್ ಇಬ್ಬರೂ ತಲೆಗೆ ಕೇಸರಿ ಬಣ್ಣದ ಪೇಟ ಕಟ್ಟಿಕೊಂಡಿದ್ದರು. ಕಾವಡ ಯಾತ್ರೆಯ ಸಂದರ್ಭದಲ್ಲಿ ಇಂತಹ ಘಟನೆಯನ್ನು ಹುಟ್ಟುಹಾಕಿ ಜಿಲ್ಲೆಯ ವಾತಾವರಣವನ್ನು ಹಾಳು ಮಾಡಲು ಯತ್ನಿಸುತ್ತಿದ್ದರು.

ಸಂಪಾದಕೀಯ ನಿಲುವು

ಇದು ಹಿಂದೂಗಳಿಗೆ ಅಪಾಯಕಾರಿ ಘಟನೆಯಾಗಿದೆ ! ಹಿಂದೂಗಳನ್ನು ಹಿಂಸಾಚಾರಿಗಳೆಂದು ದರ್ಶಿಸಿ ಮುಸ್ಲಿಮರು ಹಿಂದೂಗಳ ವಿರುದ್ಧ ಹಿಂಸೆಯನ್ನು ಮಾಡಲು ಪ್ರಚೋದಿಸುವ ಪ್ರಯತ್ನವಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಯಶಸ್ವಿಯಾದರೆ, ಹಿಂದೂಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವೇ ? ಇದಕ್ಕಾಗಿ ಹಿಂದೂಗಳು ಸ್ವರಕ್ಷಣೆಯ ತರಬೇತಿಯನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !