ಪ್ರತಿದಿನ ಶಿವಮಂದಿರದ ಸ್ವಚ್ಛತೆ ಮಾಡುತ್ತಾರೆ !
ಬಾಗಪಾತ(ಉತ್ತರ ಪ್ರದೇಶ) – ಇಲ್ಲಿಯ ಬಾಬು ಖಾನ ಕಳೆದ ೫ ವರ್ಷಗಳಿಂದ ಕಾವಡ ಯಾತ್ರೆ ಮಾಡುತ್ತಿದ್ದಾರೆ. ೨೦೧೮ ರಲ್ಲಿ ಅವರು ಮೊದಲ ಬಾರಿ ಕಾವಡ ಯಾತ್ರೆ ಮಾಡಿದ್ದರು, ಆಗ ಅವರಿಗೆ ಸ್ಥಳೀಯ ಮುಸಲ್ಮಾನರು ಮಸೀದಿಯಿಂದ ಹೊರಗೆ ಹಾಕಿದ್ದರು; ಆದರೂ ಅವರು ಕಳೆದ ೫ ವರ್ಷಗಳಿಂದ ಕಾವಡ ಯಾತ್ರೆಯಲ್ಲಿ ಸಹಭಾಗಿ ಆಗುತ್ತಾರೆ.
Uttar Pradesh: Babu Khan participates in Kanwar Yatra for third time, was thrown out of mosque the first time but didn’t leave Islam, he sayshttps://t.co/2HFyEzyl6H
— OpIndia.com (@OpIndia_com) July 23, 2022
ಬಾಬು ಖಾನ ಅವರು, ಯಾವಾಗ ನಾನು ಮೊದಲು ಬಾರಿ ಕಾವಡ ಯಾತ್ರೆಯಲ್ಲಿ ಸಹಭಾಗಿಯಾದೆ, ಆಗ ಮನೆಯಲ್ಲಿ ಜಗಳವಾಯಿತು. ನಾನು ಕುಟುಂಬದವರನ್ನು ಹೇಗೋ ಸಮಾಧಾನ ಮಾಡಿದೆ, ಆ ಸಮಯದಲ್ಲಿ ಯಾತ್ರೆಯಿಂದ ಬಂದ ಮೇಲೆ ಮಹಾದೇವ ಮಂದಿರದಲ್ಲಿ ಜಲಾಭಿಷೇಕ ಮಾಡಿದೆ. ಮರುದಿನ ಮಸೀದಿಯಲ್ಲಿ ನಮಾಜಗಾಗಿ ಹೋದಾಗ ಅವರು ನನ್ನ ಮೇಲೆ ಬಹಿಷ್ಕಾರ ಹೇರಿ ನನ್ನನ್ನು ಹೊರಗೆ ಹಾಕಿದರು. ಈ ವಿಷಯವಾಗಿ ನಾನು ಪೊಲೀಸರಲ್ಲಿ ದೂರು ನೀಡಿದ ನಂತರ ಮಸೀದಿಯಿಂದ ಹೊರಗೆ ಹಾಕುವವರಿಗೆ ಬಂಧಿಸಲಾಯಿತು. ಈಗ ನಾನು ಬೆಳಿಗ್ಗೆ ೫ ಗಂಟೆಗೆ ಮಸೀದಿಗೆ ಹೋಗಿ ನಮಾಜ್ ಮಾಡುತ್ತೇನೆ ನಂತರ ಶಿವಮಂದಿರಕ್ಕೆ ಹೋಗಿ ಸ್ವಚ್ಛತೆ ಮಾಡುತ್ತೇನೆ. ನಾನು ಇಸ್ಲಾಂ ತ್ಯಜಿಸಿಲ್ಲ, ಆದರೆ ನನಗೆ ಕಾವಡ ಯಾತ್ರೆಯ ಮೇಲೆ ಶ್ರದ್ಧೆಯಿದೆ. ಆದ್ದರಿಂದ ನಾನು ಪ್ರತಿ ವರ್ಷ ಹರಿದ್ವಾರಕ್ಕೆ ಹೋಗುತ್ತೇನೆ ಎಂದು ಹೇಳಿದರು.
ಸಂಪಾದಕೀಯ ನಿಲುವು
|