ಹೆರಿಗೆ ನೋವಿನಲ್ಲಿ ಕಂಗಾಲಾಗಿದ್ದ ಮಹಿಳೆಯನ್ನು ಭರತಿ ಮಾಡಿಕೊಳ್ಳಲು ನಿರಾಕರಿಸಿದ ಸಫದರಜಂಗ ಆಸ್ಪತ್ರೆ

ನಡು ಬೀದಿಯಲ್ಲೇ ಮಗುವನ್ನು ಹೆತ್ತ ತಾಯಿ

ಹೊಸ ದೆಹಲಿ – ಹೆರಿಗೆ ನೋವಿನಿಂದ ಕಂಗಾಲಾಗಿದ್ದ ಓರ್ವ ಗರ್ಭವತಿ ಮಹಿಳೆಯನ್ನು ಇಲ್ಲಿಯ ಪ್ರಸಿದ್ಧ ಸಫದರಜಂಗ ಆಸ್ಪತ್ರೆಯಲ್ಲಿ ಭರತಿ ಮಾಡಿಕೊಳ್ಳಲು ನಿರಾಕರಿಸಿರುವುದರಿಂದ, ಮಹಿಳೆಯ ಪ್ರಸುತಿ ರಸ್ತೆಯಲ್ಲಿಯೇ ಮಾಡಬೇಕಾಯಿತು. ಉತ್ತರ ಪ್ರದೇಶದ ದಾದರಿಯ ೩೦ ವರ್ಷದ ಮಹಿಳೆ ಸಫದರಜಂಗ ಆಸ್ಪತ್ರೆಗೆ ಬಂದಿದ್ದಳು. ಮಹಿಳೆಗೆ ರಾತ್ರಿಯಿಂದಲೇ ಹೆರಿಗೆ ನೋವು ಶುರುವಾಗಿತ್ತು. ಆಕೆಗೆ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈ ಸಂಪೂರ್ಣ ಘಟನೆಯ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗುತ್ತಿದ್ದು ಆಸ್ಪತ್ರೆಯ ಆಡಳಿತದ ಬಗ್ಗೆ ಟೀಕೆಯ ಸುರಿಮಳೆಯಾಗುತ್ತಿದೆ.

(ಸೌಜನ್ಯ : News24)

ಈ ಘಟನೆಯ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಸಫದರಜಂಗ ಆಸ್ಪತ್ರೆಯಿಂದ ವರದಿ ಕೇಳಿದೆ, ಹಾಗೂ ದೆಹಲಿ ಮಹಿಳಾ ಆಯೋಗದಿಂದ ಆಸ್ಪತ್ರೆಯ ಆಡಳಿತಕ್ಕೆ ನೋಟಿಸ ಜಾರಿ ಮಾಡಿ ಉತ್ತರ ನೀಡುವ ಆದೇಶ ನೀಡಲಾಗಿದೆ.

ಸಂಪಾದಕೀಯ ನಿಲುವು

ಮಾನವೀಯತೆ ಇಲ್ಲದೇ ಇರುವ ಸಂಬಂಧಿತ ಆಧುನಿಕ ವೈದ್ಯ ಮತ್ತು ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.