ದ್ರೌಪದಿ ಮುರ್ಮು ಭಾರತದ ೧೫ ನೇ ರಾಷ್ಟ್ರಪತಿ !

ರಾಷ್ಟ್ರಪತಿ ದ್ರೌಪದಿ ಮುರ್ಮು

ನವ ದೆಹಲಿ – ರಾಷ್ಟ್ರಪತಿ ಸ್ಥಾನದ ಭಾಜಪ ನೇತೃತ್ವದ ಎನ್.ಡಿ.ಎ ಅಭ್ಯರ್ಥಿ ದ್ರೌಪದಿ ಮುರ್ಮು ಗೆದ್ದಿದ್ದು, ಅವರು ಭಾರತದ ೧೫ ನೇ ರಾಷ್ಟ್ರಪತಿ ಆಗಲಿದ್ದಾರೆ. ಅವರೆದುರು ಚುನಾವಣೆ ಎದುರಿಸಿದ್ದ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಅಭ್ಯರ್ಥಿ ಯಶವಂತ ಸಿಂಹ ಇವರು ಹೀನಾಯ ಸೋಲು ಕಂಡಿದ್ದಾರೆ. ೬೪ ವರ್ಷದ ಮುರ್ಮು ಇವರು ದೇಶದ ಮೊದಲ ಆದಿವಾಸಿ ಮಹಿಳೆ ರಾಷ್ಟ್ರಪತಿ ಆಗಲಿದ್ದಾರೆ. ಈ ಚುನಾವಣೆಯಲ್ಲಿ ಮತದಾನದ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಶಾಸಕರು ಅನಿರೀಕ್ಷಿತವಾಗಿ ಅನುಪಸ್ಥಿತರಾದರು.

ಈ ಚುನಾವಣೆ ಜುಲೈ ೧೮ ರಂದು ಆಗಿತ್ತು. ಮುರ್ಮು ಇವರು ಜುಲೈ ೨೫ ರಂದು ರಾಷ್ಟ್ರಪತಿ ಪದದ ಪ್ರಮಾಣ ವಚನ ಸ್ವೀಕರಿಸುವರು. ಮುರ್ಮು ಇವರ ಕಾಲಾವಧಿ ಅತ್ಯಂತ ಯಶಸ್ವಿಯಾಗುವುದು ಎಂದು ಭಾಜಪ ಅಧ್ಯಕ್ಷ ಜೆ.ಪಿ. ನಡ್ಡಾ ಇವರು ವಿಶ್ವಾಸವನ್ನು ವ್ಯಕ್ತಪಡಿಸಿದರು. ಮೂರ್ಮು ಇವರು ಮೆ ೨೦೧೫ ರಿಂದ ಜುಲೈ ೨೦೨೧ ರ ವರೆಗಿನ ಕಾಲಾವಧಿಯಲ್ಲಿ ಜಾರ್ಖಂಡಿನ ರಾಜ್ಯಪಾಲರಾಗಿದ್ದರು. ಅವರು ಮೂಲತಃ ಓಡಿಸಾ ರಾಜ್ಯದ ಮಯೂರಬಂಜ ಜಿಲ್ಲೆಯವರಾಗಿದ್ದಾರೆ. ಅವರ ವಿಜಯದ ನಂತರ ಭಾಜಪಾದ ಕಾರ್ಯಕರ್ತರು ದೇಶದಾದ್ಯಂತ ಆನಂದೋತ್ಸವ ಆಚರಿಸುತ್ತಿದ್ದಾರೆ.