ಸೀತಾಮಢಿಯಲ್ಲಿ ನೂಪುರ ಶರ್ಮಾ ಇವರ ವೀಡಿಯೋ ನೋಡಿದಕ್ಕೆ ಹಿಂದೂ ಯುವಕನ ಮೇಲೆ ಮತಾಂಧದಿಂದ ಮಾರಣಾಂತಿಕ ಹಲ್ಲೆ !

ಸೀತಾಮಢಿ (ಬಿಹಾರ) – ಇಲ್ಲಿ ಮಾರುಕಟ್ಟೆಯಲ್ಲಿ ನೂಪುರ ಶರ್ಮಾ ಇವರ ವೀಡಿಯೋ ನೋಡುತ್ತಿದ್ದ ಅಂಕಿತ ಝಾ ಎಂಬ ಯುವಕನ ಮೇಲೆ ಮತಾಂಧರು ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಂಕಿತನ ಸ್ಥಿತಿಯು ವಿಷಮವಾಗಿದ್ದು ಅವನ ಮೇಲೆ ದರಭಂಗಾದ ಆಸ್ಪತ್ರೆಯ ಅತಿ ದಕ್ಷತಾ ವಿಭಾಗದಲ್ಲಿ ಉಪಚಾರ ನಡೆಯುತ್ತಿದೆ.

ಅಂಕಿತ ಪ್ರಕಾರ ಅವನು ಅವನ ಸ್ನೇಹಿತರ ಜೊತೆ ಅಂಗಡಿಯಲ್ಲಿ ಕುಳಿತು ವಾಟ್ಸಪ್ ನೋಡುತ್ತಿದ್ದನು. ಅದರಲ್ಲಿ ನೂಪುರ ಶರ್ಮಾ ಇವರ ವೀಡಿಯೋ ಇತ್ತು. ಹಿಂದಿನಿಂದ ಕೆಲವು ಜನರು ಬಂದು ನನಗೆ ವಿಚಾರಿಸಿದರು, ನೂಪುರ ಶರ್ಮಾನ ಸಮರ್ಥಕನಾ ಎಂದು. ಅದಕ್ಕೆ ನಾನು ಹೌದು ಎಂದು ಹೇಳುತ್ತಲೇ ಅವರು ಸಿಟ್ಟಾಗಿ, ಮೂವರೂ ಮೊದಲು ಸಿಗರೇಟ್ ನ ಹೊಗೆ ನನ್ನ ಮುಖದ ಮೇಲೆ ಊದಿದರು. ಅದರ ನಂತರ ಬೈಗುಳ ಸುರಿಮಳೆ ಶುರು ಮಾಡಿದರು. ನಾನು ವಿರೋಧ ವ್ಯಕ್ತಪಡಿಸಿರುವುದರಿಂದ ಮೂವರೂ ಸೇರಿ ನನ್ನ ಸೊಂಟದ ಬಲಬದಿಗೆ ಚಾಕುವಿನಿಂದ ಇರಿದು ನನ್ನನ್ನು ಗಾಯಗೊಳಿಸಿದರು.

ಪೊಲೀಸರು ಪ್ರಕರಣ ಮುಚ್ಚಿದ ಆರೋಪ

ಈ ಪ್ರಕರಣ ಜುಲೈ ೧೬ ರಂದು ನಡೆದಿದೆ. ದೂರಿನಿಂದ ನೂಪುರ ಶರ್ಮಾ ಇವರ ಉಲ್ಲೇಖ ತೆಗೆದು ಹಾಕಿದ ನಂತರ ಪೊಲೀಸರು ಅಂಕಿತನ ಕುಟುಂಬದ ದೂರು ದಾಖಲಿಸಿಕೊಂಡರು. ಈ ಪ್ರಕರಣದಲ್ಲಿ ಪೊಲೀಸರು ನಾನಪುರ ಗ್ರಾಮದ ಗೌರ ಅಲಿಯಾಸ್ ಮಹಮದ್ ನಿಹಾಲ, ಮಹಮ್ಮದ್ ಬಿಲಾಲ್ ಸೇರಿ ಐದು ಜನರನ್ನು ಅರೋಪಿಗಳನ್ನಾಗಿ ಗುರುತಿಸಿದ್ದು, ಅದರಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಅಂಕಿತನ ಕುಟುಂಬಕ್ಕೆ ಸತತವಾಗಿ ಬೆದರಿಕೆಗಳು ಬರುತ್ತಿವೆ.

ಸಂಪಾದಕೀಯ ನಿಲುವು

ಭಾರತದ ಮುಸಲ್ಮಾನ್ ಅಸುರಕ್ಷಿತರಾಗಿದ್ದಾರೆ, ಎಂದು ಹೇಳುವ ಭಾರತದ ಜಾತ್ಯತೀತರು, ಪ್ರಗತಿಪರರು ಹಾಗೂ ಜಗತ್ತಿನ ಇಸ್ಲಾಮಿ ದೇಶಗಳು ಈಗ ಏನು ಹೇಳುವರು ?

ಹಿಂದೂಗಳು ಸ್ವಂತ ರಕ್ಷಣೆ ಮಾಡುವುದಕ್ಕಾಗಿ ಸ್ವ-ಸಂರಕ್ಷಣಾ ಪ್ರಶಿಕ್ಷಣ ಪಡೆಯುವುದು ಎಷ್ಟು ಆವಶ್ಯಕವಾಗಿದೆ ಎಂಬುವುದು ಈ ಘಟನೆಯಿಂದ ಇನ್ನಷ್ಟು ಸ್ಪಷ್ಟವಾಗಿದೆ !

ಬಿಹಾರದ ಸಂಯುಕ್ತ ಜನತಾದಳದ ಜೊತೆಗೆ ಭಾಜಪ ಅಧಿಕಾರದಲ್ಲಿ ಇರುವಾಗ ಹಿಂದೂಗಳ ಸಂದರ್ಭದಲ್ಲಿ ಈ ರೀತಿಯ ತಾರತಮ್ಯ ಆಗುವುದು ಹಿಂದೂಗಳಿಗೆ ಅಪೇಕ್ಷಿತವಾಗಿರಲಿಲ್ಲ.