ಬರೇಲಿ (ಉತ್ತರ ಪ್ರದೇಶ) – ಇಲ್ಲಿ ಕಾವಡ ಯಾತ್ರಿಕರ ಮಾರ್ಗದಲ್ಲಿ ಬಿರಿಯಾನಿ ಮತ್ತು ಮಾಂಸ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚುವ ಆದೇಶ ಪಾಲಿಕೆ ಆಡಳಿತದಿಂದ ನೀಡಲಾಗಿತ್ತು. ಆದರೂ ಕೂಡ ಕೆಲವು ಸ್ಥಳಗಳಲ್ಲಿ ಅಂಗಡಿಗಳು ತೆರೆದಿದ್ದವು. ಈ ಅಂಗಡಿಗಳನ್ನು ಮುಚ್ಚಿಸಲು ಪಾಲಿಕೆ ದಳದ ಜೊತೆಗೆ ಹೋಗಿರುವ ಭಾಜಪದ ನಾಯಕ ಅಂಕಿತ ಭಾಟಿಯಾ ಮತ್ತು ಇನ್ನೂ ಕೆಲವು ಜನರ ಮೇಲೆ ಮತಾಂಧರು ಕತ್ತಿ ಮತ್ತು ಲಾಠೀ ಕೋಲುಗಳೊಂದಿಗೆ ದಾಳಿ ಮಾಡಿದರು. ಇದರಲ್ಲಿ ಅಂಕಿತ ಭಾಟಿಯಾ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಸಿಟಿವಿಯಲ್ಲಿ ಈ ದಾಳಿಯು ಚಿತ್ರೀಕರಣ ಆಗಿದೆ. ಈ ಘಟನೆಯ ನಂತರ ಉದ್ರಿಕ್ತ ಹಿಂದೂಗಳು ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು. ಈಗ ಅಲ್ಲಿ ಶಾಂತಿ ನೆಲೆಸಿದರೂ ವಾತಾವರಣದಲ್ಲಿ ಉದ್ವಿಗ್ನತೆಯಿದೆ. ಇಲ್ಲಿಯ ರಾಮ ಜಾನಕಿ ದೇವಸ್ಥಾನದ ಹತ್ತಿರ ಈ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ೪ ಜನರನ್ನು ವಶಕ್ಕೆ ಪಡೆಯಲಾಗಿದ್ದು ಅವರ ವಿಚಾರಣೆ ನಡೆಯುತ್ತಿದೆ.
(ಸೌಜನ್ಯ : Zee News)
ಸಂಪಾದಕೀಯ ನಿಲುವು
ಕಾವಡ ಯಾತ್ರೆಯ ಮಾರ್ಗದಲ್ಲಿ ಮಾಂಸ ಅಂಗಡಿಗಳು ಮುಚ್ಚುವ ಬರೇಲಿ ಪಾಲಿಕೆಯ ಆದೇಶದ ಉಲ್ಲಂಘನೆ ! ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಭಾಜಪದ ನಾಯಕರ ಮೇಲೆ ಈ ರೀತಿಯ ದಾಳಿ ಮಾಡುವ ಧೈರ್ಯ ಮತಾಂಧರಿಗೆ ಹೇಗೆ ಬರುತ್ತದೆ? |