ಕೇಂದ್ರ ಗೃಹ ಸಚಿವಾಲಯದಿಂದ ರಾಜ್ಯಗಳಿಗೆ ಜಾಗರೂಕರಾಗಿರುವಂತೆ ಸೂಚನೆ
ಹೊಸ ದೆಹಲಿ – ಉತ್ತರ ಭಾರತದಲ್ಲಿ ಆರಂಭವಾಗಿರುವ ಕಾವಡ್ ಯಾತ್ರೆ ಮೇಲೆ ಜಿಹಾದಿಗಳು ದಾಳಿ ನಡೆಸುವ ಸಾಧ್ಯತೆಯಿದ್ದು, ಎಚ್ಚೆತ್ತುಕೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ಉತ್ತರಾಖಂಡ, ಉತ್ತರ ಪ್ರದೇಶ, ಮಧ್ಯಪ್ರದೇಶ ಮೊದಲಾದ ರಾಜ್ಯಗಳಿಗೆ ಈ ಸೂಚನೆ ನೀಡಲಾಗಿದ್ದು, ಕೂಡಲೇ ಕಾವಡ ಯಾತ್ರಿಕರ ಭದ್ರತೆಯನ್ನು ಹೆಚ್ಚಿಸುವಂತೆ ಆದೇಶವನ್ನೂ ನೀಡಲಾಗಿದೆ. ಇದರೊಂದಿಗೆ ದಾಳಿ ವೇಳೆ ರೈಲ್ವೇ ಆಡಳಿತ ಮೇಲೆಯೂ ದಾಳಿಯಾಗುವ ಸಾಧ್ಯತೆ ಇರುವುದರಿಂದ ರೈಲುಗಳ ಭದ್ರತೆಯನ್ನು ಹೆಚ್ಚಿಸುವಂತೆಯೂ ಕೋರಲಾಗಿದೆ.
ಕಾವಡ್ ಯಾತ್ರೆಯ ಸಮಯದಲ್ಲಿ, ಯಾತ್ರಾರ್ಥಿಗಳು ಹರಿದ್ವಾರ ಮತ್ತು ಋಷಿಕೇಶಕ್ಕೆ ಹೋಗಿ ಪವಿತ್ರ ಗಂಗಾಜಲವನ್ನು ತಂದು ಮನೆಯಲ್ಲಿ ಅಥವಾ ಶಿವನ ದೇವಾಲಯದಲ್ಲಿ ಅಭಿಷೇಕವನ್ನು ಮಾಡುತ್ತಾರೆ.
ಸಂಪಾದಕೀಯ ನಿಲುವುಶಿವಸೇನೆಯ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಇಂದು ಬದುಕಿದ್ದರೆ, ‘ಕಾವಡ ಯಾತ್ರಿಕರ ಮೇಲೆ ದಾಳಿಯಾದರೆ, ದೇಶದಿಂದ ಒಬ್ಬ ಹಜ್ ಯಾತ್ರಿಕನಿಗೂ ಹಜ್‌ಗೆ ಹೋಗಲು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡುತ್ತಿದ್ದರು ! |