ಕವಾಡ ಯಾತ್ರೆಯ ಮಾರ್ಗದಲ್ಲಿ ಮಾಂಸ ಮಾರಾಟ ನಿಷೇಧ !

ಉತ್ತರಪ್ರದೇಶ ಸರಕಾರದ ಆದೇಶ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ಸರಕಾರವು ಕಾವಡ ಯಾತ್ರೆಯ ಮಾರ್ಗದಲ್ಲಿನ ಮಾಂಸ ಮಾರಾಟದ ಮೇಲೆ ನಿರ್ಬಂದ ಹೇರಿದೆ. ಬರುವ ಜುಲೈ ೧೪ ರಿಂದ ಯಾತ್ರೆ ಆರಂಭವಾಗಲಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಈ ಕಾವಡ ಯಾತ್ರೆಯ ಮಾರ್ಗವನ್ನು ಸ್ವಚ್ಛಗೊಳಿಸಲು ಮತ್ತು ಅಲ್ಲಿ ಇತರ ಸೌಲಭ್ಯಗಳನ್ನು ಒದಗಿಸುವಂತೆ ಆಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರಲ್ಲಿ ಬೆಳಕು, ಪ್ರಥಮೋಪಚಾರ ಇತ್ಯಾದಿಗಳು ಒಳಗೊಂಡಿದೆ.

ಈ ಕುರಿತು ಸ್ಥಳಿಯ ಆಡಳಿತಾಧಿಕಾರಿಗಳು, ಮಾಂಸ ಮಾರಾಟಗಾರರನ್ನು ಸಂಪರ್ಕಿಸಿ ‘ಯಾತ್ರೆಯ ವೇಳೆ ಮಾಂಸ ಮಾರಾಟ ಮಾಡಕೂಡದೆಂದು’, ಹೇಳಲಾಗುತ್ತಿದೆ. ವ್ಯಾಪಾರಿಗಳಿಂದ ಕೂಡ ನಮಗೆ ಮಾಂಸ ಮಾರಾಟ ಮಾಡುವದಿಲ್ಲವೆಂಬ ಆಶ್ವಾಸನೆ ನೀಡಿದ್ದಾರೆ.

ಕವಾಡ ಯಾತ್ರೆ ಎಂದರೇನು ?

* ಉತ್ತರಪ್ರದೇಶದ ಭಕ್ತರು ಕವಾಡ ಯಾತ್ರೆಗೆ ಉತ್ತರಾಖಂಡದ ಹರಿದ್ವಾರಕ್ಕೆ ತೆರಳಿ ಅಲ್ಲಿಂದ ಕವಾಡದ ಮೂಲಕ ಗಂಗಾ ಜಲವನ್ನು ತಮ್ಮ ಊರಿಗೆ ತಂದು ಶಿವನ ದೆವಸ್ಥಾನ ಹಾಗೂ ಮನೆಯಲ್ಲಿ ಅಭಿಷೇಕ ಮಾಡುತ್ತಾರೆ.