ನೂಪುರ ಶರ್ಮಾರವರ ನಾಲಿಗೆಯನ್ನು ಕತ್ತರಿಸಿದವರಿಗೆ ೨ ಕೋಟಿ ರೂಪಾಯಿ ನೀಡುವುದಾಗಿ ಕಟ್ಟರತಾವಾದಿ ಮುಸಲ್ಮಾನನ ಘೋಷಣೆ !

ಮೇವಾತ (ಹರಿಯಾಣಾ) – ಇಲ್ಲಿನ ಒಂದು ಕಟ್ಟರತಾವಾದಿ ಮುಸಲ್ಮಾನನು ಭಾಜಪದ ಮಾಜಿ ವಕ್ತಾರರಾದ ನೂಪುರ ಶರ್ಮಾರವರ ನಾಲಿಗೆ ಕತ್ತರಿಸುವವರಿಗೆ ೨ ಕೋಟಿ ರೂಪಾಯಿಗಳ ಬಕ್ಷೀಸು ನೀಡುವುದಾಗಿ ಘೋಷಿಸಿದ್ದಾನೆ. ಓರ್ವ ಪತ್ರಕರ್ತನಿಗೆ ಸಂದರ್ಶನ ನೀಡುವಾಗ ಈ ಕಟ್ಟರತಾವಾದಿ ಮುಸಲ್ಮಾನನು ಈ ಬೆದರಿಕೆಯ ಹೇಳಿಕೆ ನೀಡಿದ್ದು ಅದರ ವಿಡಿಯೋ ಪ್ರಸಾರಿತವಾಗಿದೆ. ಅನಂತರ ಸಂಬಂಧಿತ ಕಟ್ಟರತಾವಾದಿ ಮುಸಲ್ಮಾನನು ಪತ್ರಕರ್ತನಿಗೆ ‘ನೀನು ನೂಪುರ ಶರ್ಮಾರವರ ನಾಲಿಗೆಯನ್ನು ಏಕೆ ಕತ್ತರಿಸುವುದಿಲ್ಲ ? ನನ್ನ ಕರೆಗೆ ನೀನು ಏಕೆ ಪ್ರತಿಕ್ರಿಯೆ ನೀಡುತ್ತಿಲ್ಲ ?’ ಎಂದು ಕಿರುಚಾಡುತ್ತಿರುವುದು ಕಂಡುಬರುತ್ತಿದೆ. ಈ ವಿಡಿಯೋ ಪ್ರಸಾರಿತವಾದ ನಂತರ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ. ಈ ಕಟ್ಟರತಾವಾದಿಯ ಹೆಸರು ಇನ್ನೂ ಬೆಳಕಿಗೆ ಬಂದಿಲ್ಲ.

ಸಂಪಾದಕೀಯ ನಿಲುವು

ಇದು ಭಾರತದಲ್ಲಿನ ಕಟ್ಟರತಾವಾದಿ ಮುಸಲ್ಮಾನರಿಗೆ ಕಾನೂನಿನ ಭಯವಿಲ್ಲದಿರುವುದರ ಉದಾಹರಣೆಯಾಗಿದೆ. ದೇಶದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಡಿಸುವ ಇಂತಹವರಿಗೆ ಕಠೋರ ಶಿಕ್ಷೆಯಾಗುವುದು ಆವಶ್ಯಕವಾಗಿದೆ !