ನೂಪುರ ಶರ್ಮಾ ಅವರನ್ನು ವೇಶ್ಯೆ ಎನ್ನುವ ಕಾಂಗ್ರೆಸ್ಸಿನ ಬೆಂಬಲಿಗ ಜೋಸ್ನಾ ಧನಖಡ್ ಇವರ ಟ್ವೀಟ್ ಟ್ವಿಟರ್ ನಿಂದ ತೆರವು !

ನವದೆಹಲಿ – ಕಾಂಗ್ರೆಸ್ಸಿನ ಸಮಾರ್ಥಕ ಮತ್ತು ಕಥಿತ ಸಾಮಾಜಿಕ ಕಾರ್ಯಕರ್ತೆ ಜೋಸ್ನಾ ಧನಖಡ್ ಇವರು ನೂಪುರ ಶರ್ಮಾ ಇವರ ವಿರುದ್ಧ ಮಾಡಿರುವ ಟ್ವೀಟ್ ನಲ್ಲಿ ಅವರನ್ನು ‘ವೇಶ್ಯೆ’ ಎನ್ನುತ್ತ ‘ಅವರ ಸಾವಿನ ದಾರಿ ಕಾಯುತ್ತಿದ್ದೇನೆ’, ಎಂದು ಬರೆದ್ದಿದ್ದರು. ಅದಕ್ಕೆ ವಿರೋಧ ಆದ ನಂತರ ಕೂಡ ಅವರು ಟ್ವೀಟ್ ತೆಗದಿರಲಿಲ್ಲ. ಆದರೆ ಟ್ವಿಟರ್ ಈಗ ಟ್ವೀಟ್ ತೆಗೆದು ಹಾಕಿದ್ದಾರೆ. ಕಾಂಗ್ರೆಸ್ ನಾಯಕ ಮುಕೇಶ ಶರ್ಮಾ ಅವರು ‘ನೂಪುರ ಶರ್ಮಾ ಇವರು ಕ್ಷಮೆ ಕೇಳಬೇಕು’, ಎಂದು ಟ್ವೀಟ್ ಮಾಡಿದ್ದರು. ಅದರ ಬಗ್ಗೆ ಜೋಸ್ನಾ ಧನಾಖಡ್ ಇವರು ಮೇಲಿನ ಟ್ವೀಟ್ ಮಾಡಿದ್ದರು.

ಸಂಪಾದಕೀಯ ನಿಲುವು

ಟ್ವಿಟರ್ ನಿಂದ ಟ್ವೀಟ್ ತೆರವುಗೊಳಸಲಾಗಿದ್ದರೂ, ಪೊಲೀಸರು ಸ್ವತಃ ಜೋಸ್ನಾ ಧನಖಡ್ ಇವರನ್ನು ಆಕ್ಷೇಪಾರ್ಹ ಟಿಪ್ಪಣಿ ಮಾಡಿದ್ದಕ್ಕಾಗಿ ಬಂಧಿಸಬೇಕು. ಆಗ ಮಾತ್ರ ಇತರರಿಗೂ ಭಯ ಹುಟ್ಟುವುದು !