ಉತ್ತರಪ್ರದೇಶದ ಮೈನಪುರಿಯಲ್ಲಿ ದ್ವಾಪರ ಯುಗದ ಆಯುಧಗಳು ಪತ್ತೆ!

ಮೈನಪುರಿ (ಉತ್ತರಪ್ರದೇಶ) : ಇಲ್ಲಿ ಗಣೇಶಪುರ ಗ್ರಾಮದ ಹೊಲವೊಂದರಲ್ಲಿ ೪೦೦೦ ವರ್ಷಗಳ ಹಳೆಯ ಆಯುಧಗಳ ಸಂಗ್ರಹ ಪತ್ತೆಯಾಗಿದೆ. ಈ ಆಯುಧಗಳನ್ನು ತಾಮ್ರದಿಂದ ತಯಾರಿಸಲಾಗಿದ್ದು, ೪ ಅಡಿ ಉದ್ದವಿವೆ. ಇವುಗಳಲ್ಲಿ ಕತ್ತಿಗಳು, ನಕ್ಷತ್ರ ಮೀನಿನ ಆಕಾರದ ಆಯುಧಗಳು ಮತ್ತು ಕೆಲವು ಈಟಿಯಂತಹ ಆಯುಧಗಳಿವೆ. ಪುರಾತತ್ವ ಇಲಾಖೆಯು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಈ ಆಯುಧಗಳು ದ್ವಾಪರ ಯುಗಕ್ಕೆ ಸೇರಿದವು ಎಂದು ತಜ್ಞರು ಹೇಳುತ್ತಾರೆ.

೧. ಗಣೇಶಪುರ ಗ್ರಾಮದ ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಗದ್ದೆಯಲ್ಲಿ ಶಸ್ತ್ರಾಸ್ತ್ರಗಳ ದಾಸ್ತಾನು ಪತ್ತೆಯಾಗಿದೆ. ‘ಈ ಆಯುಧಗಳು ಚಿನ್ನ ಅಥವಾ ಬೆಳ್ಳಿಯಿಂದ ಮಾಡಿರಬೇಕು’ ಎಂದು ಭಾವಿಸಿ ಮನೆಗೆ ತೆಗೆದುಕೊಂಡು ಹೋದ; ಆದರೆ ಮಾಹಿತಿ ಪಡೆದ ಕೂಡಲೆ ಗ್ರಾಮಸ್ಥರು ಪೊಲೀಸರಿಗೆ ಹಾಗೂ ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

೨. ಪುರಾತತ್ವ ಇಲಾಖೆ ಅಧಿಕಾರಿ ಭುವನ ವಿಕ್ರಮ ಮಾತನಾಡಿ, ಹರಪ್ಪಾ ಕಾಲದಲ್ಲಿ ಕಂಚಿನ ಲೋಹದಿಂದ ಆಯುಧಗಳನ್ನು ತಯಾರಿಸಲಾಗುತ್ತಿತ್ತು. ಆದ್ದರಿಂದ ಗಣೇಶಪುರ ಗ್ರಾಮದಲ್ಲಿ ಕಂಡುಬರುವ ಆಯುಧಗಳು ತಾಮ್ರದ ಶಿಲಾಯುದೊಂದಿಗೆ (ಚಾಲ್ಕೋಲಿಥಿಕ್) ನೇರ ಸಂಪರ್ಕವನ್ನು ಹೊಂದಿರುವಂತೆ ಕಂಡುಬರುತ್ತವೆ.

೩. ಪುರಾತತ್ವ ಇಲಾಖೆಯ ವಕ್ತಾರ ವಸಂತ ಸ್ವರ್ಣಕರ ಅವರು ಆಯುಧಗಳು ಕ್ರಿ.ಪೂ. ೨೦೦೦ ರಿಂದ ೧೮೦೦ ಹಳೆಯದಾಗಿವೆ. ಈ ಅವಧಿಯಲ್ಲಿ ಕುಂಬಾರಿಕೆಗೆ ಕೆಂಪು (ಜಾಜಿ ಮಣ್ಣು) ಬಣ್ಣ ಬಳಿಯಲಾಗುತ್ತತ್ತು. ಬಾಗಪತನ ನಸೌಲಿ, ಮುರಾಬಾದನ ಮದರಪುರ, ಮತ್ತು ಸಹರಾನಪುರದ ಸಕಟಪುರದಿಂದ ಪಡೆಯಲಾದ ಮಾದರಿಗಳನ್ನು ‘ಕಾರ್ಬನ ಡೇಟಿಂಗ’ ಪರಿಕ್ಷೆಗೆ ಒಳಪಡಿಸಲಾಗಿತ್ತು. ಆಗ ಅವು ೪೦೦೦ ವರ್ಷಗಳಷ್ಟು ಹಳೆಯದಾಗಿವೆ ಎಂದು ತಿಳಿಯಿತು. ಈ ಆಯುಧಗಳು ಭದ್ರತಾ ಸಿಬ್ಬಂದಿಯವರಿಗೆ ಸೇರಿದ್ದು, ಸಾಮಾನ್ಯ ಜನರಿಗೆ ಸೇರಿರಲಿಕ್ಕಿಲ್ಲ ಎಂದರು.