ಮುಸ್ಲಿಂ ಯುವಕರು ಅಗ್ನಿವೀರರಾಗಬೇಕು ! – ಮುಸ್ಲಿಂ ಸಂಘಟನೆಯ ಮನವಿ

ಇಮಾಮಗಳ ಮೂಲಕ ಮನವಿ!

ಕಾನಪುರ (ಉತ್ತರಪ್ರದೇಶ) – ಇಲ್ಲಿಯ ‘ಅಸೊಸಿಯೇಶನ್ ಆಫ್ ಮುಸ್ಲಿಂ ಪ್ರೊಫೆಶನಲ್ಸ್’ ಸಂಘಟನೆಯು ಮುಸ್ಲಿಂ ಯುವಕರಿಗೆ ‘ಅಗ್ನಿಪಥ’ ಯೋಜನೆಯ ಮೂಲಕ ಸೇನೆಗೆ ಸೇರಿ ಅಗ್ನಿವೀರರಾಗಬೇಕು ಎಂದು ಮನವಿ ಮಾಡಿದೆ.

೧. ಸಂಘಟನೆಯ ಪೋಷಕ ಶಾಹಿದ ಕಮ್ರಾನ ಮಾತನಾಡಿ ಮುಸ್ಲಿಂ ಯುವಕರು ಅಗ್ನಿವೀರ ಅರ್ಜಿ ಸಲ್ಲಿಸುವ ಮೂಲಕ ದೇಶ ಸೇವೆ ಮಾಡುವಂತೆ ಮನವಿ ಮಾಡಿದ್ದಾರೆ. ಇದಕ್ಕಾಗಿ ಮಸೀದಿಯ ಇಮಾಮಗಳ ನೆರವು ಪಡೆಯಲಾಗುತ್ತಿದೆ. ಇಮಾಮರು ಮನವಿ ಸಲ್ಲಿಸಿದರೆ ಅದು ಹೆಚ್ಚು ಪರಿಣಾಮ ಬೀರುತ್ತದೆ.

೨. ಕಾನಪುರ ನಿವಾಸಿ ಖಾಜಿ ಸಗೀರ ಅಲಮ ಹಬೀಬಿ ಮಾತನಾಡಿ ದೇಶ ಸೇವೆ ಮಾಡುವುದು ಪ್ರತಿಯೊಬ್ಬ ಮುಸಲ್ಮಾನನ ಕರ್ತವ್ಯ ಎಂದಿದ್ದಾರೆ.

೩. ಮೌಲಾನಾ ತೌಕೀರ ರಜಾ ಕೂಡಾ ಮುಸ್ಲಿಂ ಯುವಕರು ಅಗ್ನಿವೀರ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದರು. “ದೇಶಕ್ಕೆ ಸೇವೆ ಸಲ್ಲಿಸಲು ಇದೊಂದು ಉತ್ತಮ ಅವಕಾಶ” ಎಂದರು.

ಸಂಪಾದಕೀಯ ನಿಲುವು

ಈ ಪ್ರಕಾರ ಸೈನ್ಯದಲ್ಲಿ ಭರ್ತಿಯಾದವರು ಭಾರತದ ಪರವಾಗಿ ಎಷ್ಟು ಹೊರಾಡುತ್ತಾರೆ ಮತ್ತು ಶತ್ರು ದೇಶಗಳ ಪರವಾಗಿ ಎಷ್ಟು ಹೊರಾಡುತ್ತಾರೆ ಅಥವಾ ನಿವೃತ್ತರಾದ ನಂತರ ಹಿಂಸಾಚಾರದಲ್ಲಿ ಭಾಗವಹಿಸಿದರೆ, ಅದನ್ನು ತಡೆಯುವವರು ಯಾರು?

೧೯೪೮ರಲ್ಲಿ ಕಾಶ್ಮೀರದ ಮೇಲೆ ಪಾಕಿಸ್ತಾನ ದಂಡೆತ್ತಿ ಬಂದಾಗ ಕಾಶ್ಮೀರದ ಮಹಾರಾಜ ಹರಿಸಿಂಗ ಅವರ ಸೇನೆಯಲ್ಲಿದ್ದ ಮುಸ್ಲಿಂ ಸೈನಿಕರು ಪಾಕಿಸ್ತಾನಕ್ಕೆ ಹೋಗಿ ಸೇರಿದರು ಇದು ಮರೆಯಲಾಗದ ಇತಿಹಾಸ!