ಹತ್ತನೇಯ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ವಿವಿಧ ಪ್ರಕಾರಗಳ ಜಿಹಾದ್‌ಗಳನ್ನು ಕೊನೆಗಾಣಿಸುವಂತೆ ಹಿಂದೂಗಳಿಗೆ ಕರೆ !

‘ಕೋಟೆಗಳನ್ನು ದರ್ಗಾಗಳಾಗಿ ಪರಿವರ್ತಿಸಬಾರದು’ ಎಂಬುದಕ್ಕಾಗಿ ಹಿಂದೂಗಳು ಸಂಘಟಿತರಾಗಿ ಕಾರ್ಯ ಮಾಡುವುದು ಆವಶ್ಯಕವಾಗಿದೆ ! – ಮನೋಜ ಖಾಡ್ಯೆ, ಸಮನ್ವಯಕರು, ಪಶ್ಚಿಮ ಮಹಾರಾಷ್ಟ್ರ ಮತ್ತು ಗುಜರಾತ ರಾಜ್ಯ, ಹಿಂದೂ ಜನಜಾಗೃತಿ ಸಮಿತಿ

ಶ್ರೀ ಮನೋಜ ಖಾಡ್ಯೆ

ರಾಮನಾಥಿ ೧೬ ಜೂನ್ (ವಾರ್ತೆ.) – ಕೋಟೆ-ಕೊತ್ತಲಗಳ ಮಹತ್ವ ಕೇವಲ ಐತಿಹಾಸಿಕ ಮಾತ್ರವಲ್ಲ ಅವು ನಮ್ಮ ಸಂಸ್ಕೃತಿಯ ಸೊತ್ತಾಗಿವೆ. ಧರ್ಮ ಮತ್ತು ರಾಷ್ಟ್ರದ ಕಾರ್ಯವನ್ನು ಮಾಡುವ ಪ್ರೇರಣೆ ಅವುಗಳಿಂದ ಸಿಗುತ್ತದೆ; ಆದರೆ ಪುರಾತತ್ವ ಇಲಾಖೆಯ ದುರ್ಲಕ್ಷದಿಂದ ಕೋಟೆಗಳನ್ನು ಷಡ್ಯಂತ್ರಪೂರ್ವಕ ಇಸ್ಲಾಮಿಕರಣ ಮಾಡಲಾಗುತ್ತಿದೆ. ಕೋಟೆಯ ಮೇಲೆ ಮೊದಲು ಗೋರಿಗಳನ್ನು ಕಟ್ಟಲಾಗುತ್ತದೆ. ಅನಂತರ ಅದರ ಮೇಲೆ ಚಾದರ ಹೊದಿಸಲಾಗುತ್ತದೆ. ಕೆಲವು ತಿಂಗಳ ನಂತರ ಆ ಸ್ಥಳದಲ್ಲಿ ಉರುಸು ಆಚರಿಸಲಾಗುತ್ತದೆ. ಉರುಸ್ ಆಚರಿಸುವ ಸಂಪ್ರದಾಯವು ಪುರಾತನವಾಗಿದೆ ಎಂಬ ಭ್ರಮೆಯನ್ನುಂಟು ಮಾಡಿ ಅನಂತರ ಅಲ್ಲಿ ದರ್ಗಾ ಕಟ್ಟಿ ಧಾರ್ಮಿಕ ಸ್ಥಾನವನ್ನು ನಿರ್ಮಿಸಲಾಗುತ್ತದೆ. ಹಿಂದವೀ ಸ್ವರಾಜ್ಯದ ನಿರ್ಮಾಣದಲ್ಲಿ ಹೆಸರಿಲ್ಲದ ತಥಾಕಥಿತ ಫಕೀರರ ಹೆಸರಿನಲ್ಲಿ ಅನೇಕ ದರ್ಗಾಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಾಪಗಡದ ತಪ್ಪಲಲ್ಲಿರುವ ಅಫಜಲಖಾನ್‌ನ ಗೋರಿಯನ್ನು ಕೆಡಹುವಂತೆ ನ್ಯಾಯಾಲಯವು ಆದೇಶವನ್ನು ನೀಡಿದ್ದರೂ ಅದರ ವಿರುದ್ಧ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಠಾಣೆ ಜಿಲ್ಲೆಯ ದುರ್ಗಾಡಿ ಕೋಟೆಯ ಮೇಲಿನ ಪುರಾತನ ದುರ್ಗಾದೇವಿ ದೇವಾಲಯವು ಮಸೀದಿ ಆಗಿದೆ ಎಂದು ಮುಸಲ್ಮಾನರು ಪ್ರತಿಪಾದಿಸಿದ್ದಾರೆ. ಕೋಟೆಯ ಮೇಲೆ ಈದಗಾಹ್ ಇರುವುದಾಗಿ ಹೇಳಿ ಅಲ್ಲಿ ನಮಾಜ್ ಓದಲು ಆರಂಭಿಸಿದ್ದಾರೆ. ಆದುದರಿಂದ ದುರ್ಗದ ಅರ್ಧ ಭಾಗದಲ್ಲಿ ಹಿಂದೂಗಳು ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಈ ರೀತಿ ಮಲಂಗಗಡ, ಲೋಕಗಡ, ಕುಲಾಬಾ ಗಡ, ಮಾಹಿಮಗಡ, ವಿಶಾಲಗಡ, ಶಿವಡಿ ಮುಂತಾದ ಕೋಟೆಗಳನ್ನು ಇಸ್ಲಾಮ ಅತಿಕ್ರಮಿಸಿದೆ. ಕೋಟೆಗಳು ದರ್ಗಾಗಳಾಗಿ ರೂಪಾಂತರಗೊಳ್ಳುವುದನ್ನು ನೋಡುವಂತಾಗಬಾರದು ಎಂದಾದರೆ, ಹಿಂದೂಗಳು ಅವರ ವಿರುದ್ಧ ಸಂಘಟಿತರಾಗಿ ಕಾರ್ಯ ಮಾಡುವುದು ಆವಶ್ಯಕವಾಗಿದೆ, ಎಂಬ ಕರೆಯನ್ನು ಹಿಂದೂ ಜನಜಾಗೃತಿ ಸಮಿತಿಯ ಪಶ್ಚಿಮ ಮಹಾರಾಷ್ಟ್ರ ಮತ್ತು ಗುಜರಾತ ರಾಜ್ಯದ ಸಮನ್ವಯಕರಾದ ಶ್ರೀ. ಮನೋಜ ಖಾಡ್ಯೆ ಇವರು ನೀಡಿದರು. ಹತ್ತನೇಯ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ೧೫ ಜೂನ್ ಈ ದಿನದಂದು ‘ಮಹಾರಾಷ್ಟ್ರದ ಐತಿಹಾಸಿಕ ಕೋಟೆ-ಕೊತ್ತಲಗಳ ಮೇಲೆ ಇಸ್ಲಾಮಿಕ ಅತಿಕ್ರಮಣ’ ಈ ಬಗ್ಗೆ ಅವರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ವೇದಿಕೆಯ ಮೇಲೆ ಪಾಲಘರದ ‘ಹಿಂದೂ ಗೋವಂಶ ರಕ್ಷಾ ಸಮಿತಿ’ಯ ಶ್ರೀ. ದಿಪ್ತೇಶ ಪಾಟೀಲ, ಪಾಲಘರದ ‘ಹಿಂದೂ ಟಾಸ್ಕ್ ಫೋರ್ಸ್’ನ ಸಂಸ್ಥಾಪಕರಾದ ನ್ಯಾಯವಾದಿ ಖುಶ ಖಂಡೆಲವಾಲ ಮತ್ತು ಹಿಂದೂ ಜನಜಾಗೃತಿ ಸಮಿತಿಯ ತೆಲಂಗಾಣದ ಸಮನ್ವಯಕರಾದ ಶ್ರೀ. ಚೇತನ ಜನಾರ್ದನ ಇವರು ಉಪಸ್ಥಿತರಿದ್ದರು.

ಗೋಹತ್ಯೆ ನಿಷೇಧ ಕಾನೂನನ್ನು ಸರಿಯಾಗಿ ಅಧ್ಯಯನ ಮಾಡಿ ಗೋರಕ್ಷಣೆ ಮಾಡುವುದು ಆವಶ್ಯಕ ! – ದಿಪ್ತೇಶ ಪಾಟೀಲ, ಸಮನ್ವಯಕರು, ಹಿಂದೂ ಗೋವಂಶ ರಕ್ಷಾ ಸಮಿತಿ, ಪಾಲಘರ

ಶ್ರೀ ದಿಪ್ತೇಶ ಪಾಟೀಲ

ದೇಶಿ ಗೋತಳಿಗಳು ಹೆಚ್ಚು ಹಾಲನ್ನು ನೀಡುತ್ತವೆ; ಆದರೆ ಆ ಬಗ್ಗೆ ‘ಭಾರತದಲ್ಲಲ್ಲ, ಆದರೆ ಬ್ರಾಝಿಲ್‌ನಲ್ಲಿ ಸಂಶೋಧನೆಯನ್ನು ಮಾಡಲಾಗುತ್ತದೆ’, ಇದು ನಮ್ಮ ದುರ್ದೈವವಾಗಿದೆ. ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ಹಸುವಿಗೆ ‘ಗೋಮಾತೆ’, ಎಂದು ಹೇಳಲಾಗುತ್ತಿತ್ತು. ಆದರೆ ಈಗ ಅದೇ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ದೇಶಿ ಗೋತಳಿಗಳ ಹತ್ಯೆಯಾಗುತ್ತಿದೆ. ಗೋಮಾಂಸ ಮಾರಾಟದಲ್ಲಿ ಭಾರತವು ಜಗತ್ತಿನಾದ್ಯಂತದ ನಾಲ್ಕನೇಯ ಕ್ರಮಾಂಕದಲ್ಲಿದೆ. ಆದುದರಿಂದ ಗೋಮಾಂಸ ಮಾರಾಟಗಾರರಿಂದ ಗೋವುಗಳನ್ನು ರಕ್ಷಿಸುವುದು ಅನಿವಾರ್ಯವಾಗಿದೆ. ಮಹಾರಾಷ್ಟ್ರದಲ್ಲಿರುವ ಗೋಹತ್ಯೆ ನಿಷೇಧ ಕಾನೂನಿನ ಮೂಲಕ ಗೋಹತ್ಯೆಯನ್ನು ಮಾಡುವ, ಗೋಮಾಂಸವನ್ನು ಸಾಗಿಸುವ, ಹಾಗೆಯೇ ಗೋಮಾಂಸದ ಖರೀದಿ ಮತ್ತು ಮಾರಾಟ ಮಾಡುವವರಿಗೆ ಶಿಕ್ಷೆ ವಿಧಿಸಬಹುದಾಗಿದೆ. ಗೋರಕ್ಷಕರು ಈ ಕಾಯದೆಯನ್ನು ಸರಿಯಾಗಿ ಅಧ್ಯಯನ ಮಾಡಿ ಗೋವುಗಳ ರಕ್ಷಣೆ ಮಾಡಬೇಕು.

ಹಿಂದೂಗಳು ಒಗ್ಗಟ್ಟಾಗಿದ್ದರೆ ಧರ್ಮದ ಮೇಲಿನ ಆಘಾತವನ್ನು ತಡೆಯುವಲ್ಲಿ ಯಶಸ್ಸು ಸಿಗುತ್ತದೆ ! – ಚೇತನ ಜನಾರ್ದನ, ಹಿಂದೂ ಜನಜಾಗೃತಿ ಸಮಿತಿ, ತೆಲಂಗಾಣ

ಶ್ರೀ ಚೇತನ ಜನಾರ್ದನ

ಹಾಸ್ಯನಟ ಮುನವ್ವರ ಫಾರೂಕಿ ಇವನು ಹಿಂದೂ ದೇವತೆಗಳನ್ನು ಅಪಹಾಸ್ಯ ಮಾಡುವ ಹೇಳಿಕೆ ನೀಡಿದ್ದ. ಅದನ್ನು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಖಂಡಿಸಲಾಯಿತು. ಆ ನಂತರ ಭಾಗ್ಯನಗರ ಮತ್ತು ಪುಣೆಯಲ್ಲಿ ಆಯೋಜಿಸಲಾಗಿದ್ದ ಫಾರೂಕಿಯ ಕಾರ್ಯಕ್ರಮವನ್ನು ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದುತ್ವನಿಷ್ಠರು ವಿರೋಧಿಸಿ ಮತ್ತು ಅದನ್ನು ರದ್ದುಗೊಳಿಸುವಂತೆ ಮಾಡಿದರು. ಹಿಂದೂಗಳು ಒಗ್ಗಟ್ಟಾಗಿದ್ದರೆ ದೇವತೆಗಳು ಮತ್ತು ಹಿಂದೂ ಧರ್ಮದ ಮೇಲಿನ ಆಘಾತಗಳನ್ನು ತಡೆಯುವಲ್ಲಿ ಯಶಸ್ವಿಯಾಗಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.

ಹಿಂದೂ ಧರ್ಮದ ಮೇಲಿನ ಆಘಾತಗಳನ್ನು ತಡೆಯಲು ಎಲ್ಲರೂ ಜಾಗೃತರಾಗಬೇಕು ! – ನ್ಯಾಯವಾದಿ ಖುಶ ಖಂಡೇಲವಾಲ, ಸಂಸ್ಥಾಪಕ, ಹಿಂದೂ ಟಾಸ್ಕ ಫೋರ್ಸ್, ಪಾಲಘರ (ಮಹಾರಾಷ್ಟ್ರ)

ನ್ಯಾಯವಾದಿ ಖುಶ ಖಂಡೇಲವಾಲ

ಮೀರಾ-ಭಾಯಿಂದರ್ ಮುನ್ಸಿಪಲ್ ಕಾರ್ಪೊರೇಶನ್ ಮೈದಾನದಲ್ಲಿ ನಡೆದ ಸಾಮೂಹಿಕ ನಮಾಜನ ವಿರುದ್ಧ ಪೊಲೀಸರಿಗೆ ದೂರು ನೀಡಿದ ನಂತರ, ಮತಾಂಧರಿಗೆ ನಮಾಜ ಪಠಿಸಲು ಪಾಲಿಕೆ ಅನುಮತಿ ನಿರಾಕರಿಸಿತು, ಅದೇ ರೀತಿ ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ಜ್ಞಾನವಾಪಿಯಲ್ಲಿ ಶಿವಲಿಂಗದ ಕುರಿತು ಆಕ್ಷೆಪಾರ್ಹ ಲೇಖನವನ್ನು ಬರೆದ ೨ ಮತಾಂಧರ ವಿರುದ್ಧ ಸಂಚಾರವಾಣಿಯ ಮೂಲಕ ಪೊಲೀಸರಲ್ಲಿ ನೀಡಿದ ದೂರಿನ ನಂತರ ಕೂಡಲೇ ಅಪರಾಧವನ್ನು ದಾಖಲಿಸಲಾಯಿತು. ಈ ರೀತಿಯಲ್ಲಿ ಹಿಂದೂ ಧರ್ಮದ ಮೇಲಿನ ಆಘಾತ ತಡೆಯಲು ಎಲ್ಲರೂ ಜಾಗೃತರಾಗಬೇಕು. ಕರ್ನಾಟಕದಲ್ಲಿ ಕೇವಲ ೬ ಹುಡುಗಿಯರಿಂದ ಹಿಜಾಬ್‌ನ ಕುರಿತು ರಾಷ್ಟ್ರೀಯ ಆಂದೋಲನವು ಹುಟ್ಟಿಕೊಂಡಿತು; ಆದರೆ ಕಮಲೇಶ ತಿವಾರಿ ಮತ್ತು ಹರ್ಷ ಸೇರಿದಂತೆ ಅನೇಕ ಹಿಂದುತ್ವನಿಷ್ಠ ಕಾರ್ಯಕರ್ತರ ಹತ್ಯೆಗಳ ಹೊರತಾಗಿಯೂ, ಭಾರತದಲ್ಲಿನ ಹಿಂದೂಗಳು ಅವರ ವಿರುದ್ಧ ಮೌನವಾಗಿದ್ದರು ಎಂದು ಹೇಳಿದರು.
ರಾಷ್ಟ್ರ ನಿರ್ಮಾಣದ ತಳಹದಿಯು ಅಧ್ಯಾತ್ಮದ ಮೇಲಾಧಾರಿತವಾಗಿದೆ. ಭಾರತವು ಆಧ್ಯಾತ್ಮಿಕ ಶಕ್ತಿಯಿಂದ ಕಟ್ಟಲ್ಪಟ್ಟ ರಾಷ್ಟ್ರವಾಗಿರುವುದರಿಂದ ಅದನ್ನು ಎಂದಿಗೂ ನಾಶಮಾಡಲು ಸಾಧ್ಯವಿಲ್ಲ. ಹಿಂದುತ್ವದ ಕೆಲಸ ಒಂದು ತಪಸ್ಸು ಆಗಿರುವುದರಿಂದ ಅದಕ್ಕೆ ಸಾಧನೆಯ ಬಲ ಬೇಕು. ಈ ಕಾರ್ಯದಲ್ಲಿ ನೀವು ಎಂದಾದರೂ ವಿಫಲರಾದರೆ ಅದರಿಂದ ಅಸ್ತಿರರಾಗದೇ ಕಾರ್ಯ ಮುಂದುವರಿಸಿ. ಭಗವಾನ ಶ್ರೀಕೃಷ್ಣ ನಮ್ಮೊಂದಿಗಿರುವುದರಿಂದ ಅಂತಿಮ ಯಶಸ್ಸು ಹಿಂದೂಗಳದ್ದೇ ಆಗಿದೆ ಎಂದು ಹೇಳಿದರು.