ನೂಪುರ ಶರ್ಮಾ ಪ್ರತಿಕೃತಿಯನ್ನು ನೇಣಿಗೇರಿಸಿದುದನ್ನು ವಿರೋಧಿಸಿದ ಮಾಜಿ ಕ್ರಿಕೆಟ್ ಆಟಗಾರ ವೆಂಕಟೇಶ ಪ್ರಸಾದ: ಪ್ರಸಾದ ವಿರುದ್ಧ ಮುಸಲ್ಮಾನರಿಂದ ಟೀಕೆ

ಹೊಸ ದೆಹಲಿ – ಶುಕ್ರವಾರದ ನಮಾಜಿನ ನಂತರ ಬೆಳಗಾವಿಯ ಮಸೀದಿಯೊಂದರ ಮುಂದೆ ಮುಸಲ್ಮಾನರು ನೂಪುರ ಶರ್ಮಾ ಅವರ ಪ್ರತಿಕೃತಿಯನ್ನು ನೇತು ಹಾಕಿದ್ದರು. ಮಾಜಿ ಕ್ರಿಕೆಟ ಆಟಗಾರ ವೆಂಕಟೇಶ ಪ್ರಸಾದ ಇವರು ಟ್ವೀಟ್ ಮೂಲಕ ಘಟನೆಯನ್ನು ಖಂಡಿಸಿದ್ದಾರೆ. ಇದರಿಂದಾಗಿ ಟ್ವಿಟರ್‌ನಲ್ಲಿ ಅನೇಕ ಮುಸಲ್ಮಾನರು ಪ್ರಸಾದ ಅವರನ್ನು ವಿರೋಧಿಸಲು ಪ್ರಾರಂಭಿಸಿದರು.

ನೂಪುರ ಶರ್ಮಾ ಅವರ ಪ್ರತಿಕೃತಿ ನೇಣುಗಂಬದ ಮೇಲೆ ನೇತಾಡುತ್ತಿರುವ ದೃಶ್ಯ ಭಯಾನಕವಾಗಿದೆ’, ಇದು ೨೧ ನೇ ಶತಮಾನ ಎಂದು ನಾನು ಭಾವಿಸುವುದಿಲ್ಲ. ರಾಜಕೀಯವನ್ನು ಬದಿಗಿಟ್ಟು ಆತ್ಮಸಾಕ್ಷಿಯಂತೆ ನಡೆದುಕೊಳ್ಳಬೇಕು’ ಎಂದು ಪ್ರಸಾದರು ಟ್ವೀಟ್ ಮಾಡಿದ್ದರು. `ಪ್ರಸಾದರ ಹೇಳಿಕೆಯ ವಿರುದ್ಧ ಹಲವು ಮುಸಲ್ಮಾನರು ಹಿಂಸಾಚಾರಕ್ಕೆ ಪ್ರಚೋದನೆ ನೀಡಿ ಟ್ವೀಟ್ ಮಾಡಿದ್ದಾರೆ. ಕೆಲವು ಮುಸಲ್ಮಾನರು ಅಯೋಧ್ಯೆಯಲ್ಲಿ ಬಾಬರಿ ಗುಮ್ಮಟದ ಧ್ವಂಸ ಅಥವಾ ರಾಂಚಿಯಲ್ಲಿ ಗಲಭೆಕೋರ ಮುಸಲ್ಮಾನರನ್ನು ಪೊಲೀಸರು ದಮನಸಿದ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ನೂಪುರ ಶರ್ಮಾ ಅವರ ಪ್ರತಿಕೃತಿಯನ್ನು ನೇಣಿಗೇರಿಸಿದುದನ್ನು ಬೆಂಬಲಿಸಿದರು.

ಸಂಪಾದಕೀಯ ನಿಲುವು

* ಟೀಕಿಸುವಾಗ ಪ್ರಚೋದನಕಾರಿ ಹೇಳಿಕೆಗಳನ್ನು ಬಳಸಿದ ಮುಸಲ್ಮಾನರು !

* ಪ್ರಚೋದನಕಾರಿ ಟ್ವೀಟ್ ಮಾಡುವ ಮುಸಲ್ಮಾನರ ವಿರುದ್ಧ ಕಠಿಣ ಕ್ರಮ ಅಪೇಕ್ಷಿತವಿದೆ !