ಕಾಂಗ್ರೆಸ್ ಮುಳುಗುತ್ತಿರುವ ಹಡಗು! – ಪ್ರಶಾಂತ ಕಿಶೋರ

ಪಾಟಲಿಪುತ್ರ (ಬಿಹಾರ) – ಖ್ಯಾತ ರಾಜಕೀಯ ತಂತ್ರಜ್ಞ ಪ್ರಶಾಂತ ಕಿಶೋರವರು “ಕಾಂಗ್ರೆಸ್ ಮುಳುಗುತ್ತಿರುವ ಹಡಗು”. `ಕಾಂಗ್ರೆಸ್ ತನ್ನನ್ನು ತಾನು ಸುಧಾರಿಸಿಕೊಳ್ಳುವುದಿಲ್ಲ ಮತ್ತು ನಿಮ್ಮನ್ನೂ ಮುಳುಗಿಸುತ್ತದೆ.’ ಎಂದು ಹೇಳಿದರು. ಭವಿಷ್ಯದಲ್ಲಿ ಕಾಂಗ್ರೆಸ ಜೊತೆ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದರು.

೨೦೧೧ ರಿಂದ ೨೦೨೧ ರವರೆಗೆ ೧೧ ಚುನಾವಣೆಗಳಲ್ಲಿ ಕೆಲಸ ಮಾಡಿದ್ದೇನೆ ಎಂದು ಪ್ರಶಾಂತ ಕಿಶೋರ ಹೇಳಿದ್ದಾರೆ. ಈ ಪೈಕಿ ೨೦೧೭ರ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ ನಾನು ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಆಗ ಕಾಂಗ್ರೆಸ ಸೋಲಬೇಕಾಯಿತು. ಅಂದಿನಿಂದ ನಾನು ಅವರೊಂದಿಗೆ ಕೆಲಸ ಮಾಡುವುದಿಲ್ಲ ಎಂದು ನಿರ್ಧರಿಸಿದೆ. ಈ ಜನರು ನನ್ನ ‘ರೆಕಾರ್ಡ್’ ಹಾಳು ಮಾಡಿದ್ದಾರೆ.