ಉತ್ತರಾಖಂಡ ಬೆಟ್ಟಗಳ ಮೇಲಿನ ಅಕ್ರಮ ಮಜಾರ್(ಗೋರಿ)ಗಳ ತೆರವು ! – ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ

ಅಕ್ರಮ ಮಜಾರ್(ಗೋರಿ) ನಿರ್ಮಾಣದವರೆಗೂ ಆಡಳಿತ ಮತ್ತು ಅರಣ್ಯ ಇಲಾಖೆ ನಿದ್ರೆ ಮಾಡುತ್ತಿತ್ತೇ ? ಅವುಗಳ ಮೇಲೂ ಸರಕಾರ ಕ್ರಮ ಕೈಗೊಳ್ಳಬೇಕು !
(ಮಜಾರ್ ಎಂದರೆ ಇಸ್ಲಾಮಿಕ್ ಪೀರ್ ಅಥವಾ ಫಕೀರನ ಗೋರಿ)

ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ

ನವದೆಹಲಿ : ಉತ್ತರಾಖಂಡದ ಬೆಟ್ಟಗಳಲ್ಲಿ ನಿರ್ಮಿಸಲಾಗುತ್ತಿರುವ ಅಕ್ರಮ ಮಜಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಇಲ್ಲಿ ನಡೆದ ಸಮಾರಂಭದಲ್ಲಿ ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಇಲ್ಲಿನ ಬೆಟ್ಟಗಳಲ್ಲಿನ ಕಾಡುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಜಾರ್‌ಗಳನ್ನು ನಿರ್ಮಿಸಲಾಗಿದ್ದು, ಪ್ರಾಣಿಗಳು ಮತ್ತು ಪರಿಸರಕ್ಕೆ ಅಪಾಯವನ್ನುಂಟು ಮಾಡುತಿವೆ ಎಂದು ಹೇಳಿದರು.