ಕರ್ನಾಟಕದ 2 ಶಾಲೆಗಳಲ್ಲಿ ಶ್ರೀ ಸರಸ್ವತಿ ದೇವಿಯ ಮೂರ್ತಿಗಳ ಧ್ವಂಸ !

* ಈ ಧ್ವಂಸದ ಹಿಂದೆ ಯಾರ ಕೈವಾಡವಿದೆ, ಅದನ್ನು ಕಂಡು ಹಿಡಿದು ಸಂಬಂಧಿತರಿಗೆ ಕಠಿಣ ಶಿಕ್ಷೆ ನೀಡುವುದಕ್ಕಾಗಿ ಸರಕಾರ ಪ್ರಯತ್ನಿಸಬೇಕು ! ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಹಿಜಾಬ್‍ನ ಪ್ರಕರಣದಿಂದ ಈ ಘಟನೆಗಳು ನಡೆದಿದೆಯೆ ? ಇದನ್ನು ಕಂಡು ಹಿಡಿಯಬೇಕು !- ಸಂಪಾದಕರು 

ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕರು 

ಬೆಂಗಳೂರು – ಕರ್ನಾಟಕ ರಾಜ್ಯದ ಎರಡು ಬೇರೆ ಬೇರೆ ನಗರಗಳಲ್ಲಿನ ಶಾಲೆಯಲ್ಲಿರುವ ಶ್ರೀ ಸರಸ್ವತಿ ದೇವಿಯ ಮೂರ್ತಿಯನ್ನು ಧ್ವಂಸಗೊಳಸಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಚಿಂಚಲಿ ಗ್ರಾಮದಲ್ಲಿ ಪ್ರಾಥಮಿಕ ಸರಕಾರಿ ಶಾಲೆಯಲ್ಲಿ ಶ್ರೀ ಸರಸ್ವತಿ ದೇವಿಯ ಮೂರ್ತಿಯನ್ನು ಧ್ವಂಸಗೊಳಿಸಲಾಯಿತು ಇನ್ನೊಂದು ಕಡೆ ಶಿವಮೊಗ್ಗ ಹಾರೋಹಳ್ಳಿ ಗ್ರಾಮದ ಶಾಲೆಯಲ್ಲಿರುವ ಶ್ರೀ ಸರಸ್ವತಿ ದೇವಿ, ಮ. ಗಾಂಧಿ ಮತ್ತು ಸ್ವಾಮಿ ವಿವೇಕಾನಂದ ಇವರ ಮೂರ್ತಿಗಳನ್ನು ಧ್ವಂಸ ಗೊಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.