`ಸೆನ್ಸೋಡೈನ್’ ಈ `ಟೂಥಪೇಸ್ಟ್’ ಮಾಡಿದ ಜಾಹೀರಾತು ಸುಳ್ಳು : 10 ಲಕ್ಷ ರೂಪಾಯಿ ದಂಡ

ಇಂತಹ ಸುಳ್ಳು ಮತ್ತು ಮೋಸದ ಜಾಹೀರಾತು ಮಾಡುವ ಎಲ್ಲ ಕಂಪನಿಗಳ ಮೇಲೆ ಕ್ರಮಕೈಗೊಳ್ಳುವುದು ಅಪೇಕ್ಷಿತವಾಗಿದೆ !-ಸಂಪಾದಕರು 

ನವ ದೆಹಲಿ – ಮಾರುಕಟ್ಟೆಯಲ್ಲಿ `ಸೆನ್ಸೋಡೈನ್’ ಈ `ಟೂಥಪೇಸ್ಟ್’ನ `ಹಲ್ಲಿನ ಸಮಸ್ಯೆ’ಗಳ ಮೇಲೀನ ಜಾಹೀರಾತು ಸುಳ್ಳಾಗಿದೆ. ಜಾಹಿರಾತಿನ ಮೂಲಕ ಗ್ರಾಹಕರ ದಾರಿತಪ್ಪಿಸಿದ ಪ್ರಕರಣದಲ್ಲಿ `ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ’ವು `ಸೆನ್ಸೋಡೈನ್’ ಕಂಪನಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇದರ ಜೊತೆಗೆ ಪ್ರಾಧಿಕಾರ ಈ ಕಂಪನಿಗೆ ದಾರಿತಪ್ಪಿಸುವ ಪ್ರಸ್ತುತ ಜಾಹೀರಾತು ಬರುವ 7 ದಿನಗಳಲ್ಲಿ ತೆಗೆಯುವಂತೆ ಆದೇಶಿಸಿದೆ. `ಸೆನ್ಸೋಡೈನ್’ ಇತ್ತೀಚೆಗೆ ತನ್ನ ಅಧಿಕೃತ ಪ್ರಕಾಶನದಲ್ಲಿ `ದೇಶಾದ್ಯಂತ ದಂತವೈದ್ಯರು ಶಿಫಾರಸ್ಸು ಮಾಡಿರುವ ಟೂಥಪೇಸ್ಟ್’ ಮತ್ತು `ಜಗತ್ತಿನಾದ್ಯಂತ ಮೊದಲ ಸ್ಥಾನದಲ್ಲಿ ಇರುವ ಸಂವೇದನಾಶೀಲ ಟೂಥಪೇಸ್ಟ್’ ಎಂಬ ದಾವೆ ಮಾಡುವ ಜಾಹೀರಾತು ಪ್ರಸಿದ್ಧಿ ಮಾಡಿತ್ತು.