ನ್ಯಾಯಾಲಯದ ತೀರ್ಪಿನ ವಿರುದ್ಧ ಬಂದ್ ಆಚರಿಸಿದ ಸಂಘಟನೆಗಳ ಮೇಲೆ ನ್ಯಾಯಾಂಗ ನಿಂದನೆಯ ಕ್ರಮ ಕೈಗೊಳ್ಳುವಂತೆ ಒತ್ತಾಯ

ಹಿಜಾಬ್ ನಿರ್ಬಂಧದ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನ ಪ್ರಕರಣ

ಹಿಂದು ವಿಧಿಜ್ಞ ಪರಿಷತ್ತಿನ ನ್ಯಾಯವಾದಿಗಳಾದ ಅಮೃತೇಶ ಎನ್.ಪಿ.ಯವರು ಅರ್ಜಿ ಸಲ್ಲಿಸಿದರು

ಬೆಂಗಳೂರು – ಹಿಜಾಬ್‌ನ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಬಂದ್ ಆಚರಿಸಿ ವಿರೋಧಿಸಲಾಯಿತು. ಇದು ನ್ಯಾಯಾಂಗದ ಅವಮಾನವಾಗಿದೆ ಎಂದು ಬಂದ್‌ಗೆ ಕರೆ ನೀಡಿದ ಸಂಘಟನೆಗಳ ವಿರುದ್ಧ ೨ ಅರ್ಜಿಗಳನ್ನು ಸಲ್ಲಿಸಲಾಗಿದೆ.

(ಸೌಜನ್ಯ : Public TV)

ಈ ಸಂಘಟನೆಗಳ ಮೇಲೆ ಕಾರ್ಯಾಚರಣೆ ಮಾಡುವಂತೆ ಈ ಅರ್ಜಿಗಳ ಮೂಲಕ ಒತ್ತಾಯಿಸಲಾಗಿದೆ. ಹಿಂದು ವಿಧಿಜ್ಞ ಪರಿಷತ್ತಿನ ನ್ಯಾಯವಾದಿಗಳಾದ ಅಮೃತೇಶ ಎನ್.ಪಿ. ಇವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.