ನದಿಯಾ(ಬಂಗಾಲ)ದಲ್ಲಿ ‘ದ ಕಶ್ಮೀರ ಫೈಲ್ಸ್’ ಚಲನಚಿತ್ರವನ್ನು ನೋಡಿ ಹಿಂತಿರುಗುವಾಗ ಭಾಜಪದ ಶಾಸಕರ ವಾಹನದ ಮೇಲೆ ಬಾಂಬ್ ದಾಳಿ

ಸುದೈವದಿಂದ ಬಾಂಬ್ ವಾಹನದ ಹಿಂದೆ ಬಿದ್ದಿದ್ದರಿಂದ ಶಾಸಕರು ಪಾರಾದರು !

ಬಂಗಾಲದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿ ಮೊದಲೇ ಹದಗೆಟ್ಟಿರುವಾಗ ಈಗ ಇಂತಹ ಘಟನೆಯನ್ನು ನೋಡಿ ಮತಾಂಧರು ಬಂಗಾಲವನ್ನು ಎರಡನೇ ಕಾಶ್ಮೀರವನ್ನಾಗಿಸಿದರೆ ಅದರಲ್ಲಿ ಆಶ್ಚರ್ಯವಿಲ್ಲ ! ಈ ಸ್ಥಿತಿಯನ್ನು ಬದಲಾಯಿಸಲು ಬಂಗಾಲದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿವುದು ಅವಶ್ಯಕ !

‘ದ ಕಶ್ಮೀರಿ ಫೈಲ್ಸ’ ಚಲನಚಿತ್ರದ ಮೂಲಕ ಮತಾಂಧರಿಂದಾದ ಕಾಶ್ಮೀರದಲ್ಲಿನ ಹಿಂದೂಗಳ ವಂಶನಾಶವನ್ನು ತೋರಿಸಿದ ನಂತರ ಹಿಂದೂಗಳಿಗೆ ಮಾತ್ರಲ್ಲದೆ ಮತಾಂಧರಿಗೂ ಸಿಟ್ಟು ಬರುತ್ತಿದೆ, ಎಂಬುದನ್ನು ಗಮನದಲ್ಲಿಡಬೇಕು !

ನದಿಯಾ (ಬಂಗಾಲ) – ಇಲ್ಲಿನ ಭಾಜಪದ ಶಾಸಕ ಜಗನ್ನಾಥ ಸರಕಾರ ಇವರು ‘ಅವರು ಇಲ್ಲಿ ‘ದ ಕಶ್ಮೀರ್ ಫೈಲ್ಸ’ ಚಲನಚಿತ್ರ ನೋಡಿ ಮನೆಗೆ ಹಿಂತಿರುಗುವಾಗ ಅವರ ವಾಹನದ ಮೇಲೆ ಬಾಂಬ್ ಎಸೆಯಲಾಯಿತು. ವಾಹನ ವೇಗವಾಗಿ ಸಾಗುತ್ತಿದ್ದರಿಂದ ಈ ಬಾಂಬ್ ವಾಹನದ ಹಿಂದೆ ಬಿದ್ದು ನಾವು ಪಾರಾಗಿದ್ದೇವೆ, ಇದರಲ್ಲಿ ಯಾವುದೇ ಹಾನಿಯಾಗಿಲ್ಲ’ ಎಂದು ಹೇಳಿದ್ದಾರೆ.

ಶಾಸಕ ಜಗನ್ನಾಥ ಸರಕಾರ ರವರು ‘ಮಮತಾ ಬ್ಯಾನರ್ಜಿಯವರ ಸರಕಾರದಲ್ಲಿ ಬಂಗಾಲದ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿ ಹದಗೆಟ್ಟಿದೆ. ಇಲ್ಲಿ ರಾಷ್ಟ್ರಪತಿ ಆಡಳಿತ ಜಾರಿಮಾಡಬೇಕು. ಇದರ ಹೊರತು ಇಂತಹ ಘಟನೆಗಳು ನಿಲ್ಲುವುದಿಲ್ಲ’ ಎಂದು ಹೇಳಿದರು.