ಕಾಶ್ಮೀರಿ ಹಿಂದೂಗಳ ಮೇಲಿನ ಅತ್ಯಾಚಾರಕ್ಕಾಗಿ ಕಾಶ್ಮೀರಿ ಮುಸಲ್ಮಾನರು ಅವರಲ್ಲಿ ಕೈಮುಗಿದು ಕ್ಷಮೆ ಕೇಳಬೇಕು !

ಪಿಡಿಪಿಯ ಪ್ರಧಾನ ಕಾರ್ಯದರ್ಶಿ ಜಾವೆದ್ ಬೇಗರಿಂದ ಕರೆ !

ಕೇವಲ ಕೈಜೋಡಿಸಿ ಕ್ಷಮೆ ಕೇಳಿದರೆ ಸಾಲದು ಹಾಗೂ ಈ ರೀತಿ ಕಾಶ್ಮೀರಿ ಮುಸಲ್ಮಾನರು ಕ್ಷಮೆ ಕೇಳುತ್ತಾರೆ, ಸಾಧ್ಯತೆಯಿಲ್ಲ. ಆದ್ದರಿಂದ ಈ ಅತ್ಯಾಚಾರದಲ್ಲಿ ಸಹಭಾಗಿಗಳಿರುವ ಮುಸಲ್ಮಾನರಿಗೆ ಶಿಕ್ಷೆಯಾಗಲು ಕೇಂದ್ರ ಸರಕಾರವು ಈಗ ಮುಂದಾಳತ್ವವಹಿಸುವ ಆವಶ್ಯಕವಾಗಿದೆ. ಆಗ ಮಾತ್ರ ನಿಜವಾದ ಅರ್ಥದಲ್ಲಿ ಕಾಶ್ಮೀರಿ ಹಿಂದೂಗಳಿಗೆ ನ್ಯಾಯವು ಸಿಕ್ಕಂತೆ ಆಗುವುದು !

ನವ ದೆಹಲಿ – ದ ಕಶ್ಮೀರಿ ಫೈಲ್ಸ್ ಈ ಚಲನಚಿತ್ರಕ್ಕೆ ದೇಶಾದ್ಯಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಾಗಲೇ ಮತಾಂಧರು ಹಾಗೂ ಹಿಂದೂದ್ವೇಷಿಗಳಿಂದ ವಿರೋಧವು ವ್ಯಕ್ತಗುತ್ತಿದೆ. ಈ ಹಿನ್ನೆಲೆಯಲ್ಲಿ ಫೀಪಲ್ಸ ಡೆಮೋಕ್ರಟಿಕ್ ಫ್ರಂಟ್ (ಪಿಡಿಪಿ) ಪಕ್ಷದ ಪ್ರಧಾನ ಕಾರ್ಯದರ್ಶಿ ಜಾವೆದ್ ಬೇಗ ಇವರು ಕಾಶ್ಮೀರಿ ಹಿಂದೂಗಳ ನರಸಂಹಾರದ ಬಗ್ಗೆ ಮುಸಲ್ಮಾನರು ಕ್ಷಮೆ ಕೇಳಬೇಕು ನಮ್ಮ ಹಿಂದಿನ ಪೀಳಿಗೆಯು ಹಿಂದೂಗಳ ಮೇಲೆ ಅತ್ಯಾಚಾರ ಮಾಡಿದ್ದರು, ಇದು ಅವರ ತಪ್ಪಾಗಿತ್ತು, ಎಂದು ಅವರು ಹೇಳಿದ್ದಾರೆ.

೧. ಜಾವೆದ್ ಬೇಗ ಇವರು ಗಿರಿಜಾ ಟಿಕ್ಕೂ ಈ ಕಾಶ್ಮೀರಿ ತರುಣಿಯ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ೧೯೮೯ ರಲ್ಲಿ ೫ ಧರ್ಮಾಂಧರು ಗಿರಿಜಾಳನ್ನು ಅಪಹರಣ ಮಾಡಿ ಅವಳ ಮೇಲೆ ಸಾಮೂಹಿಕ ಬಲತ್ಕಾರ ಮಾಡಿದ್ದರು ಹಾಗೂ ನಂತರ ಗರಗಸದಿಂದ ಅವಳನ್ನು ತುಂಡು ಮಾಡಿದ್ದರು.

೨. ಬೇಗ ಇವರು, ನಾನು ಓರ್ವ ಕಾಶ್ಮೀರಿ ಮುಸಲ್ಮಾನನಾಗಿದ್ದೇನೆ. ನಮ್ಮ ಪಂಡಿತ ಸಹೋದರಿ ಗಿರಿಜಾ ಟಿಕ್ಕೂ ಇವಳು ಜೀವಂತ ಇರುವಾಗಲೇ ಕಾಶ್ಮೀರಿ ಮುಸಲ್ಮಾನ ಕುಟುಂಬದ ಭಯೋತ್ಪದಕರು ತುಂಡು ಮಾಡಿದರು. ಈ ಭಯೋತ್ಪದಕರ ಕೈಯಲ್ಲಿ ಸ್ವಾತಂತ್ರ್ಯದ ಹೆಸರಿನಲ್ಲಿ ಪಾಕಿಸ್ತಾನದ ಬಂದೂಕು ಇತ್ತು. ಇದು ಕಟ್ಟುಕಥೆ ಅಲ್ಲ, ಇದು ವಾಸ್ತವವಾಗಿದೆ. ನಾನು ಕೈಮುಗಿದು ಪಂಡಿತ ಸಮಾಜದ ಹಾಗೂ ಅವರ ಮೇಲಾದ ಅತ್ಯಾಚಾರಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದು ಬರೆದಿದ್ದಾರೆ.

ಈಗಲಾದರೂ ಕಾಶ್ಮೀರಿ ಮುಸಲ್ಮಾನರಿಗೆ ನಾಚಿಕೆಯಾಗಬೇಕು !

ಜಾವೆದ ಬೆಗ ಇವರು ಆನ್ ನ್ಯೂಸ್ ಕಶ್ಮೀರ ಈ ವಾರ್ತಾವಾಹಿನಿಗೆ ನೀಡಿದ ಸಂದರ್ಶನದ ಒಂದು ವಿಡೀಯೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಬೆಗ ಇವರು, ಯಾವ ಜನರು ಕಾಶ್ಮೀರಿ ಪಂಡಿತರನ್ನು ಕೊಂದಿದ್ದಾರೆ ಅವರು ಎಲ್ಲಿಯವರಾಗಿದ್ದರು ? ಅವರು ಬಾರಾಮುಲ್ಲಾದವರಲ್ಲದೆ ನಮ್ಮ ಮನೆಯವರೇ ಆಗಿದ್ದರು. ಕಾಶ್ಮೀರಿ ಪಂಡಿತರು ಹೊರಗಿನವರಾಗಿರಲಿಲ್ಲ. ಅವರು ನಮ್ಮ ವಂಶದವರೇ ಆಗಿದ್ದರು, ನಮ್ಮ ರಕ್ತದವರೇ ಆಗಿದ್ದರು. ಯಾವುದೇ ಪ್ರಾಣಿ ಅದರ ವಂಶದ ಪ್ರಾಣಿಯನ್ನು ಎಂದಿಗೂ ಕೊಲ್ಲುವುದಿಲ್ಲ ಹುಲಿ ಯಾವತ್ತೂ ಹುಲಿಯ ಬೇಟೆಯನ್ನು ಮಾಡುವುದಿಲ್ಲ. ನಾಯಿ ಯಾವತ್ತು ನಾಯಿಯನ್ನು ಕಚ್ಚುವುದಿಲ್ಲ. ಈಗಲಾದರೂ ನಮಗೆ ನಾಚಿಕೆಯಾಗಬೇಕು ಎಂದು ಹೇಳಿದರು.

ಬೀರವಾದಲ್ಲಿಯ ೧೯೯೭ರ ಹತ್ಯಾಕಾಂಡದ ಜಾವೆದ ಬೇಗ ಸಾಕ್ಷಿದಾರ !

ಬೇಗ ಇವರು ವಿಡಿಯೋದಲ್ಲಿ, ನಾನು ಸ್ವತಃ ಒಂದು ಹತ್ಯಾಕಾಂಡದ ಸಾಕ್ಷಿದಾರನಾಗಿದ್ದೇನೆ. ನಾನು ಬೀರವಾದಲ್ಲಿ ವಾಸಿಸುವವನಾಗಿದ್ದೇನೆ. ಇಲ್ಲಿಯೇ ಮಾರ್ಚ ೨೧, ೧೯೯೭ರಲ್ಲಿ ಕಾಶ್ಮೀರದಲ್ಲಿ ಸಾಮೂಹಿಕ ಹತ್ಯಕಾಂಡವಾಗಿತ್ತು. ಇದರಲ್ಲಿ ೧೨ ಕ್ಕಿಂತ ಹೆಚ್ಚು ಕಾಶ್ಮೀರಿ ಹಿಂದೂಗಳನ್ನು ಸಾಯಿಸಲಾಗಿತ್ತು. ನಾನು ನೋಡಿದ್ದೇನೆ ಇದರಲ್ಲಿ ಸತ್ತವರು ಯಾವುದೇ ಸ್ವಾತಂತ್ರ್ಯವನ್ನು ತಡೆಯುತ್ತಿರಲಿಲ್ಲ ಹಾಗೂ ಯಾವುದೇ ಕಾಶ್ಮೀರಿ ಮುಸಲ್ಮಾನರನ್ನು ಹೊಡೆಯುತ್ತಿರಲಿಲ್ಲ. ಅವರು ನಿರಾಯುಧರಾಗಿದ್ದರು ಇದರಲ್ಲಿ ಸತ್ತು ಹೋದವರಲ್ಲಿ ನಮ್ಮ ಭಾಗದ ಮುಖ್ಯಾಧ್ಯಪಕರು ಒಬ್ಬರೂ ಇದ್ದರು ಹಾಗೂ ನನ್ನಂತೆ ತರುಣನಾಗಿದ್ದನು.

ಯಾವ ತಪ್ಪು ನಮ್ಮ ತಂದೆಯವರ ಪೀಳಿಗೆಯು ಮಾಡಿದೆ ಅದಕ್ಕೆ ಒಂದು ವಿದ್ಯಾವಂತ ತರುಣನೆಂದು ಆ ತಪ್ಪನ್ನು ಸ್ವೀಕರಿಸಿ ಸಾಮೂಹಿಕವಾಗಿ ಕಾಶ್ಮೀರಿ ಹಿಂದೂಗಳಲ್ಲಿ ಕ್ಷಮೆಯನ್ನು ಕೇಳಬೇಕು. ಅದಕ್ಕಾಗಿ ಯಾವುದೇ ಚಲನಚಿತ್ರದ ಅವಶ್ಯಕತೆಯಿಲ್ಲ ಎಂzದು ಹೇಳಿದರು.