ತ್ರಿಪುರಾದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನು ಮಹಿಳೆಯರು ಹಿಗ್ಗಾಮುಗ್ಗಾ ಥಳಿಸಿರುವದಿಂದ ಸಾವು

ಕಾನೂನು ಕೈಗೆತ್ತಿಕೊಂಡು ಕಾಮುಕನಿಗೆ ಶಿಕ್ಷೆ ನೀಡುವ ಪ್ರವೃತ್ತಿ ಏನಾದರೂ ಸಮಾಜದಲ್ಲಿ ಬೆಳೆದರೆ ಅದಕ್ಕೆ ಜವಾಬ್ದಾರರು ಯಾರು ? `ಈ ವ್ಯವಸ್ಥೆಯಲ್ಲಿ ನ್ಯಾಯ ಸಿಗುವುದಿಲ್ಲ’, ಈ ಭಾವನೆ ಜನರಲ್ಲಿ ನಿರ್ಮಾಣವಾಗಿರುವುದರ ಪ್ರತಿಕವಾಗಿದೆ. ಇದು ಎಲ್ಲಾ ಪಕ್ಷದ ಸರಕಾರದ ವಿಫಲವಾಗಿದೆ ! – ಸಂಪಾದಕರು 

ಅಗರ್ತಲಾ – ಧಲಾಯಿ ಜಿಲ್ಲೆಯ ಗಂಡಾಚೆರಾದಲ್ಲಿನ ದೆಬನಾಥಪಾರಾದಲ್ಲಿ ಒಬ್ಬ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ನಡೆಸುವ ಪ್ರಯತ್ನ ಮಾಡಿದ 45 ವಯಸ್ಸಿನ ರತನ್ ಆಚಾರ್ಜಿಯ ಮೇಲೆ ಮಹಿಳೆಯರು ದಾಳಿ ನಡೆಸಿದರು. ಮಹಿಳೆಯರು ಆತನನ್ನು ಒಂದು ಮರಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದರು. ಅದರಲ್ಲಿ ಆತ ಮೂರ್ಛೆ ಹೋದ. ಪೊಲೀಸರು ಅವನನ್ನು ಆಸ್ಪತ್ರೆಗೆ ಕೊಂಡೊಯ್ದನಂತರ ವೈದ್ಯರು ಆತ ಮೃತಪಟ್ಟನೆಂದು ಹೇಳಿದರು.

1. ಆಚಾರ್ಜಿಯು ನೀರುದ್ಯೋಗಿಯಾಗಿದ್ದ. ಅವನಿಗೆ ಒಂದು ಕೊಲೆ ಪ್ರಕರಣದಲ್ಲಿ 8 ವರ್ಷ ಕಠಿಣ ಸೆರೆಮನೆವಾಸ ಅನುಭವಿಸಿದ್ದ.

2. ಧಲಾಯಿಯಲ್ಲಿ ಓರ್ವ ತಾಯಿಯು ತನ್ನ 5 ವರ್ಷದ ಮಗುವಿನ ಜೊತೆ ಗಂಡಾಚೆರಾನಲ್ಲಿನ ದೆಬನಾಥಪಾರಾದಲ್ಲಿ ಒಂದು ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಿದ್ದರು. ಆಚಾರ್ಜಿ ಮಗುವಿಗೆ ಮೋಸ ಮಾಡಿ ಆಕೆಯ ತಾಯಿ ಇಲ್ಲದಿರುವ ಸಮಯದಲ್ಲಿ ಹತ್ತಿರದ ಕಾಡಿಗೆ ಕೊಂಡೊಯ್ದು ಆಕೆಯ ಮೇಲೆ ಬಲಾತ್ಕಾರ ನಡೆಸುವ ಪ್ರಯತ್ನಿಸಿದ.

3. ಮಗು ಸಹಾಯಕ್ಕಾಗಿ ಕೂಗಾಡಿರುವುದರಿಂದ ಕುಟುಂಬದವರು ಮತ್ತು ಸ್ಥಳಿಯ ಜನರು ಆಕೆಗೆ ರಕ್ಷಿಸಲು ಘಟನಾ ಸ್ಥಳಕ್ಕೆ ಬಂದರು. ಅಷ್ಟೊತ್ತಿಗೆ ಆಚಾರ್ಜಿ ಘಟನಾ ಸ್ಥಳದಿಂದ ಪರಾರಿಯಾಗಿದ್ದನು.

4. ಇಡಿರಾತ್ರಿ ಗ್ರಾಮಸ್ಥರು ಆತನನ್ನು ಹುಡುಕುವ ಪ್ರಯತ್ನ ಮಾಡಿದರು; ಆದರೆ ಉಪಯೋಗವಾಗಲಿಲ್ಲ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಮಹಿಳೆಯ ಒಂದು ಗುಂಪಿನಿಂದ ಈ ಘಟನೆಯನ್ನು ನಿಷೇಧಿಸಿದರು ಮತ್ತು ಗಂಡಾಚೆರಾ-ಅಮರಪೂರ ಹೆದ್ದಾರಿಯನ್ನು ತಡೆದರು.

5. ಮಾರ್ಚ್ 16 ರ ಬೆಳಿಗ್ಗೆ ಆರೋಪಿಯನ್ನು ಹತ್ತಿರದ ಗ್ರಾಮದ ಸ್ಥಳಿಯರು ನೋಡಿದರು. ನಂತರ ಮಹಿಳೆಯರ ಗುಂಪಿನಿಂದ ಆತನನ್ನು ಹಿಗ್ಗಾಮುಗ್ಗಾ ಥಳಿಸಲಾಯಿತು.

6. ಈ ಪ್ರಕರಣದಲ್ಲಿ ಪೊಲೀಸರು ಇಲ್ಲಿಯವರೆಗೆ 4 ಜನರ ವಿಚಾರಣೆ ನಡೆಸಿದ್ದಾರೆ, ಯಾರನ್ನು ವಶಕ್ಕೆ ಪಡೆದಿಲ್ಲ.