ಆಗ್ರಾದಲ್ಲಿನ ಕಾನ್ವೆಂಟ್ ಶಾಲೆಯ ಅನಧಿಕೃತ ಕಟ್ಟಡವನ್ನು ಸರಕಾರದಿಂದ ತೆರವು !

ಶಾಲೆಯ ಆಡಳಿತದಿಂದ ಕಾರ್ಯಾಚರಣೆಗೆ ವಿರೋಧ

ಅನಧಿಕೃತ ಕಟ್ಟಡ ನಿರ್ಮಾಣವಾಗುವವರೆಗೆ ಆಡಳಿತ ನಿದ್ದೆ ಮಾಡುತ್ತಿತ್ತೆ ? ಎಂಬ ಪ್ರಶ್ನೆ ಯಾವಾಗಲೂ ನಿರ್ಮಾಣವಾಗುತ್ತವೆ !

ಆಗ್ರಾ (ಉತ್ತರ ಪ್ರದೇಶ) – ಇಲ್ಲಿಯ ಮಾಲ್ ರಸ್ತೆಯಲ್ಲಿರುವ ಆಥನಿ ಗರ್ಲ್ಸ್ ಸ್ಕೂಲ್‌ಗೆ ನೋಟಿಸ್ ಜಾರಿ ಮಾಡಿದ್ದರೂ ಕಾನೂನುಬಾಹಿರ ಕಟ್ಟಡ ತೆರವುಗೊಳಿಸದೆ ಇದ್ದರಿಂದ ‘ಕಂಟೋನ್ಮೆಂಟ್ ಬೋರ್ಡ್’ನ ಪಡೆಯು ಶಾಲೆಯ ಪರಿಸರದಲ್ಲಿರುವ ಸೈಕಲ್ ಸ್ಟ್ಯಾಂಡ್, ವ್ಯಾಸಪೀಠ ಮತ್ತು ಗಾರ್ಡ್ ರೂಮ್‌ನ ಕಟ್ಟಡವನ್ನು ಬುಲ್ಡೋಜರ್‌ದಿಂದ ನೆಲಸಮ ಮಾಡಿದ್ದಾರೆ. ಶಾಲಾ ಆಡಳಿತವು ಮಾತ್ರ ಈ ಕಾನೂನು ಬಾಹಿರ ಕಟ್ಟಡವನ್ನು ನೆಲಸಮ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ‘ಇನ್ನೊಂದು ಕಡೆಗೆ ಸರಕಾರ ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂಬ ಮಾತುಗಳನ್ನು ಹೇಳುತ್ತದೆ ಹಾಗೂ ಇನ್ನೊಂದೆಡೆಗೆ ಅದೇ ಸರಕಾರದ ಕಾರ್ಮಿಕರು ಶಾಲೆಯನ್ನು ನೆಲಸಮ ಮಾಡುವ ಕೆಲಸ ಮಾಡುತ್ತಾರೆ’, ಇಂದು ಶಾಲೆಯ ಶಿಕ್ಷಕರು ಹೇಳಿದ್ದಾರೆ. (ಈ ಯುಕ್ತವಾದವೆಂದರೆ ಕಳ್ಳನಿಗೊಂದು ಪಿಳ್ಳೆ ನೆವವೇ ಆಗಿದೆ ! ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ಕಾನೂನುಬಾಹಿರ ಕಟ್ಟಡ ನಿರ್ಮಾಣ ಮಾಡಬಹುದೆಂದು ಸರಕಾರ ಎಲ್ಲಿಯೂ ಹೇಳಿಲ್ಲ; ಆದರೆ ಕಾನ್ವೆಂಟ್ ಶಾಲೆ ಈ ರೀತಿ ಕಾನೂನುಬಾಹಿರ ಕೆಲಸ ಮಾಡಿ ಒಂದು ರೀತಿಯಲ್ಲಿ ಶಾಲೆಗೆ ಕಲಂಕ ತರುತ್ತಿದ್ದಾರೆ, ಇದು ಅವರ ಗಮನಕ್ಕೆ ಬರುವುದಿಲ್ಲವೇ ? – ಸಂಪಾದಕರು)

(ಸೌಜನ್ಯ : ToI)