ರಷ್ಯಾ ಮತ್ತು ಅಮೇರಿಕದ ಪರಸ್ಪರ ಜೈವಿಕ ಮತ್ತು ರಾಸಾಯನಿಕ ಶಸ್ತ್ರಾಸ್ತ್ರಗಳ ಬಗ್ಗೆ ಆರೋಪ – ಪ್ರತ್ಯಾರೋಪ !

ಕೀವ್ (ಉಕ್ರೇನ್) – ರಷ್ಯಾವು ಉಕ್ರೇನಿನ ಮೇಲೆ ಜೈವಿಕ ಅಥವಾ ರಾಸಾಯನಿಕ ದಾಳಿ ನಡೆಸಬಹುದು, ಎಂಬ ಅಮೇರಿಕದ ಆರೋಪವನ್ನು ರಷ್ಯಾ ನಿರಾಕರಿಸಿದೆ. ಅಮೇರಿಕದ ಅಧ್ಯಕ್ಷರ ನಿವಾಸವಾಗಿರುವ ‘ಶ್ವೇತ ಭವನ’ದ ಪ್ರಸಾರ ಮಾಧ್ಯಮ ಸಚಿವರಾದ ಜೇನ್ ಸಾಕಿಯವರು ಮಾತನಾಡುತ್ತ “ರಷ್ಯಾದಿಂದ ಜೈವಿಕ ಅಥವಾ ರಾಸಾಯನಿಕ ದಾಳಿಯಾಗುವ ಸಾಧ್ಯತೆಯ ಬಗ್ಗೆ ನಾವು ಚಿಂತೆಗೊಳಗಾಗಿದ್ದೇವೆ. ರಷ್ಯಾವು ಯಾವುದಾದರೊಂದು ತಪ್ಪು ಕಾರಣವನ್ನು ಮುಂದಿಟ್ಟು ರಾಸಾಯನಿಕ ದಾಳಿಯನ್ನು ನಡೆಸಬಹುದು. ಅವರು ಈ ಹಿಂದೆಯೂ ಹೀಗೆ ಮಾಡಿದ್ದಾರೆ. ರಷ್ಯಾ ವು ‘ಅಮೇರಿಕವು ಉಕ್ರೇನಿನಲ್ಲಿರುವ ಜೈವಿಕ ಮತ್ತು ರಾಸಾಯನಿಕ ಪ್ರಯೋಗಾಲಯದಲ್ಲಿ ಶಸ್ತ್ರಾಸ್ತ್ರಗಳನ್ನು ನಿರ್ಮಿಸುತ್ತಿದೆ’ ಎಂಬ ಸುಳ್ಳು ಹೇಳಿಕೆಯನ್ನು ನೀಡಿದೆ. ಚೀನಾ ಕೂಡ ಇದನ್ನು ಸಮರ್ಥಿಸುತ್ತಿದೆ. ಇದೊಂದು ಸುನಿಯೋಜಿತ ಷಡ್ಯಂತ್ರವಾಗಿದೆ. ನಾವು ಅಂತಹ ಯಾವುದೇ ಆಯುಧಗಳನ್ನು ತಯಾರಿಸುವದಿಲ್ಲ ಅಥವಾ ಇಟ್ಟುಕೊಳ್ಳುವದಿಲ್ಲ” ಎಂದು ಹೇಳಿದ್ದಾರೆ.