ಹಿಂದೂಗಳ ಹತ್ಯೆಯನ್ನು ನಿಲ್ಲಿಸಲು ಹಿಂದೂ ಸಮಾಜ ಈಗ ಸಂಘಟನಾಶಕ್ತಿಯನ್ನು ತೋರಿಸಬೇಕು ! – ಶ್ರೀ. ಪ್ರಮೋದ ಮುತಾಲಿಕ್, ಸಂಸ್ಥಾಪಕ ಅಧ್ಯಕ್ಷರು, ಶ್ರೀರಾಮ ಸೇನೆ

ಹಿಂದೂ ಸಂಘಟನೆ ಮತ್ತು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ

‘ಹಿಂದೂಗಳ ನರಮೇಧಕ್ಕೆ ಅಂತ್ಯ ಯಾವಾಗ ?’ ಈ ಕುರಿತು ‘ಆನ್‌ಲೈನ್’ ವಿಶೇಷ ಸಂವಾದ ಸಂಪನ್ನ !

ಶ್ರೀ ಪ್ರಮೋದ ಮುತಾಲಿಕ್

ದೇಶಾದ್ಯಂತ ‘ಹಿಜಾಬ್’ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಬಜರಂಗ ದಳ ಕಾರ್ಯಕರ್ತ ಹಾಗೂ ರಾಷ್ಟ್ರಭಕ್ತ ಶ್ರೀ. ಹರ್ಷ ಈ ಯುವಕನನ್ನು ‘ಹಿಂದೂ’ ಆಗಿದ್ದರಿಂದ ಹತ್ಯೆ ಮಾಡಲಾಯಿತು. ಹರ್ಷ ಇವರ ಹತ್ಯೆಯ ಹಿಂದೆ ‘ಸೋಶಿಲ್ ಡೆಮಾಕ್ರೆಟಿಕ್ ಫ್ರಂಟ್ ಆಫ್ ಇಂಡಿಯಾ’ (ಎಸ್‌ಡಿಎಫ್‌ಐ) ಮತ್ತು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿಎಫ್‌ಐ) ಈ ಕಟ್ಟರ ಇಸ್ಲಾಮಿ ಸಂಘಟನೆಗಳ ಕೈವಾಡವಿದೆ. ಈ ಬಗ್ಗೆ ಆರು ಮಂದಿ ಮುಸಲ್ಮಾನರನ್ನು ಬಂಧಿಸಲಾಗಿದೆ. ಶ್ರೀ. ಹರ್ಷನಂತೆಯೇ ಹಲವಾರು ಹಿಂದೂಗಳನ್ನು ಈ ರೀತಿ ಕೊಲ್ಲಲಾಗುತ್ತಿದೆ. ಈ ಹಿಂದೂಗಳ ಹತ್ಯೆಯನ್ನು ತಡೆಯಲು ಹಿಂದೂ ಸಮಾಜವು ಈಗ ಸಂಘಟನಾಶಕ್ತಿ ಪ್ರದರ್ಶಿಸಬೇಕು, ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ್ ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಹಿಂದೂಗಳ ನರಮೇಧಕ್ಕೆ ಅಂತ್ಯ ಯಾವಾಗ ?’ ಎಂಬ ‘ಆನ್‌ಲೈನ್’ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು. ಈ ವಿಶೇಷ ಸಂವಾದದಲ್ಲಿ ತಮಿಳುನಾಡಿನ ‘ಹಿಂದು ಮಕ್ಕಲ ಕತ್ಛಿ’ಯ ಅಧ್ಯಕ್ಷ ಶ್ರೀ. ಅರ್ಜುನ ಸಂಪಥ, ಪಶ್ಚಿಮ ಬಂಗಾಲದ ‘ಭಾರತೀಯ ಸಾಧಕ ಸಮಾಜ’ದ ಸಂಸ್ಥಾಪಕ ಶ್ರೀ. ಅನಿರ್ಬಾನ ನಿಯೋಗಿ, ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯವಾದಿ ಕೃಷ್ಣಮೂರ್ತಿ ಪಿ., ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕ ಶ್ರೀ. ಗುರುಪ್ರಸಾದ ಗೌಡ ಇವರು ಸಹ ಮಾರ್ಗದರ್ಶನ ಮಾಡಿದರು.

ಹಿಂದೂಗಳ ಹತ್ಯೆಯ ಹಿಂದಿರುವ ಜಿಹಾದಿ ಸಂಘಟನೆಗಳನ್ನು ನಿಷೇಧಿಸಬೇಕು ! – ಶ್ರೀ. ಅರ್ಜುನ ಸಂಪಥ

ಶ್ರೀ. ಅರ್ಜುನ ಸಂಪಥ

ತಮಿಳುನಾಡು ರಾಜ್ಯ ಸೇರಿದಂತೆ ದೇಶದಾದ್ಯಂತ ಇತ್ತೀಚಿನ ಕೆಲವೇ ವರ್ಷಗಳಲ್ಲಿ ಅನೇಕ ಹಿಂದುತ್ವವಾದಿ ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ. ಹಿಂದೂಗಳ ಸರಣಿ ಹತ್ಯೆಗಳ ಹಿಂದೆ ಸಕ್ರಿಯವಿರುವ ಜಿಹಾದಿ ಇಸ್ಲಾಮಿಕ್ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು. ಪ್ರಸ್ತುತ ಭಾರತವು ‘ಸಮಾನ ನಾಗರಿಕ ಕಾಯಿದೆ’ಯನ್ನು ಜಾರಿಗೊಳಿಸಬೇಕಾಗಿದೆ.

ಹಿಂದೂಗಳು ಒಟ್ಟಾಗಬೇಕು – ಶ್ರೀ. ಅನಿರ್ಬಾನ ನಿಯೋಗಿ

ಶ್ರೀ. ಅನಿರ್ಬಾನ ನಿಯೋಗಿ

ಹಿಂದೂಗಳ ಹತ್ಯೆಯಾದಾಗ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಒಂದಾಗುವುದಿಲ್ಲ. ದೇಶದ ಎಲ್ಲಾ ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಹಿಂದೂಗಳ ಹತ್ಯೆಗಳಾಗುತ್ತಿವೆ. ಈ ಅನ್ಯಾಯವನ್ನು ವಿರೋಧಿಸಲು ಹಿಂದೂಗಳು ಮುಂದಾಗಬೇಕು.

‘ಹಿಂದೂ ರಾಷ್ಟ್ರ’ ಎಂಬ ಪದವನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವ ಪ್ರಯತ್ನಗಳಾಗುತ್ತಿವೆ ! – ನ್ಯಾಯವಾದಿ ಕೃಷ್ಣಮೂರ್ತಿ ಪಿ.

ನ್ಯಾಯವಾದಿ ಕೃಷ್ಣಮೂರ್ತಿ ಪಿ.

ಜಾಗೃತ ಹಿಂದೂಗಳನ್ನು ನಿರಂತರವಾಗಿ ಹತ್ಯೆ ಮಾಡುವ ಮೂಲಕ ನಮ್ಮ ದೇಶದಲ್ಲಿ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ ತಥಾಕಥಿತ ಮಾನವಹಕ್ಕುಗಳ ಹೋರಾಟಗಾರರು ಹಿಂದೂಗಳ ಹತ್ಯೆಯ ಬಗ್ಗೆ ಮೌನವಾಗಿದ್ದಾರೆ. ‘ಸೆಕ್ಯುಲರಿಸಂ’ ನೆಪದಲ್ಲಿ ಹಿಂದೂಗಳ ಶೋಷಣೆಯಾಗುತ್ತಿದೆ, ‘ಹಿಂದೂ ರಾಷ್ಟ್ರ’ ಎಂಬ ಪದವನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ; ಆದರೆ ಈಗ ಹಿಂದೂಗಳು ಇದನ್ನು ಸಹಿಸುವುದಿಲ್ಲ.

ಹಿಂದೂಗಳು ಧ್ವನಿ ಎತ್ತಿ ಜಾಗೃತಿ ಮೂಡಿಸುವ ಅಗತ್ಯವಿದೆ ! – ಶ್ರೀ. ಗುರುಪ್ರಸಾದ ಗೌಡ

ಶ್ರೀ. ಗುರುಪ್ರಸಾದ ಗೌಡ

ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಮತಾಂಧ ಶಕ್ತಿಯ ಪ್ರಭಾವ ಹೆಚ್ಚಾಗುತ್ತಿದೆ. ಇತ್ತೀಚೆಗೆ ಮತಾಂಧರು ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ಇವರ ಕೊಲೆ ಮಾಡಿದರು. ಹರ್ಷ ಇವರ ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಳೆದ ಕೆಲವು ವರ್ಷಗಳಿಂದ ಅನೇಕ ಹಿಂದೂಗಳು ಕೊಲ್ಲಲ್ಪಟ್ಟಿದ್ದಾರೆ; ಆದರೆ ಹಿಂದೂಗಳು ಇದರ ವಿರುದ್ಧ ಧ್ವನಿ ನಿರೀಕ್ಷೆಯಷ್ಟು ಧ್ವನಿ ಎತ್ತಲಿಲ್ಲ. ಈಗ ಹಿಂದೂಗಳು ಇದರ ವಿರುದ್ಧ ಧ್ವನಿ ಎತ್ತಿ ಜಾಗೃತಿ ಮೂಡಿಸುವ ಅಗತ್ಯವಿದೆ.

ರಾಜ್ಯದಲ್ಲಿನ ಯಾರೆಲ್ಲ ಹಿಂದುತ್ವನಿಷ್ಠರ ಹತ್ಯೆಯಾಗಿದೆ ಎಂಬುದನ್ನು ತಿಳಿದುಕೊಳ್ಳಿ !

೧. ಸುಖಾನಂದ ಶೆಟ್ಟಿ (೩೨ ವರ್ಷ), ಭಾಜಪದ ನೇತಾರರು, ಮಂಗಳೂರು (ಡಿಸೆಂಬರ್ ೨೦೦೬)

೨. ಸಿ. ಎನ್. ಶ್ರೀನಿವಾಸ, ನೇತಾರರು, ಭಾಜಪ, ಬೆಂಗಳೂರು (ಮಾರ್ಚ ೨೦೧೪)

೩. ಲಕ್ಷ್ಮಣ (೩೭ ವರ್ಷ), ಕಾರ್ಯಕರ್ತರು, ಶ್ರೀರಾಮ ಸೇನೆ, ತಾ. ದೇವರಗಿ, ಶಿವಮೊಗ್ಗ  ಜಿಲ್ಲೆ (ಸೆಪ್ಟೆಂಬರ್ ೨೦೧೪)

೪. ಕೊರೆಪ್ಪಾ ಕೊಟರಪ್ಪಾ ಜಾವರೂ (೩೨ ವರ್ಷ), ಕಾರ್ಯಕರ್ತರು, ಶ್ರೀರಾಮ ಸೇನೆ, ಹಳ್ಳಿಕೇರಿ, ಧಾರವಾಡ (ಅಕ್ಟೋಬರ್ ೨೦೧೪)

೫. ವಿಶ್ವನಾಥನ್ ಶೆಟ್ಟಿ (೩೮ ವರ್ಷ), ಸಂಘ ಸ್ವಯಂಸೇವಕರು, ಶಿವಮೊಗ್ಗ (ಫೆಬ್ರವರಿ ೨೦೧೫)

೬. ವಾಮನ ಪೂಜಾರಿ, ಹಿಂದುತ್ವನಿಷ್ಠ, ಮೂಡಬಿದ್ರಿ, ದಕ್ಷಿಣ ಕನ್ನಡ ಜಿಲ್ಲೆ (ಸೆಪ್ಟೆಂಬರ್ ೨೦೧೫)

೭. ಪ್ರಶಾಂತ ಪೂಜಾರಿ, ಕಾರ್ಯಕರ್ತ, ಬಜರಂಗದಳ, ಮೂಡಬಿದ್ರಿ, ದಕ್ಷಿಣ ಕನ್ನಡ  ಜಿಲ್ಲೆ (ಸಪ್ಟೆಂಬರ ೨೦೧೫)

೮. ಡಿ. ಕೆ. ಕುಟಪ್ಪಾ, ವಿಶ್ವಹಿಂದೂ ಪರಿಷದ್, ಮಡಿಕೇರಿ, ಕೊಡಗು ಜಿಲ್ಲೆ (ನವೆಂಬರ್ ೨೦೧೫)

೯. ರಾಜೇಶ ಕೋಟ್ಯಾನ, ಉಳ್ಳಾಳ, ದಕ್ಷಿಣ ಕನ್ನಡ ಜಿಲ್ಲೆ (ಎಪ್ರಿಲ್ ೨೦೧೬)

೧೦. ಅಶ್ವತ್ಥ, ನೇತಾರರು, ಭಾಜಪ, ಅತ್ತಿಬೆಲೆ, ಬೆಂಗಳೂರು ಜಿಲ್ಲೆ (ಮೇ ೨೦೧೬)

೧೧. ಯೋಗೇಶ ಗೌಡ, ಧಾರವಾಡ ಜಿಲ್ಲಾ ಪಂಚಾಯತ ಸದಸ್ಯ ಮತ್ತು ಭಾಜಪದ ನೇತಾರರು, ಧಾರವಾಡ (ಜೂನ್ ೨೦೧೬)

೧೨. ಪ್ರವೀಣ ಪೂಜಾರಿ, ಸಂಘ ಸ್ವಯಂಸೇವಕ, ಕುಶಾಲನಗರ, ಕೊಡಗು ಜಿಲ್ಲೆ (ಆಗಸ್ಟ್ ೨೦೧೬)

೧೩. ರುದ್ರೇಶ, ಸಂಘ ಸ್ವಯಂಸೇವಕ ಹಾಗೂ ಭಾಜಪದ ಕಾರ್ಯಕರ್ತ, ಬೆಂಗಳೂರು (ಅಕ್ಟೋಬರ್ ೨೦೧೬)

೧೪. ಕಾರ್ತಿಕ ರಾಜ, ಸಂಘ ಸ್ವಯಂಸೇವಕ ಹಾಗೂ ಭಾಜಪದ ಕಾರ್ಯಕರ್ತ, ಮಂಗಳೂರು, (ಅಕ್ಟೋಬರ್ ೨೦೧೬)

೧೫. ರವಿ ಮಗಳಿ, ನೇತಾರರು, ಭಾಜಯುಮೋ, ಪೆರಿಯಾಪಟ್ಟಣ, ಮೈಸೂರು ಜಿಲ್ಲೆ (ನವೆಂಬರ್ ೨೦೧೬)

೧೬. ಸುನೀಲ ಡೊಂಗರೆ, ಕಾರ್ಯಕರ್ತ, ಭಾಜಪ,

ಔರದ, ಬೀದರ ಜಿಲ್ಲೆ (ನವೆಂಬರ್ ೨೦೧೬)

೧೭. ಶ್ರೀನಿವಾಸ ಪ್ರಸಾದ (ವಾಸು), ಹಿಂದುತ್ವನಿಷ್ಠ,

ಬೊಮ್ಮನಹಳ್ಳಿ, ಬೆಂಗಳೂರು ಜಿಲ್ಲೆ (ಮಾರ್ಚ ೨೦೧೭)

೧೮. ಹರೀಶ, ಹಿಂದುತ್ವನಿಷ್ಠ, ಚಂದಾಪುರ, ತಾ. ಆನೇಕಲ, ಬೆಂಗಳೂರು ಜಿಲ್ಲೆ (ಜೂನ ೨೦೧೭)

೧೯. ಶರತ ಮಡಿವಾಳ (ವಯಸ್ಸು ೨೮ ವರ್ಷ), ಸಂಘ ಸ್ವಯಂಸೇವಕ, ಕಂಡುರ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ (ಜುಲೈ ೨೦೧೭)

೨೦. ಚಿಕ್ಕತಿಮ್ಮೇಗೌಡ, ಕಾರ್ಯಕರ್ತ, ಭಾಜಪ, ಬೆಂಗಳೂರು (ನವೆಂಬರ್ ೨೦೧೭)

೨೧. ಪರೇಶ ಮೇಸ್ತ (೧೮ ವರ್ಷ), ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ (ಡಿಸೆಂಬರ್ ೨೦೧೭)

೨೨. ಮಹಾದೇವ ಕಾಳೆ, (ವಯಸ್ಸು ೫೦ ವರ್ಷ), ಕಾರ್ಯಕರ್ತ, ಭಾಜಪ, ಅಫಜಲಪುರ, ಕಲಬುರ್ಗಿ ಜಿಲ್ಲೆ (೨೦೧೭)

೨೩. ರಮೇಶ ಬಂದಿ, ಕಾರ್ಯಕರ್ತ, ಭಾಜಪ, ಬಳ್ಳಾರಿ (೨೦೧೭)

೨೪. ತಿಪ್ಪೇಶ, ಯುವನೇತಾರ, ಭಾಜಪ ತಿಪಟೂರು, ಹಾಸನ ಜಿಲ್ಲೆ (೨೦೧೭)

ಟಿಪ್ಪಣಿ : ಈ ಹಿಂದುತ್ವನಿಷ್ಠರ ಪೈಕಿ ಹೆಚ್ಚಿನ ಹೆಸರುಗಳು ಉಡುಪಿಯಲ್ಲಿನ ಭಾಜಪದ ಸಂಸದರು ಹಾಗೂ ‘ಕೃಷಿ ಮತ್ತು ರೈತ ಕಲ್ಯಾಣ’ ಮಂತ್ರಾಲಯದ ಕೇಂದ್ರೀಯ ರಾಜ್ಯ ಮಂತ್ರಿಗಳಾದ ಶೋಭಾ ಕರಂದ್ಲಾಜೆಯವರು ೨೦೧೮ರಲ್ಲಿ ಬಹಿರಂಗಗೊಳಿಸಿದ ಪ್ರಸಿದ್ಧಿ ಪತ್ರಕದಿಂದ ತೆಗೆದುಕೊಳ್ಳಲಾಗಿವೆ.