ಕರ್ನಾಟಕದಲ್ಲಿ ಹಿಜಾಬ ಧರಿಸಲು ದೊರೆಯದಿದ್ದರೆ ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಕುಂಕುಮವನ್ನು ಹಚ್ಚಲು ಬಿಡುವುದಿಲ್ಲ !

ಬಾಂಗ್ಲಾದೇಶದಲ್ಲಿನ ಮತಾಂಧರು ಬೆದರಿಕೆ ಹಾಕಿರುವ ಬಗ್ಗೆ ತಸ್ಲೀಮಾ ನಸರೀನರವರಿಂದ ಮಾಹಿತಿ

* ಇಸ್ಲಾಮಿ ದೇಶಗಳಿಗೆ ಅಲ್ಲಿನ ಹಿಂದೂಗಳ ಮೇಲೆ ಆಕ್ರಮಣ ಮಾಡಲು, ಅವರ ಧಾರ್ಮಿಕ ರೂಢಿಗಳ ಮೇಲೆ ನಿರ್ಬಂಧ ಹೇರಲು ಅವಕಾಶ ಬೇಕಾಗಿರುತ್ತದೆ. ಕರ್ನಾಟಕದಲ್ಲಿನ ಹಿಜಾಬಿನ ಪ್ರಕರಣವು ಅವರಿಗೆ ಸುಲಭವಾಗಿ ದೊರೆತಿದೆ. ಆದುದರಿಂದ ಅವರು ಹೀಗೆ ಏನೂ ಮಾಡುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ! ಈ ವಿಷಯದಲ್ಲಿ ಭಾರತ ಸರಕಾರವು ಬಾಂಗ್ಲಾದೇಶದಲ್ಲಿನ ಹಿಂದೂಗಳ ರಕ್ಷಣೆಗಾಗಿ ಅಲ್ಲಿನ ಸರಕಾರದ ಮೇಲೆ ಒತ್ತಡ ನಿರ್ಮಾಣ ಮಾಡಬೇಕಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು 

* ಭಾರತದಲ್ಲಿ ಹಿಜಾಬನ್ನು ಸಮರ್ಥಿಸುವ ತಥಾಕಥಿತ ಜಾತ್ಯಾತೀತವಾದಿಗಳು ಈ ವಿಷಯದಲ್ಲಿ ಏಕೆ ಮಾತನಾಡುವುದಿಲ್ಲ ? – ಸಂಪಾದಕರು 

ಬಾಂಗ್ಲಾದೇಶಿ ಲೇಖಕಿಯಾದ ತಸ್ಲೀಮಾ ನಸರೀನ

ನವದೆಹಲಿ – ಬಾಂಗ್ಲಾದೇಶಿ ಮುಲ್ಲಾ (ಮುಸಲ್ಮಾನ) ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. `ಕರ್ನಾಟಕದಲ್ಲಿನ ಮುಸಲ್ಮಾನರಿಗೆ ಹಿಜಾಬ ಧರಿಸಲು ಅನುಮತಿ ನೀಡದಿದ್ದರೆ ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ಮುಲ್ಲಾ (ಮುಸಲ್ಮಾನ) ಧೋತರ ಧರಿಸಲು, ಕುಂಕುಮ ಧರಿಸಲು ನೀಡುವುದಿಲ್ಲ’, ಎಂಬ ಬೆದರಿಕೆಯನ್ನು ಹಾಕಿರುವ ಮಾಹಿತಿಯನ್ನು ಬಾಂಗ್ಲಾದೇಶಿ ಲೇಖಕಿಯಾದ ತಸ್ಲೀಮಾ ನಸರೀನರವರು ಟ್ವೀಟ್ ಮಾಡಿ ನೀಡಿದ್ದಾರೆ.

ಅಸದುದ್ದೀನ ಓವೈಸಿಯು ನನ್ನನ್ನು ಕೊಲ್ಲಲು ಗೂಂಡಾಗಳನ್ನು ಕಳುಹಿಸಿದ್ದನು ! ? ತಸ್ಲೀಮಾ ನಸರೀನ ರವರ ಆರೋಪ

ಎಮ್. ಐ. ಎಮ್. ನ ಅಧ್ಯಕ್ಷ ಹಾಗೂ ಸಂಸದರಾದ ಅಸದುದ್ದೀನ ಓವೈಸಿಯವರು ತಸ್ಲೀಮಾ ನಸರೀನರವರನ್ನು `ದ್ವೇಷದ ಪ್ರತೀಕ’ ಎಂದು ಹೇಳಿದ್ದರು. ಆ ಹೇಳಿಕೆಯ ಮೇರೆಗೆ ತಸ್ಲೀಮಾ ನಸರೀನರವರು ಇನ್ನೊಂದು ಟ್ವೀಟ್‍ನಲ್ಲಿ ಪ್ರತ್ಯುತ್ತರ ನೀಡುವಾಗ `ಅವರು (ಓವೈಸಿ) ಹೇಳುತ್ತಾರೆ, ನಾನು ದ್ವೇಷದ ಪ್ರತೀಕವಾಗಿದ್ದೇನೆ. ನಿಜವೇ ? ನನ್ನ ಮೇಲಿರುವ ಪ್ರೀತಿಯಿಂದಾಗಿಯೇ ಅವರು ನನ್ನನ್ನು ಕೊಲ್ಲಲು ಭಾಗ್ಯನಗರ ಮತ್ತು ಸಂಭಾಗೀನಗರದಲ್ಲಿ ಗೂಂಡಾಗಳನ್ನು ಕಳುಹಿಸಿರಬೇಕು !’ ಎಂದು ಆರೋಪಿಸಿದ್ದಾರೆ.