ಪುದುಚೆರಿ – ಪುದುಚೆರಿ ರಾಜ್ಯದಲ್ಲಿ ಅರಿಯಾಂಕುಪ್ಪಂ ಸರಕಾರಿ ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯೊಬ್ಬಳಿಗೆ ತರಗತಿಯಲ್ಲಿ ಹಿಜಾಬ್ ಧರಿಸಲು ಅನುಮತಿ ನಿರಾಕರಿಸಿರುವುದರಿಂದ, ‘ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ’ ಈ ಮುಸಲ್ಮಾನ ಸಂಘಟನೆ ಸರಕಾರಿ ಶಾಲೆಯ ಹೊರಗೆ ಆಂದೋಲನ ನಡೆಸಿತು. ಅದರ ನಂತರ ಪೊಲೀಸರು ಅಲ್ಲಿ ತಲುಪಿದರು. ಪುದುಚೆರಿ ಸರಕಾರಿ ಶಾಲೆಯ ಶಿಕ್ಷಣ ಸಂಚಲನೆಯ ಅರಿಯಾಂಕುಪ್ಪಂ ಸರಕಾರಿ ಶಾಲೆಯ ಪ್ರಮುಖರಿಗೆ ಈ ಪ್ರಕರಣದ ವಿಚಾರಣೆ ನಡೆಸಲು ಹೇಳಿದರು. ಮುಸಲ್ಮಾನ ವಿದ್ಯಾರ್ಥಿನಿಯ ಅಭಿಪ್ರಾಯವೆಂದರೆ, ‘ನಮಗೆ ಮೊದಲು ಹಿಜಾಬ್ ಅನುಮತಿ ಇತ್ತು, ಆದರೆ ಈಗ ವಿರೋಧಿಸಲಾಗುತ್ತಿದೆ.’ ಇದರ ಬಗ್ಗೆ ಪ್ರತಿಕ್ರಿಯಿಸಿದ ಶಾಲಾ ಮಂಡಳಿ, ‘ಮಹಾವಿದ್ಯಾಲಯದ ಪರಿಸರದಲ್ಲಿ ಸ್ಕಾರ್ಫ್ ಗೆ ಅನುಮತಿಯಿದೆ ಆದರೆ ಅದನ್ನು ಅವರಿಂದ ತರಗತಿಯಲ್ಲೂ ಧರಿಸಿರುವುದರಿಂದ ಅವರಿಗೆ ಅನುಮತಿ ನಿರಾಕರಿಸಲಾಗಿದೆ’, ಎಂದಿದೆ.
Though the student has been wearing the #hijab from first standard while studying in the same school in Puducherry, the objection has been raised a few months back.@xpresstn @Debjani_TNIE https://t.co/m0UUUz8bse
— The New Indian Express (@NewIndianXpress) February 8, 2022
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂ ಹೆಣ್ಣುಮಕ್ಕಳಿಗೂ ಹಿಜಾಬ್ ಧರಿಸಲು ಕಾನೂನು ಬರುವುದು ! – ಕರ್ನಾಟಕದ ಇಂಧನ ಸಚಿವ ಸುನಿಲ ಕುಮಾರ ಇವರ ಟೀಕೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡೀ ರಾಜ್ಯದ ಜನರಿಗೆ ಹಿಜಾಬ್ ಹಾಕಿಸುತ್ತಾರೆ: ಸಚಿವ ಸುನಿಲ್ ಕುಮಾರ್ https://t.co/k2ozBMB1OP
— ETV Bharat Karnataka (@ETVBharatKA) February 9, 2022
ಭಾಜಪದ ನಾಯಕ ಮತ್ತು ಕರ್ನಾಟಕದ ಇಂಧನ ಸಚಿವ ಸುನಿಲ ಕುಮಾರ ಇವರು ಕಾಂಗ್ರೆಸ್ಸನ್ನು ಟೀಕಿಸುತ್ತಾ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳಿಗೂ ಹಿಜಾಬ್ ಧರಿಸಲು ಹೇಳುವ ಕಾನೂನು ತರುವ ಸಾಧ್ಯತೆ ಇದೆ’, ಎಂದಿದ್ದಾರೆ.