ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವೈದಿಕ ಗಣಿತದ ಒಂದು ವರ್ಷದ ಡಿಪ್ಲೋಮಾ ಪಠ್ಯಕ್ರಮ ಪ್ರಾರಂಭ

ವಾರಾಣಸಿ (ಉತ್ತರ ಪ್ರದೇಶ) – ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಈಗ ವೈದಿಕ ಗಣಿತದ ಡಿಪ್ಲೋಮಾ ಪಠ್ಯಕ್ರಮ ಪ್ರಾರಂಭ ಮಾಡಲಾಗಿದೆ. ಈ ಪಠ್ಯಕ್ರಮ ಆನ್‍ಲೈನ್‍ನಲ್ಲಿಯೂ ಕಲಿಯಬಹುದು. ಇದು ಒಂದು ವರ್ಷದ ಪಠ್ಯಕ್ರಮ ಇರಲಿದೆ.

ಈ ವಿಶ್ವವಿದ್ಯಾಲಯದ ವಿಭಾಗ ಪ್ರಮುಖ ಮತ್ತು ಗಣಿತ ತಜ್ಞ ಪ್ರಶಾಂತ ಶರ್ಮಾ ಇವರು, ವೈದಿಕ ಗಣಿತದಲ್ಲಿ 304 ಮಹತ್ವದ ಸೂತ್ರಗಳಿವೆ. ಅದರ ಮೂಲಕ ಅನೇಕ ಬಿಡಿಸಲಾದ ಸೂತ್ರಗಳು ಬಿಡಿಸಲು ಸಾಧ್ಯವಾಗುತ್ತದೆ ಎಂದು ಹೇಳದರು.