ನಿಮಗೆ ನವಜಾತ ಮಗು ಮತ್ತು ಹೆಂಡತಿಯನ್ನು ಭೇಟಿಯಾಗುವುದಿದ್ದರೆ, ಕ್ರೈಸ್ತ ಧರ್ಮವನ್ನು ಸ್ವೀಕರಿಸಿ !

ಮಾವ ಮತ್ತು ಸಂಬಂಧಿಕರು ಒತ್ತಡ ಹೇರುತ್ತಿದ್ದಾರೆಂದು ಹಿಂದೂ ಪತಿ ದೂರು

ಜಾತ್ಯತೀತತೆ ಮತ್ತು ಸರ್ವಧರ್ಮ ಸಮಭಾವವನ್ನು ಹಿಂದೂಗಳು ಮಾತ್ರ ಪಾಲಿಸಬೇಕು ಮತ್ತು ಇತರ ಧರ್ಮದವರು ತಮ್ಮ ಧರ್ಮದ ಪ್ರಸಾರ ಮಾಡುತ್ತಾರೆ, ಹಿಂದೂಗಳನ್ನು ಮತಾಂತರಕ್ಕೆ ಒತ್ತಾಯಿಸುತ್ತಾರೆ, ಇದು ಯಾವಾಗ ನಿಲ್ಲುವುದು ?

ಕರ್ನಾಟಕದಲ್ಲಿ ಭಾಜಪ ಸರಕಾರವಿದ್ದಾಗ, ಕ್ರೈಸ್ತರಿಗೆ ಇಂತಹ ಕೃತ್ಯವನ್ನು ಮಾಡಲು ಧೈರ್ಯವಾಗಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಚಿತ್ರದುರ್ಗ – ಹೊಸದುರ್ಗದ ಜಂಗಮ ನಗರ ನಿವಾಸಿ ಹಿಂದೂ ಯುವಕ ಮಾರಪ್ಪ ತನ್ನ ಮಾವ ಮತ್ತು ಇತರ ಸಂಬಂಧಿಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರು, ‘ನನ್ನ ಪತ್ನಿ ಹಾಗೂ ಮಗುವಿಗೆ ನೋಡಲು ಮನೆಗೆ ಹೋದಾಗ ಮಾವ ಹಾಗೂ ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ದಾರೆ.’ ‘ಕ್ರೈಸ್ತ ಧರ್ಮ ಸ್ವೀಕರಿಸಿದರೆ ಪತ್ನಿ ಮತ್ತು ಶಿಶುವನ್ನು ಭೇಟಿಯಾಗಲು ಅನುಮತಿ ನೀಡಲಾಗುವುದು’, ಎಂದು ಹೇಳಿದ್ದರಿಂದ ಮಾವ ವಸಂತ ಕುಮಾರ, ಸಂಬಂಧಿಕ ರಾಮಚಂದ್ರಪ್ಪ, ಸುಧಾಕರ, ಮಂಜುನಾಥ ಹಾಗೂ ಸಂಕಪ್ಪ ವಿರುದ್ಧ ದೂರು ದಾಖಲಾಗಿದೆ. (ಮತಾಂತರಗೊಂಡ ಕ್ರೈಸ್ತರು ಹಿಂದೂ ಹೆಸರುಗಳನ್ನು ಇಟ್ಟುಕೊಂಡು ಹಿಂದೂಗಳ ಕಣ್ಣಿಗೆ ಮಣ್ಣೆರೆಚುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! – ಸಂಪಾದಕರು)

ಮಾರಪ್ಪ ಇವರು ತಮ್ಮ ದೂರಿನಲ್ಲಿ, ‘ಜುಲೈ ೬, ೨೦೨೦ ರಂದು, ಮದುವೆಯ ಸಮಯದಲ್ಲಿ ನನ್ನ ಹೆಂಡತಿಯ ಸಂಬಂಧಿಕರು ನನಗೆ ಪವಿತ್ರ ನೀರು ಇದೆ ಎಂದು ಹೇಳಿಕೊಂಡು ಅದರಲ್ಲಿ ಮುಳುಗಿ ಏಳುವಂತೆ ಒತ್ತಾಯಿಸಿದರು. ಹಾಗೂ ‘ನಾನು ಕ್ರೈಸ್ತನಾದೆ’ ಎಂದೂ ಘೋಷಿಸಿದರು.

ಇದಾದ ಬಳಿಕ, ‘ಹಿಂದೂ ದೇವತೆಗಳ ಚಿತ್ರಗಳನ್ನು ಹರಿದು ಪೂಜಿಸಬಾರದು’, ಎಂದರು. ‘ಒಂದುವೇಳೆ ಅವುಗಳನ್ನು ಪೂಜಿಸಿದರೆ, ನಾನು ನರಕಕ್ಕೆ ಹೋಗುತ್ತೇನೆ’, ಎಂದು ಅವರು ಹೇಳಿದರು. ಮಾರಪ್ಪಾನು ‘ಪತ್ನಿ ಮತ್ತು ಮಗು ಸುರಕ್ಷಿತವಾಗಿ ಮನೆಗೆ ಮರಳಿ ತರಲು ಅನುಮತಿ ನೀಡಬೇಕು’, ಎಂದು ಪೊಲೀಸರಲ್ಲಿ ಒತ್ತಾಯಿಸಿದ್ದಾರೆ.