ಕೊರೊನಾದ ಎರಡನೆಯ ಅಲೆಯಿಂದಾಗಿ ದೈನ್ಯಾವಸ್ಥೆ ಅನುಭವಿಸುತ್ತಿರುವ ಮಹಾರಾಷ್ಟ್ರದಲ್ಲಿ ಹೀಗಾಗುವುದು ಅಪೇಕ್ಷಿತವಾಗಿರಲಿಲ್ಲ ! ಇದಕ್ಕಾಗಿ ಕಾರಣರಾದ ಆಡಳಿತಾಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ! ಅವರ ಮೇಲೆ ಏನು ಕ್ರಮ ಕೈಗೊಳ್ಳಲಾಯಿತು, ಇದು ಕೂಡ ಜನರಿಗೆ ತಿಳಿಸಬೇಕು !
ಮುಂಬಯಿ – ಕೊರೊನಾದ ಮೂರನೆಯ ಅಲೆ ತಡೆಯಲು ಕೇಂದ್ರ ಸರಕಾರವು ಮಹಾರಾಷ್ಟ್ರ ಸರಕಾರಕ್ಕೆ ನೀಡಿರುವ ನಿಧಿಯನ್ನು ಖರ್ಚು ಮಾಡಲಿಲ್ಲ, ಎಂದು ‘ಪಿಐಬಿ’ವು (ಪ್ರೆಸ್ ಇನ್ಫರ್ಮೇಶನ್ ಬ್ಯೂರೋ – ಮಾಹಿತಿ ಮತ್ತು ಪ್ರಸಾರಣ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ಸಂಸ್ಥೆ) ಹೇಳಿದೆ.
ಕೇಂದ್ರ ಸರಕಾರದಿಂದ ಮಹಾರಾಷ್ಟ್ರ ಸರಕಾರಕ್ಕೆ ಪ್ರಸ್ತಾವಿತ ಒಟ್ಟು ಒಂದು ಸಾವಿರದ ೨೯೪ ಕೋಟಿ ರೂಪಾಯಿ ಇತ್ತು. ಆ ನಿಧಿಯಲ್ಲಿನ ಕೇಂದ್ರ ಸರಕಾರವು ಮಹಾರಾಷ್ಟ್ರ ಸರಕಾರಕ್ಕೆ ೬೮೩ ಕೋಟಿ ರೂಪಾಯಿ ನೀಡಿತ್ತು ಮತ್ತು ಅದರಲ್ಲಿ ಕೇವಲ ಶೇ. ೦.೩೨ ರಷ್ಟು ನಿಧಿಯನ್ನಷ್ಟೇ ಉಪಯೋಗಿಸಿದೆ ಎಂದು ಪಿಐಬಿಯು ಪ್ರಕಟಣೆಯಲ್ಲಿ ಹೇಳಿದೆ.
ಮುಂಬಯಿಯಲ್ಲಿ ಜನವರಿ ೪ ರಂದು ಹೊಸದಾಗಿ ೧೦ ಸಾವಿರದ ೮೬೦ ಕರೋನಾ ರೋಗಿಗಳು ನೋಂದಣಿಯಾಗಿದೆ. ಅದ್ದರಿಂದ ಜನವರಿ ೪ ರವರೆಗೆ ಒಟ್ಟು ಕೋರೋನಾ ಸಂಕ್ರಮಿತ ರೋಗಿಗಳ ಸಂಖ್ಯೆ ೮ ಲಕ್ಷದ ೧೮ ಸಾವಿರದ ೪೬೨ ಆಗಿದೆ.