|
ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಕ್ರೈಸ್ತರ ಇಡುಗಂಟಿನ ಮತ ಗಳಿಸಲು ಕಾಂಗ್ರೆಸ್‌ನ ಮುಖ್ಯಮಂತ್ರಿಯಿಂದ ಸೌಲಭ್ಯಗಳ ಸುರಿಮಳೆಯಾಗಿದೆ, ಎಂಬುದು ಬಹಿರಂಗವಾಗಿದೆ ! ಕಾಂಗ್ರೆಸ ಎಂದಾದರೂ ಬಹುಸಂಖ್ಯಾತ ಹಿಂದೂಗಳಿಗೆ ಈ ರೀತಿಯ ಸೌಲಭ್ಯಗಳನ್ನು ನೀಡಿದೆಯೇ ? |
ಚಂಡೀಗಡ – ಪಂಜಾಬ್‌ನ ಮುಖ್ಯಮಂತ್ರಿ ಚರಣಜೀತ ಸಿಂಹ ಚನ್ನಿಯವರು ರಾಜ್ಯದಲ್ಲಿ ಏಸು ಕ್ರಿಸ್ತನ ಹೆಸರಿನಲ್ಲಿ ಶಿಕ್ಷಣ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಅಲ್ಲಿ ಬೈಬಲ ಹಾಗೂ ಕ್ರೈಸ್ತ ಧರ್ಮದ ಶಿಕ್ಷಣ ನೀಡಲಾಗುವುದು. ಹಾಗೂ ರಾಜ್ಯದಲ್ಲಿನ ಪ್ರತಿಯೊಂದು ಜಿಲ್ಲೆಯಲ್ಲಿ ಸಾಮಾಜಿಕ ಸಭಾಗೃಹವನ್ನು ನಿರ್ಮಿಸಲಿರುವುದಾಗಿ ಕೂಡ ಚನ್ನೀಯವರು ಘೋಷಿಸಿದ್ದಾರೆ. ಯಾವ ಜಿಲ್ಲೆಗಳಲ್ಲಿ ಕ್ರೈಸ್ತರಿಗೆ ಸ್ಮಶಾನಭೂಮಿಯಿಲ್ಲವೋ, ಅಲ್ಲಿ ಅವರಿಗೆ ಅದನ್ನು ಒದಗಿಸಲಿದೆ. ‘ಕ್ರೈಸ್ತ ವೆಲಫೇರ ಬೋರ್ಡ’ಗಾಗಿ ೧ ಕೋಟಿ ರೂಪಾಯಿ ನೀಡಲಾಗುವುದು, ಹಾಗೂ ಕ್ರೈಸ್ತರಿಗೆ ದರದಲ್ಲಿ ರಿಯಾಯತಿ ವಿದ್ಯುತ್ ನೀಡಲಾಗುವುದು. ಈ ಎಲ್ಲ ನಿರ್ಧಾರವನ್ನು ಮುಖ್ಯಮಂತ್ರೀ ಚನ್ನಿಯವರು ರಾಜ್ಯದ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ಪ್ರಾ. ಇಮ್ಯಾನುಯಲ ನಾಹರರವರೊಂದಿಗೆ ನಡೆದ ಸಭೆಯಲ್ಲಿ ಕೈಗೊಂಡಿದ್ದಾರೆ.
Punjab will set up university chair to study Bible https://t.co/SgGcl0EhAG
— TOIChandigarh (@TOIChandigarh) December 17, 2021
ಚನ್ನಿಯವರು ಕ್ರೈಸ್ತರ ಬೇಡಿಕೆಗಳನ್ನು ಒಪ್ಪಿಕೊಂಡ ಪಂಜಾಬ್‌ನ ಮೊದಲನೇಯ ಮುಖ್ಯಮಂತ್ರಿ ! – ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಪ್ರಾ. ಇಮ್ಯಾನ್ಯುಯಲ ನಾಹರ
ಮುಖ್ಯಮಂತ್ರಿ ಚನ್ನಿಯವರು ಮಾಡಿದ ಈ ಎಲ್ಲಾ ಘೋಷಣೆಗಳ ಬಗ್ಗೆ ಇಮ್ಯಾನ್ಯುಯಲ ನಾಹರರವರು, ಸ್ವಾತಂತ್ರ್ಯದ ಬಳಿಕ ಮೊಟ್ಟಮೊದಲ ಬಾರಿಗೆ ಪಂಜಾಬ್‌ನ ಓರ್ವ ಮುಖ್ಯಮಂತ್ರಿಯು ಕ್ರೈಸ್ತರಿಗೋಸ್ಕರ ಈ ರೀತಿಯ ಕ್ರಮ ಕೈಗೊಂಡಿದ್ದಾರೆ. ಏಸು ಕ್ರಿಸ್ತನ ಹೆಸರಿನಲ್ಲಿ ಶಿಕ್ಷಣ ಕೇಂದ್ರದ ಬಗ್ಗೆ ನಮ್ಮ ಹಳೆಯ ಬೇಡಿಕೆಯಿತ್ತು. ಮುಖ್ಯಮಂತ್ರಿಗಳು ನಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ ಎಂದು ಹೇಳಿದರು.