ಬಂಗಾಲದಲ್ಲಿ ಚಲಿಸುತ್ತಿರುವ ಉಪನಗರದ ರೈಲು ಗಾಡಿಯಲ್ಲಿನ ಆಸನದ ಮೇಲೆ ಮುಸಲ್ಮಾನರ ನಮಾಜು ಪಠಣ !

ಸ್ಥಳದ ಅಭಾವದಿಂದ ಅನೇಕ ಪ್ರಯಾಣಿಕರಿಗೆ ನಿಂತು ಪ್ರವಾಸ ಮಾಡಬೇಕಾಯಿತು !

ರೈಲ್ವೆ ಆಡಳಿತವು ಈ ವಿಷಯದಲ್ಲಿ  ಗಂಭೀರತೆಯಿಂದ ನೋಡಿ ಇಂತಹ ಘಟನೆಗಳನ್ನು ತಡೆದು ಸಂಬಂಧಿತರ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಬೇಕು !- ಸಂಪಾದಕರು 

ಮುಂಬೈ – ಬಂಗಾಲದಲ್ಲಿ ಚಲಿಸುತ್ತಿರುವ ಉಪನಗರ ರೈಲಿನಲ್ಲಿ ಓರ್ವ ಮುಸಲ್ಮಾನ ವ್ಯಕ್ತಿಯು ಒಂದೇ ಸಮಯದಲ್ಲಿ ಮೂರು ಜನರು ಕುಳಿತುಕೊಳ್ಳಬಹುದಾದ ಆಸನದ ಮೇಲೆ ನಮಾಜು ಮಾಡುತ್ತಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಇಲ್ಲಿಯವರೆಗೆ ಮುಸಲ್ಮಾನರು ರಸ್ತೆಯ ಮೇಲೆ, ಮೈದಾನದಲ್ಲಿ, ವಿಮಾನ ನಿಲ್ದಾಣದಲ್ಲಿ, ರೈಲ್ವೆ ಹಳಿಯಲ್ಲಿ ಇತ್ಯಾದಿ ಕಡೆಗಳಲ್ಲಿ ನಮಾಜ ಮಾಡುತ್ತಿರುವುದು ಕಂಡುಬರುತ್ತಿತ್ತು. ಈಗ ನೇರವಾಗಿ ರೈಲಿನ ಆಸನದಲ್ಲಿ ಕುಳಿತು ನಮಾಜು ಮಾಡುತ್ತಿರುವುದು ಕಂಡುಬರುತ್ತಿದೆ.

1. ಈ ವ್ಯಕ್ತಿಯು ಆಸನದ ಮೇಲೆ ಚಾದರ ಹಾಕಿ ಅದರ ಮೇಲೆ ಕುಳಿತು ನಮಾಜು ಪಠಿಸಲು ಆರಂಭಿಸಿದ್ದಾರೆ ಮತ್ತು ಈ ಗಾಡಿಯು ಒಂದು ನಿಲ್ದಾಣದಲ್ಲಿ ನಿಂತಾಗ ರೈಲು ಹತ್ತಿದ ಪ್ರವಾಸಿಗರಿಗೆ ಸ್ಥಳ ನೀಡದೆ ವ್ಯಕ್ತಿಯು ತನ್ನ ನಮಾಜು ಪಠಣವನ್ನು ಮುಂದುವರಿಸಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ. ಆದುದರಿಂದ ಕೆಲವು ಪ್ರಯಾಣಿಕರು ನಿಂತು ಪ್ರವಾಸ ಮಾಡಬೇಕಾಯಿತು.

2. ನಮಾಜು ಪಠಣ ಮಾಡಲು ಒಂದು ಪದ್ಧತಿ ಇದೆ. ಅದರ ಅನುಸಾರ ಮೊದಲು ಸ್ಥಳದಲ್ಲಿ ಎದ್ದುನಿಂತು ನಂತರ ಕುಳಿತುಕೊಳ್ಳಲಾಗುತ್ತದೆ. ರೈಲಿನ ಆಸನದಲ್ಲಿ ನಿಂತುಕೊಳ್ಳಲು ಅನುಮತಿಯಿಲ್ಲ. ಹೀಗಿರುವಾಗಲೂ ಆ ವ್ಯಕ್ತಿಯು ಮೊದಲು ಆಸನದ ಮೇಲೆ ಎದ್ದು ನಿಂತು ಅನಂತರ ನಮಾಜು ಪಠಣ ಮಾಡುತ್ತಿರುವುದು ಕಂಡುಬರುತ್ತದೆ.