‘ಬಲಾತ್ಕಾರ ನಿಲ್ಲಿಸಲು ಸಾಧ್ಯವಿಲ್ಲದಿದ್ದರೆ, ಮಲ್ಕೊಳ್ಳಿ ಮತ್ತು ಮಜಾ ಮಾಡಿ’, ಎಂದು ಕರ್ನಾಟಕದ ವಿಧಾನಸಭೆಯಲ್ಲಿ ಹೇಳಿದ್ದ ಕಾಂಗ್ರೆಸ್ ಶಾಸಕ ರಮೇಶ ಕುಮಾರ ಇವರಿಂದ ಕ್ಷಮೆ ಯಾಚನೆ !

  • ಇಂತಹ ಹೇಳಿಕೆಗಾಗಿ ಕೇವಲ ಕ್ಷಮೆ ಯಾಚನೆ ಸಾಕಾಗುವುದಿಲ್ಲ, ಇವರ ಶಾಸಕಸ್ಥಾನವನ್ನು ರದ್ದುಪಡಿಸಿ ಅವರ ವಿರುದ್ಧ ದೂರನ್ನು ದಾಖಲಿಸಿ ಕಾರಾಗೃಹಕ್ಕೆ ಅಟ್ಟಬೇಕು !
  • ಕಾಂಗ್ರೆಸ್‌ನ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಇವರು ಈ ವಿಷಯವಾಗಿ ಮಾತನಾಡಬೇಕು ಇಲ್ಲದಿದ್ದರೆ ‘ಅವರು ಮಹಿಳೆಯಾಗಿದ್ದರು ಸಹ ಅಸಂವೇದನಾಶೀಲರಾಗಿದ್ದಾರೆ’, ಎಂದು ಜನರು ತಿಳಿದುಕೊಳ್ಳುತ್ತಾರೆ !

ಬೆಂಗಳೂರು – ಕರ್ನಾಟಕದ ವಿಧಾನಸಭೆಯಲ್ಲಿ ಮಾತನಾಡುವಾಗ ‘ಬಲಾತ್ಕಾರ ತಡೆಯಲು ಸಾಧ್ಯವಿಲ್ಲದಿದ್ದರೆ, ಮಲಗಿ ಮತ್ತು ಮಜಾ ಮಾಡಿ’, ಎಂದು ಹೇಳಿಕೆ ನೀಡುವ ಕಾಂಗ್ರೆಸ್‌ನ ಶಾಸಕ ಮತ್ತು ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಇವರ ಮೇಲೆ ಎಲ್ಲಕಡೆಯಿಂದಲೂ ಟೀಕೆಯಾದ ನಂತರ ಅವರು ಕ್ಷಮೆ ಯಾಚಿಸಿದ್ದಾರೆ. ‘ಈ ಗಂಭೀರ ಅಪರಾಧಕ್ಕಾಗಿ ಹಾಸ್ಯವಾಗಿ ಅಥವಾ ‘ಅದು ಕ್ಷುಲ್ಲಕ ಘಟನೆ’ಯಾಗಿದೆ, ಎಂದು ಹೇಳುವ ನನ್ನ ಯಾವುದೇ ಉದ್ದೇಶ ಇರಲಿಲ್ಲ. ಅದು ಕೇವಲ ಒಂದು ಟೀಕೆ ಆಗಿತ್ತು. ಇನ್ನು ಮುಂದೆ ನಾನು ನನ್ನ ಶಬ್ದ ಯೋಗ್ಯ ಪ್ರಕಾರದಿಂದ ಉಪಯೋಗಿಸುವೇನು’, ಎಂದು ರಮೇಶ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಮಳೆಯಿಂದ ಆಗಿರುವ ಹಾನಿಯ ಬಗ್ಗೆ ಮಾತನಾಡುವಾಗ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರು ಸಮಯ ಕೇಳುತ್ತಿದ್ದರು; ಆದರೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೆರಿ ಅದನ್ನು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದರು. ಕಾಗೇರಿಯವರು ಮಾತನಾಡಿ, ‘ನಾನು ಯೋಚಿಸುತ್ತಿದ್ದೆ ಏನೆಂದರೆ, ನಾವು ಪರಿಸ್ಥಿತಿಯ ಆನಂದ ಪಡೆಯುತ್ತಿದ್ದೇವೆ, ನಾನು ವ್ಯವಸ್ಥೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಅಥವಾ ಅದರ ಮೇಲೆ ನಿಯಂತ್ರಣ ಇಡಲು ಸಾಧ್ಯವಿಲ್ಲ.’ (ರಾಜ್ಯದಲ್ಲಿ ಮಳೆಯಿಂದ ಹಾನಿಯಾಗಿದೆ, ‘ಅದರ ಬಗ್ಗೆ ಚರ್ಚಿಸಬೇಕು’, ಎಂದು ಜನರಿಗೆ ಅನಿಸುತ್ತದೆ. ‘ಅದಕ್ಕೆ ವಿಧಾನಸಭೆಯ ಅಧ್ಯಕ್ಷರು ಹೇಗೆ ನಿರಾಕರಿಸುತ್ತಾರೆ ?’, ಹೀಗೆ ಪ್ರಶ್ನೆ ಉದ್ಭವಿಸುತ್ತದೆ ! – ಸಂಪಾದಕರು) ಇದರ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಶಾಸಕ ರಮೇಶ್ ಕುಮಾರ್ ಅವರು, ‘ಒಂದು ಗಾದೆ ಇದೆ, ‘ಯಾವಾಗ ಬಲಾತ್ಕಾರ ತಡೆಯಲು ಸಾಧ್ಯವಿಲ್ಲ, ಆಗ ಮಲಗಿ ಮತ್ತು ಮಜಾ ಮಾಡಿ,’ ನೀವು ಅದೇ ಸ್ಥಿತಿಯಲ್ಲಿ ಇದ್ದೀರಿ.’ ಅವರ ಈ ಹೇಳಿಕೆಯ ಬಗ್ಗೆ ಸಭಾಗೃಹದಲ್ಲಿ ಉಪಸ್ಥಿತರಿರುವ ಕೆಲವು ಶಾಸಕರು ನಗುತ್ತಿರುವುದು ಕಂಡುಬಂದಿತು.

ಈ ಮೊದಲು ರಮೇಶ ಕುಮಾರ್ ಇವರು ಬಲಾತ್ಕಾರ ವಿಷಯವಾಗಿ ಹೀಗೆ ಹೇಳಿಕೆ ನೀಡಿದ್ದರು !

ಫೆಬ್ರುವರಿ ೨೦೧೯ ರಲ್ಲಿ ವಿಧಾನಸಭೆಯ ಅಧ್ಯಕ್ಷರಾಗಿರುವ ರಮೇಶ ಕುಮಾರ್ ಇವರು ತಮ್ಮನ್ನು ಬಲಾತ್ಕಾರ ಸಂತ್ರಸ್ತೆ ಜೊತೆಗೆ ಹೋಲಿಸಿದ್ದರು. ಆಗ ಅವರು, ‘ನನ್ನ ಅವಸ್ಥೆ ಬಲಾತ್ಕಾರ ಸಂತ್ರಸ್ತೆಯ ಹಾಗೆ ಆಗಿದೆ, ಬಲಾತ್ಕಾರ ಕೇವಲ ಒಂದೇಸಾರಿ ನಡೆಯುವುದು, ಅಲ್ಲೇ ಬಿಟ್ಟಿದ್ದರೆ ಅದು ಮುಗಿಯುವುದು. ಬಲಾತ್ಕಾರ ನಡೆದ ಬಗ್ಗೆ ಆರೋಪ ಮಾಡಿದ ನಂತರ ಆರೋಪಿಗೆ ಕಾರಾಗೃಹಕ್ಕೆ ಅಟ್ಟಲಾಗುತ್ತದೆ. ಮೊಕದ್ದಮೆಯ ಕೊನೆಯಲ್ಲಿ ಸಂತ್ರಸ್ತೆ ಹೇಳುತ್ತಾರೆ, ‘ಬಲಾತ್ಕಾರ ಪ್ರತ್ಯಕ್ಷದಲ್ಲಿ ಒಂದೇಸಾರಿ ನಡೆದಿದೆ, ಆದರೆ ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಅನೇಕ ಸಾರಿ ನಡೆದಿದೆ. ನನ್ನ ಅವಸ್ಥೆಯು ಹೀಗೆ ಆಗಿದೆ.’ ಆ ಸಮಯದಲ್ಲಿ ಅವರ ಪಕ್ಷದ ಮಹಿಳಾ ಶಾಸಕಿಯರು ಈ ಹೇಳಿಕೆಯನ್ನು ಖಂಡಿಸಿದ್ದರು.