ಪರಳಿ (ಬೀಡ ಜಿಲ್ಲೆ) ಇಲ್ಲಿಯ ವೈದ್ಯನಾಥ ದೇವಸ್ಥಾನವನ್ನು ಸ್ಪೋಟಿಸುವುದಾಗಿ ದೇವಸ್ಥಾನದ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ಬೆದರಿಕೆ !

ಅಸುರಕ್ಷಿತ ಮಹಾರಾಷ್ಟ್ರ ! – ಸಂಪಾದಕರು

ಬೀಡ – ಬೀಡ ಜಿಲ್ಲೆಯ ಪರಳಿ ಇಲ್ಲಿಯ ವೈದ್ಯನಾಥ ದೇವಸ್ಥಾನವನ್ನು `ಆರ್ಡಿಎಕ್ಸ್’ ಸ್ಫೋಟದಿಂದ ಧ್ವಂಸಮಾಡುವ ಬೆದರಿಕೆಯೊಡ್ಡಲಾಗಿದೆ. `ವೈದ್ಯನಾಥ ದೇವಸ್ಥಾನದ ಸಂಸ್ಥಾನದ ಬಳಿ ಸಾಕಷ್ಟು ಹಣ ಇದೆ. 50 ಲಕ್ಷ ರೂಪಾಯಿ ನೀಡಿ ಇಲ್ಲದಿದ್ದರೆ `ಆರ್ಡಿಎಕ್ಸ್’ ನಿಂದ ದೇವಸ್ಥಾನವನ್ನು ಧ್ವಂಸ ಮಾಡುವೆವು’, ಎಂದು ಬೆದರಿಕೆ ಪತ್ರವು ಮುಖ್ಯ ವಿಶ್ವಸ್ತರ ಹೆಸರಿನಲ್ಲಿ ಬಂದಿದೆ. 12 ಜ್ಯೋತಿರ್ಲಿಂಗಗಳಲ್ಲಿ ಇದು 5ನೇ ಜ್ಯೋತಿರ್ಲಿಂಗವಾಗಿರುವ ಪರಳಿಯ ವೈದ್ಯನಾಥ ದೇವಸ್ಥಾನ ಸಂಸ್ಥಾನದ ರಾಜೇಶ ದೇಶಮುಖ ಇವರು ಕಾರ್ಯದರ್ಶಿಗಳಾಗಿದ್ದಾರೆ. ಅವರಿಗೆ ಈ ಪತ್ರ ಸಿಕ್ಕಿದೆ. ದೇವಸ್ಥಾನದ ಪರಿಸರದಲ್ಲಿ ಶೋಧ ಕಾರ್ಯ ನಡೆಸಲು ಪೊಲೀಸರಿಂದ ಬಾಂಬ್ ಶೋಧ ದಳದಿಂದ ಕಾರ್ಯಾಚರಣೆ ಮಾಡಲಾಗಿದೆ.