ಸಾಲ ನೀಡುವ ‘ನಾವಿ’ ಸಂಸ್ಥೆಯ ಜಾಹೀರಾತಿನಿಂದ ಸಾಧುಗಳ ಅಪಮಾನ !

ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಅವಮಾನಿಸುವವರಿಗೆ ಕಠಿಣ ಶಿಕ್ಷೆ ವಿಧಿಸದಿರುವುದರಿಂದ ಇಂತಹ ಘಟನೆಗಳು ಪುನಃ ಪುನಃ ಘಟಿಸುತ್ತಿವೆ. ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರದ ಹೊರತು ಪರ್ಯಾಯವಿಲ್ಲ !- ಸಂಪಾದಕರು

ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕರು

ಮುಂಬೈ – ಸಾಲವನ್ನು ನೀಡುವ ‘ನಾವಿ’ ಎಂಬ ಸಂಸ್ಥೆಯು ಒಂದು `ಆಪ್’ಅನ್ನು ತಯಾರಿಸಿದೆ. ಇದರ ಪ್ರಸಾರಕ್ಕಾಗಿ ಒಂದು ಜಾಹೀರಾತನ್ನು ಸಿದ್ಧಪಡಿಸಿದೆ. ಈ ಜಾಹೀರಾತು ಈ ಸಂಸ್ಥೆಯ ಯೂಟ್ಯೂಬ್ ವಾಹಿನಿಯಲ್ಲಿ ಮತ್ತು ಜಾಲತಾಣದಲ್ಲಿ ಉಪಲಬ್ಧವಿದೆ. ಈ ಜಾಹೀರಾತಿನಲ್ಲಿ ಓರ್ವ ಸಾಧುವನ್ನು ‘ಫೈನಾನ್ಸ್ ಬಾಬಾ’ ಎಂದು ತೋರಿಸಲಾಗಿದೆ. ಇದರಲ್ಲಿ ಈ ಬಾಬಾ ಭಕ್ತರಿಗೆ ಸಾಲದ ವಿಷಯದಲ್ಲಿ ಮಾರ್ಗದರ್ಶನ ಮಾಡುತ್ತಿರುವಂತೆ ತೋರಿಸಲಾಗಿದೆ. ಆಗ ಓರ್ವ ಭಕ್ತನು ಬಾಬಾರವರಿಗೆ `ಅತ್ಯಂತ ಉತ್ತಮ ಮತ್ತು ಕಡಿಮೆ ತೊಂದರೆಯುಳ್ಳ ಸಾಲ ಎಲ್ಲಿ ಸಿಗಬಹುದು ?’ ಎಂದು ಕೇಳುತ್ತಾನೆ. ಆಗ ಬಾಬಾರವರು `ನಿಮ್ಮ ಸಂಬಳ ಚೆನ್ನಾಗಿದ್ದಲ್ಲಿ ವಿವಾಹ, ಮನೆಯ ದುರಸ್ತಿ ಇತ್ಯಾದಿಗಳಿಗಾಗಿ 5 ಲಕ್ಷದ ವರೆಗಿನ ಸಾಲವನ್ನು ‘ನಾವಿ ಫೈನಾನ್ಸ್’ನ `ಆಪ್’ನಿಂದ ಪಡೆಯಬಹುದು ಮತ್ತು ಅದು ಕೇವಲ ಶೇಕಡಾ 12 ರಷ್ಟು ಬಡ್ಡಿದರದಲ್ಲಿ’ ಎಂದು ಹೇಳುತ್ತಾರೆ.

ಈ ಜಾಹೀರಾತನ್ನು ಧರ್ಮಾಭಿಮಾನಿಗಳು ಮುಂದಿನ ಸಂಪರ್ಕದಲ್ಲಿ ವಿರೋಧಿಸುತ್ತಿದ್ದಾರೆ.

ವಿ-ಅಂಚೆ[email protected] 

ಸಂಚಾರಿವಾಣಿ ಸಂಖ್ಯೆ : 8147544555