ಕಂಗನಾ ರಾಣಾವತರ ವಿರುದ್ಧ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಆಂದೋಲನ !

ಪುಣೆ – ‘ದೇಶಕ್ಕೆ 1947 ಸ್ವಾತಂತ್ರ್ಯವು ಭಿಕ್ಷೆಯೆಂದು ದೊರೆತಿದೆ’ ಎಂಬ ಹೇಳಿಕೆ ನೀಡುವ ನಟಿ ಕಂಗನಾ ರಾಣಾವತರ ವಿರುದ್ಧ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷವು ಬಾಲಗಂಧರ್ವ ಚೌಕಿಯಲ್ಲಿ ಆಂದೋಲನ ನಡೆಸಿತು. ಆಂದೋಲನಕಾರರು ರಾಣಾವತರ ಛಾಯಾಚಿತ್ರಕ್ಕೆ ಚಪ್ಪಲಿಗಳಿಂದ ಹೊಡೆದರು ಮತ್ತು ಘೋಷಣೆಗಳನ್ನು ಕೂಗಿ ವಿರೋಧ ವ್ಯಕ್ತಪಡಿಸಿದರು.

ಭಾರತವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ಅನೇಕ ಕ್ರಾಂತಿಕಾರಿಗಳು ಮತ್ತು ಮಹಾನ ನೇತಾರರು ತೀವ್ರ ಹೋರಾಟ ನಡೆಸಿದರು. ಪದ್ಮಶ್ರೀ ಪುರಸ್ಕಾರ ಪಡೆದ ಕಂಗನಾ ರಾಣಾವತರವರು ಖೇದಕರ ಹೇಳಿಕೆಯನ್ನು ನೀಡಿ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದ ವೀರರಿಗೆ ಅಪಮಾನ ಮಾಡಿದ್ದಾರೆ, ಎಂದು ಹೇಳಿ ರಾಷ್ಟ್ರವಾದಿ ಕಾಂಗ್ರೆಸ್ಸಿನ ನಗರ ಅಧ್ಯಕ್ಷರಾದ ಪ್ರಶಾಂತ ಜಗತಾಪರವರು ಟೀಕಿಸಿದ್ದಾರೆ.