‘ಹಿಂದುತ್ವ’ದ ಹಿಂದೂ ಧರ್ಮ ಮತ್ತು ಸನಾತನ ಸಂಪ್ರದಾಯದೊಂದಿಗೆ ಸಂಬಂಧವಿಲ್ಲ !'(ವಂತೆ) – ಕಾಂಗ್ರೆಸ್‍ನ ನಾಯಕ ದಿಗ್ವಿಜಯ ಸಿಂಹ

* ಹಿಂದೂದ್ರೋಹಿಯಾಗಿರುವ ದಿಗ್ವಿಜಯ್ ಸಿಂಹ ಅವರಿಗೆ ಹಿಂದುತ್ವ ಮತ್ತು ಸನಾತನ ಹಿಂದೂ ಧರ್ಮದ ಬಗ್ಗೆ ಏನಾದರೂ ಮಾತನಾಡುವ ಅಧಿಕಾರವಿದೆಯೇನು ? – ಸಂಪಾದಕರು

* ಹಿಂದುತ್ವದ ಮತ್ತು ಸನಾತನ ಹಿಂದೂ ಧರ್ಮಕ್ಕಿರುವ ಪರಸ್ಪರ ಸಂಬಂಧವೇನು ಇದರ ಬಗ್ಗೆ ದಿಗ್ವಿಜಯ್ ಸಿಂಹರು ತಮ್ಮ ಜ್ಞಾನವನ್ನು ಪ್ರದರ್ಶಿಸಬಾರದು ! – ಸಂಪಾದಕರು

ಕಾಂಗ್ರೆಸ್‍ನ ನಾಯಕ ದಿಗ್ವಿಜಯ ಸಿಂಹ

ನವದೆಹಲಿ : ಪ್ರಸಾರ ಮಾಧ್ಯಮಗಳು ಹಿಂದುತ್ವವನ್ನು ಹಿಂದೂ ಧರ್ಮದೊಂದಿಗೆ ಜೋಡಿಸುತ್ತಿರುವುದಕ್ಕೆ ನನಗೆ ಬೇಸರವಾಗಿದೆ. `ಹಿಂದುತ್ವ’ದ ಹಿಂದೂ ಧರ್ಮಕ್ಕೂ ಮತ್ತು ಸನಾತನ ಸಂಪ್ರದಾಯಕ್ಕೂ ಯಾವುದೇ ಸಂಬಂಧವಿಲ್ಲ, ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಹರು ಹೇಳಿದ್ದಾರೆ. ಅವರು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಪುಸ್ತಕ ಬಿಡುಗಡೆಯ ಸಮಯದಲ್ಲಿ ಮಾತನಾಡಿದರು.

ಸಾವರಕರರು ಗೋವನ್ನು ತಾಯಿ ಎಂದು ಪರಿಗಣಿಸುವ ಬಗ್ಗೆ ಪ್ರಶ್ನೆಯನ್ನು ಎತ್ತಿದ್ದರು !

* ಸ್ವಾತಂತ್ರ್ಯವೀರ ಇವರನ್ನು ಅನುಕೂಲಕರ ವಾಕ್ಯಗಳನ್ನು ಮಾತ್ರ ಎತ್ತಿ ಹಿಡಿಯುವ ದಿಗ್ವಿಜಯ್ ಸಿಂಹರ ಸಾವರಕರ ಇವರ ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರದ ಬಗ್ಗೆ ಏಕೆ ವಿರೋಧಿಸುತ್ತಾರೆ ? ಅವರನ್ನು ಏಕೆ ನಿರಂತರವಾಗಿ ‘ಮಾಫಿವೀರ’ ಎಂದು ಕರೆಯುತ್ತಾರೆ ? ಕಾಂಗ್ರೆಸ್ ನವರು ಅವರನ್ನು ಗಾಂಧಿ ಹತ್ಯೆಯ ಆರೋಪದಲ್ಲಿ ಉದ್ದೇಶಪೂರ್ವಕವಾಗಿ ಏಕೆ ಸಿಲುಕಿಸಿದರು ? ಅದರ ಬಗ್ಗೆ ಏಕೆ ಮಾತನಾಡುತ್ತಿಲ್ಲ ? – ಸಂಪಾದಕರು

* ಸಾವರಕರವರು ಗೋವನ್ನು ಗೋಮಾತೆ ಎಂದು ಪರಿಗಣಿಸಲು ಸಿದ್ಧರಿರಲಿಲ್ಲ, ಎಂದ ಮಾತ್ರಕ್ಕೆ `ಮತಾಂಧರಿಗೆ ಗೋಹತ್ಯೆ ಮಾಡಲು ಅವಕಾಶ ಮಾಡಿಕೊಟ್ಟರು’, ಎಂದರ್ಥವಲ್ಲ, ಇದನ್ನು ದಿಗ್ವಿಜಯ್ ಸಿಂಹರು ಏಕೆ ಹೇಳುವುದಿಲ್ಲ ? – ಸಂಪಾದಕರು

ದಿಗ್ವಿಜಯ ಸಿಂಹರು ತಮ್ಮ ಮಾತನ್ನು ಮುಂದುವರೆಸುತ್ತಾ, ಸ್ವಾತಂತ್ರ್ಯವೀರ ಸಾವರಕರರು ಗೋಮಾಂಸ ತಿನ್ನುವುದನ್ನು ತಪ್ಪು ಎಂದು ಹೇಳಲಿಲ್ಲ. ಸಾವರಕರು ಧಾರ್ಮಿಕರಾಗಿರಲಿಲ್ಲ. `ಹಸುವನ್ನು ‘ತಾಯಿ’ ಎಂದು ಏಕೆ ಪರಿಗಣಿಸಬೇಕು ?’, ಎಂದು ಅವರ ಅಭಿಪ್ರಾಯವಾಗಿತ್ತು. ದನದ ಮಾಂಸ ತಿನ್ನುವುದರಲ್ಲಿ ಯಾವುದೇ ತೊಂದರೆಯಾಗಬಾರದು, ಎಂದೂ ಸಾವರಕರ ಅವರ ಅಭಿಪ್ರಾಯವಾಗಿತ್ತು. ಅವರು `ಹಿಂದುತ್ವ’ ಈ ಪದವು ಹಿಂದೂ ಐಕ್ಯಂತೆಯನ್ನು ಬಿಂಬಿಸಬೇಕು ಎಂದು ಅದನ್ನು ತಂದು ಜನರಲ್ಲಿ ಗೊಂದಲ ಮೂಡಿಸಿದರು. ರಾ.ಸ್ವ.ಸಂಘದ ಪ್ರಚಾರ ವ್ಯವಸ್ಥೆಯಿಂದಲೇ ಇದು ಘಟಿಸಿತು. ಈಗ ಅವರ ಬಳಿ ಸಾಮಾಜಿಕ ಮಾಧ್ಯಮದಂತಹ ಅಸ್ತ್ರವಿದೆ ಎಂದು ಹೇಳಿದರು.