ತ್ರಿಪುರಾದಲ್ಲಿ ಮುಸಲ್ಮಾನರ ವಿರುದ್ಧದ ಹಿಂಸಾಚಾರದ ಬಗ್ಗೆ ಸ್ವಯಂಪ್ರೇರಣೆಯಿಂದ ವಿಚಾರಣೆಗೆ ಮುಂದಾದ ತ್ರಿಪುರಾ ಉಚ್ಚ ನ್ಯಾಯಾಲಯ

ಹಿಂಸಾಚಾರದ ಸಂಚನ್ನು ವಿಫಲಗೊಳಿಸಲು ರಾಜ್ಯ ಸರಕಾರದ ಬಳಿ ಇರುವ ಯೋಜನೆ ಸಲ್ಲಿಸಲು ಆದೇಶ

ಯಾರಿಗಾದರೂ ಅನ್ಯಾಯವಾದಾಗ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸುವುದು ಒಳ್ಳೆಯದಿದೆ. ಅದರೊಂದಿಗೆ ಭಾರತದಾದ್ಯಂತ ಮತಾಂಧರಿಂದ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಲವ್ ಜಿಹಾದ್ ಇತ್ಯಾದಿ ಪ್ರಕರಣಗಳನ್ನೂ ನ್ಯಾಯಾಲಯವು ಗಣನೆಗೆ ತೆಗೆದುಕೊಂಡು ಹಿಂದೂಗಳಿಗೆ ನ್ಯಾಯ ಒದಗಿಸಬೇಕು ಎಂದು ಹಿಂದೂಗಳ ಅಪೇಕ್ಷೆಯಾಗಿದೆ !

ಅಗರ್ತಲಾ (ತ್ರಿಪುರಾ) – ತ್ರಿಪುರಾ ರಾಜ್ಯದಲ್ಲಿ ಕೆಲವು ದಿನಗಳಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ಹಿಂಸಾಚಾರದ ಬಗ್ಗೆ ತ್ರಿಪುರಾ ಉಚ್ಚ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿ ರಾಜ್ಯ ಸರಕಾರದಿಂದ ವರದಿ ಕೇಳಿದೆ. ನವೆಂಬರ್ ೧೦ ರೊಳಗೆ ಈ ಬಗ್ಗೆ ವಿಸ್ತೃತ ವರದಿ ಸಲ್ಲಿಸುವಂತೆ ನ್ಯಾಯಾಲಯ ತಿಳಿಸಿದೆ.

ಅದೇ ರೀತಿ ‘ರಾಜ್ಯದಲ್ಲಿ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಷಡ್ಯಂತ್ರವನ್ನು ವಿಫಲಗೊಳಿಸಲು ರಾಜ್ಯ ಸರಕಾರದ ಬಳಿ ಏನೆಲ್ಲ ಯೋಜನೆಗಳಿವೆ ?’, ಎಂಬ ಮಾಹಿತಿಯನ್ನೂ ನೀಡುವಂತೆ ನ್ಯಾಯಾಲಯ ತಿಳಿಸಿದೆ. (ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಭೀಕರ ದೌರ್ಜನ್ಯ ನಡೆಯುತ್ತಿರುವಾಗಲೂ ಅಲ್ಲಿನ ನ್ಯಾಯಾಲಯವು ಈ ರೀತಿ ಸ್ವಯಂಪ್ರೇರಿತವಾಗಿ ಪರಿಗಣಿಸಿರುವುದು ಕಾಣಲಿಲ್ಲ, ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು) ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ತ್ರಿಪುರಾದಲ್ಲಿ ಆಂದೋಲನ ಮಾಡುವಾಗ ಹಿಂಸಾಚಾರವಾಯಿತು. ಈ ಸಮಯದಲ್ಲಿ ಅಲ್ಪಸಂಖ್ಯಾತ ಮುಸಲ್ಮಾನರನ್ನು ಗುರಿಯಾಗಿಸಲಾಯಿತು.