ಗಾಂಜಾ ಸೇದುವ ಕಪಟಿ ಬಾಬಾರನ್ನೂ ಜೈಲಿಗೆ ಅಟ್ಟಿ ! – ಕೇಂದ್ರ ಸಚಿವ ರಾಮದಾಸ್ ಆಠವಲೆ

ಕದ್ದುಮುಚ್ಚಿ ಗಾಂಜಾ ಸೇದುವ ಮತ್ತು ಲಂಚ ಪಡೆಯುವ ಭ್ರಷ್ಟ ಮತ್ತು ತತ್ತ್ವಹೀನ ರಾಜಕೀಯ ನಾಯಕರನ್ನೂ ಜೈಲಿಗೆ ಅಟ್ಟಬೇಕು ಎಂದು ಜನರಿಗೆ ಅನಿಸುತ್ತದೆ !- ಸಂಪಾದಕರು 

ಸಚಿವ ರಾಮದಾಸ್ ಆಠವಲೆ

ನವ ದೆಹಲಿ : ಕಾನೂನಿನ ಎದರು ಎಲ್ಲರೂ ಸಮಾನರು, ಅವರು ಶಾರೂಖ ಖಾನ್‍ನ ಮಗ ಆರ್ಯನ್ ಖಾನ್ ಆಗಿರಲಿ ಅಥವಾ ಕುಂಭಮೇಳದಲ್ಲಿ ಗಾಂಜಾ ಸೇದುವ ಢೋಂಗಿ ಬಾಬಾ ಆಗಿರಲಿ. ಅವರನ್ನು ಜೈಲಿನಲ್ಲಿಡಬೇಕು ಮತ್ತು ಸಾಮಾಜಿಕ ನ್ಯಾಯ ಇಲಾಖೆಯ ನಿಲುವಿನ ಪ್ರಕಾರ ಅವರನ್ನು ವ್ಯಸನಮುಕ್ತ ಕೇಂದ್ರದಲ್ಲಿ ಸೇರಿಸಬೇಕು. ಆಶ್ರಮದಲ್ಲಿ ಮಾದಕ ದ್ರವ್ಯಗಳ ಖರೀದಿ-ಮಾರಾಟ ಆಗುತ್ತಿದ್ದರೆ ಅದರ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಇಲಾಖೆ (‘ಎನ್.ಸಿ.ಬಿ.’ಯ) ಸಹ ಕ್ರಮ ಕೈಗೊಳ್ಳಬೇಕು, ಎಂದು ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಆಠವಲೆಯವರು ಆಗ್ರಹಿಸಿದರು.

ಆಠವಲೆಯವರು ಆರೋಪಿಸುತ್ತಾ, ಎನ್.ಸಿ.ಬಿ.ಯ ಅಧಿಕಾರಿ ಸಮೀರ್ ವಾನಖೆಡೆ ಅವರು ದಲಿತರಾಗಿದ್ದರಿಂದ ಮಹಾರಾಷ್ಟ್ರದ ಅಲ್ಪಸಂಖ್ಯಾತರ ಸಚಿವ ನವಾಬ್ ಮಲಿಕ್ ಅವರನ್ನು ಗುರಿ ಮಾಡುತ್ತಿದ್ದಾರೆ. ತಮ್ಮ ಅಳಿಯನನ್ನು ಮಾದಕ ದ್ರವ್ಯಗಳ ಪ್ರಕರಣದಲ್ಲಿ ಬಂಧಿಸಿದ್ದರಿಂದ ಅಸಮಾಧಾನಗೊಂಡಿರುವ ನವಾಬ್ ಮಲಿಕ್ ವಾನಖೆಡೆ ಇವರ ಮಾನಹಾನಿ ಮಾಡಲು ಸಂಚು ರೂಪಿಸಿದ್ದಾರೆ ಎಂದು ಹೇಳಿದರು.