ಗಂಗಾನದಿಯ ನೀರಿನ ಗುಣಮಟ್ಟದಲ್ಲಿ ಸುಧಾರಣೆ

ನವದೆಹಲಿ – ‘ಸ್ವಚ್ಛ ಗಂಗಾ ರಾಷ್ಟ್ರೀಯ ಮಿಶನ್’ನ ಸಂಚಾಲಕರಾದ ರಾಜೀವ ರಂಜನ ಮಿಶ್ರಾ ಇವರು, ‘ಗಂಗಾನದಿಯ ನೀರಿನ ಗುಣಮಟ್ಟದಲ್ಲಿ 2014 ರ ನಂತರ ಗಮನಾರ್ಹ ಸುಧಾರಣೆಯಾಗಿದೆ. 97 ಸ್ಥಾನಗಳ ಪೈಕಿ 68 ಸ್ಥಾನಗಳಲ್ಲಿನ ನೀರು ‘ಜೈವಿಕ ರಾಸಾಯನಿಕ ಆಕ್ಸಿಜನ್'(ಬಿಒಡಿ) ಮಾನದಂಡಕ್ಕನುಸಾರವಾಗಿದೆ. ಅದೇ ರೀತಿ ನೀರಿನಲ್ಲಿನ ಆಮ್ಲಜನಕದ ಪ್ರಮಾಣವು ಅಪೇಕ್ಷಿತ ಕನಿಷ್ಠ ಪ್ರಮಾಣಕ್ಕಿಂತ ಹೆಚ್ಚಾಗಿದೆ. 2014 ರಲ್ಲಿ ಕೇವಲ 32 ಸ್ಥಳಗಳಲ್ಲಿ ನೀರು ಮಾನದಂಡಕ್ಕನುಗುಣವಾಗಿತ್ತು.’ ಎಂದಿದ್ದಾರೆ.