ಕರ್ನಾಟಕದಲ್ಲಿನ ಕಾಂಗ್ರೆಸ್ ಶಾಸಕರಾದ ಸಿ.ಎಮ್. ಇಬ್ರಾಹಿಮ್ ಇವರ ಬೇಡಿಕೆ
ತುಮಕೂರು – ‘ಚಾಣಕ್ಯ ವಿಶ್ವವಿದ್ಯಾಲಯ’ದ ಸ್ಥಾಪನೆಗೆ ನಮ್ಮ ವಿರೋಧವಿಲ್ಲ; ಅದರೆ ಅದರಂತೆ ‘ಟಿಪ್ಪು ಸುಲ್ತಾನ್ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಲಿ, ಎಂಬ ವಿಧಾನವನ್ನು ಪರಿಷತ್ತಿನ ಸದಸ್ಯರಾದ ಸಿ.ಎಮ್. ಇಬ್ರಾಹಿಮ್ ಇವರು ಹೇಳಿದರು. ಕರ್ನಾಟಕ ರಾಜ್ಯ ಸರಕಾರದಿಂದ ಚಾಣಕ್ಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವ ಹಿನ್ನೆಲೆಯಲ್ಲಿ ಇಬ್ರಾಹಿಮ ಅವರು ಮಾತನಾಡುತ್ತಿದ್ದರು. ಕಾಂಗ್ರೆಸ್ ಮಾತ್ರ ‘ಚಾಣಕ್ಯ ವಿಶ್ವವಿದ್ಯಾಲಯ’ವನ್ನು ವಿರೋಧಿಸಿದೆ. (ಕಾಂಗ್ರೆಸ್ ಪಕ್ಷ ಒಂದು ಹೇಳಿದರೆ ಅವರ ಶಾಸಕರು ಬೇರೆಯನ್ನೇ ಹೇಳುತ್ತಾರೆ ! ಮುಸಲ್ಮಾನರಿಗೆ ಮೊದಲು ತಮ್ಮ ಧರ್ಮ ಮುಖ್ಯವಾಗಿರುತ್ತದೆ ನಂತರ ಪಕ್ಷ ಇತ್ಯಾದಿ, ಇದು ಮತ್ತೊಮ್ಮೆ ಸ್ಪಷ್ಟವಾಯಿತು ! – ಸಂಪಾದಕರು)
1. ಇಬ್ರಾಹಿಮರವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್‍ನಲ್ಲಿ ಅಲ್ಪಸಂಖ್ಯಾತರಿಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ. ಕಾಂಗ್ರೆಸ್ ಮುಸಲ್ಮಾನ ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿಯೆಂದು ಘೋಷಿಸಲಿ. ‘ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ 30 ತಿಂಗಳವರೆಗೂ ಮುಸಲ್ಮಾನ ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು’, ಎಂದು ಪಕ್ಷವು ಘೋಷಿಸಲಿ’ ಎಂದರು. (ಜಾತ್ಯತೀತ ಭಾರತದಲ್ಲಿ ಧರ್ಮದ ಆಧಾರದ ಮೇಲೆ ಮುಖ್ಯಮಂತ್ರಿಯ ಪದವಿಯನ್ನು ಕೇಳುವ ಮತಾಂಧ ಜನಪ್ರತಿನಿಧಿಗಳು ! ‘ಕಾಶ್ಮೀರ ಹಾಗೂ ಪಂಜಾಬ ಈ ರಾಜ್ಯಗಳಲ್ಲಿ ಹಿಂದೂಗಳನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಲಾಗುವುದು’, ಎಂದು ಕಾಂಗ್ರೆಸ್ ಎಂದಾದರೂ ಘೋಷಣೆ ಮಾಡಿದೆಯೇ? ಇಬ್ರಾಹಿಮರವರು ಎಂದಾದರೂ ಈ ರೀತಿ ಘೋಷಿಸುವ ಬೇಡಿಕೆ ಮಾಡುವರೇನು ? – ಸಂಪಾದಕರು)
2. ಇಬ್ರಾಹಿಮ ಕಾಂಗ್ರೆಸ್‍ನ ಮುಖಂಡರಾದ ಸಿದ್ಧರಾಮಯ್ಯನವರ ವಿಷಯವಾಗಿ ಮಾತನಾಡುತ್ತಾ, `ಚಾಣಕ್ಯ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು ಬೇಡ’, ಎಂದು ಹೇಳುವ ಸಿದ್ಧರಾಮಯ್ಯನವರ ವಿಷಯದಲ್ಲಿ ನಾನೇನು ಮಾತನಾಡುವುದಿಲ್ಲ. ಅವರು ದೊಡ್ಡವರು. ಸಿದ್ಧರಾಮಯ್ಯನವರು ರಾಜಕಿಯಕ್ಕಾಗಿ ಟಿಪ್ಪೂ ಸುಲ್ತಾನರ ಜಯಂತಿಯನ್ನು ಆಚರಿಸುತ್ತಿದ್ದರು. ನಾವು ಆಗಲೂ ಟಿಪ್ಪೂ ಸುಲ್ತಾನ ಜಯಂತಿಯನ್ನು ವಿರೋಧಿಸಿದ್ದೆವು. ಜಯಂತಿಯನ್ನು ಆಚರಿಸುವುದು, ಅದೇ ರೀತಿ ಚಿತ್ರಕ್ಕೆ ಹಾರ ಹಾಕಿ ಪೂಜೆ ಮಾಡುವುದು, ಇದು ನಮ್ಮ ಪದ್ಧತಿಯಲ್ಲ. (ಮುಸಲ್ಮಾನರನ್ನು ಓಲೈಸುವ ಕಾಂಗ್ರೆಸ್‍ನ ಹಿಂದು ಮುಖಂಡರಿಗೆ ಕಪಾಳ ಮೋಕ್ಷ ! ಈ ಮುಖಂಡರಿಗೆ ಈಗಲಾದರೂ ಬುದ್ಧಿ ಬರುವುದೇ ? – ಸಂಪಾದಕರು)