ಭಾರತದ ಮುಸಲ್ಮಾನ ಧರ್ಮಗುರುಗಳು ಅಫಘಾನಿಸ್ತಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಬೇಕು ! – ಡಾ. ಸುಬ್ರಮಣಿಯನ್ ಸ್ವಾಮಿಯ ಆಗ್ರಹ

ಈ ರೀತಿಯಾಗಿ ಇಡೀ ದೇಶದಲ್ಲಿ ಕೇವಲ ಡಾ. ಸ್ವಾಮಿಯವರೇ ಏಕೈಕ ರಾಜಕಾರಣಿಯವರು ಆಗ್ರಹಿಸುದ್ದಾರೆ. ಇತರ ರಾಜಕಾರಣಿಗಳು ಇಂತಹ ಆಗ್ರಹವನ್ನು ಮಾಡಬೇಕು ಎಂದು ಏಕೆ ಅನಿಸುವುದಿಲ್ಲ ? ಅಥವಾ ‘ತಾಲಿಬಾನ್ ಏನು ಮಾಡುತ್ತಿದೆ ಅದು ಸರಿಯಾಗಿದೆ’, ಎಂದು ಮುಸಲ್ಮಾನರ ಮತವನ್ನು ಪಡೆಯಲು ರಾಜಕಾರಣಿಗಳಿಗೆ ಅನಿಸುತ್ತದೆಯೇ ? ಹಾಗಿದ್ದಲ್ಲಿ, ಅವರು ತಾಲಿಬಾನ್ ಅನ್ನು ಬೆಂಬಲಿಸುತ್ತಾರೆ ಎಂದು ಅವರು ಏಕೆ ಸ್ಪಷ್ಟಪಡಿಸುವುದಿಲ್ಲ ?

ನವ ದೆಹಲಿ : ಅಫಘಾನಿಸ್ತಾನದಲ್ಲಿ ಮಹಿಳೆಯರೊಂದಿಗಿನ ಅಸಭ್ಯ ವರ್ತನೆ ಮತ್ತು ಅಮಾನವೀಯ ವರ್ತನೆಯನ್ನು ಭಾರತೀಯ ಮುಸಲ್ಮಾನ ಧರ್ಮಗುರುಗಳು ಖಂಡಿಸಬೇಕು, ಎಂದು ಭಾರತದ ದೇಶಭಕ್ತ ನಾಗರಿಕರ ಅಪೇಕ್ಷೆಯಾಗಿದೆ. ತಾಲಿಬಾನ್ ಇದು ಇಸ್ಲಾಮಿಕ್ ಧರ್ಮಗ್ರಂಥಗಳ ಆಧಾರದಲ್ಲಿ ತಮ್ಮ ಕೃತ್ಯಗಳನ್ನು ಬೆಂಬಲಿಸುತ್ತದೆ. ಒಂದು ವೇಳೆ ‘ತಾಲಿಬಾನ್ ಕೃತ್ಯಗಳಿಗೆ ಯಾವುದೇ ಧರ್ಮಗ್ರಂಥಗಳ ಆಧಾರವಿಲ್ಲ’, ಎಂದು ಭಾರತದ ಧರ್ಮಗುರುಗಳಿಗೆ ಅನಿಸುತ್ತಿದ್ದರೆ, ಅವರು ತಾಲಿಬಾನಿಗಳ ಅಮಾನವೀಯತೆಯನ್ನು ಖಂಡಿಸಬೇಕು ಎಂದು ಭಾಜಪ ನಾಯಕ ಮತ್ತು ರಾಜ್ಯಸಭಾ ಸಂಸದ ಡಾ. ಸುಬ್ರಮಣಿಯನ್ ಸ್ವಾಮಿಯವರು ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.