ಚಿಕ್ಕ ಸಿಕ್ಕಿಂ ರಾಜ್ಯಕ್ಕೆ ಏನು ಮಾಡಲು ಸಾಧ್ಯವಾಗುತ್ತದೆ, ಅದನ್ನು ದೇಶದ ಇತರ ರಾಜ್ಯಗಳಿಗೆ, ಹಾಗೂ ಕೇಂದ್ರ ಸರಕಾರಕ್ಕೆ ಏಕೆ ಮಾಡಲು ಬರುವುದಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ ! – ಸಂಪಾದಕರು
ಗ್ಯಾಂಗಟಕ್ (ಸಿಕ್ಕಿಂ) – ಸಿಕ್ಕಿಂ ಸರಕಾರವು ರಾಜ್ಯದಲ್ಲಿ ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ಮಾರಾಟದ ಮೇಲೆ ನಿಷೇಧ ಹೇರುವ ನಿರ್ಧಾರವನ್ನು ತೆಗೆದುಕೊಂಡಿದೆ. ಬರುವ ಜನವರಿ 1, 2022 ರಿಂದ ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು. ಸಿಕ್ಕಿಂನಲ್ಲಿ ಅನೇಕ ಪ್ರದೇಶಗಳಲ್ಲಿ ಬಿದಿರಿನ ಬಾಟಲಿಗಳನ್ನು ಉಪಯೋಗಿಸಲಾಗುತ್ತದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಪಿ.ಎಸ್. ತಮಾಂಗ ಇವರು, ರಾಜ್ಯದಲ್ಲಿ ಅನೇಕ ನೈಸರ್ಗಿಕ ಜಲ ಸ್ರೋತಗಳು ಇರುವುದರಿಂದ ಅಲ್ಲಿ ತಾಜಾ ಮತ್ತು ಉತ್ತಮ ದರ್ಜೆಯ ನೀರು ಲಭ್ಯವಿದೆ ಎಂದು ಹೇಳಿದರು.
#Sikkim bans packaged mineral water from January 1 | via @IndiaTVNews https://t.co/R7SZokwnDE
— India TV (@indiatvnews) October 3, 2021