ಸ್ತ್ರೀಯರು ಪೂಜೆ ಮಾಡುವುದು ಧರ್ಮಶಾಸ್ತ್ರದಲ್ಲಿ ಮಾನ್ಯವಾಗಿದ್ದರೂ ವೇದೋಕ್ತ ಮಂತ್ರಗಳ ಉಚ್ಚಾರ ಮಾಡಲು ಸ್ತ್ರೀಯರಿಗೆ ಬಂಧನಗಳಿವೆ. ಸ್ತ್ರೀಯರ ಜನನೇಂದ್ರಿಯಗಳು ಶರೀರದ ಒಳಗಿರುವುದರಿಂದ ಮಂತ್ರೋಚ್ಚಾರದಿಂದ ಉತ್ಪನ್ನವಾಗುವ ಶಕ್ತಿಯಿಂದಾಗಿ ಅದರ ಮೇಲೆ ಪರಿಣಾಮವಾಗಬಹುದು. ಆದ್ದರಿಂದ ಧರ್ಮಶಾಸ್ತ್ರದಲ್ಲಿ ಈ ರೀತಿಯಲ್ಲಿ ಹೇಳಲಾಗಿದೆ; ಆದರೆ ಟೊಳ್ಳು ಸ್ತ್ರೀಮುಕ್ತಿವಾದದಿಂದಾಗಿ ಮತ್ತು ಧರ್ಮಶಾಸ್ತ್ರದ ಬಗ್ಗೆ ಇರುವ ಘೋರ ಅಜ್ಞಾನದಿಂದಾಗಿ ‘ಮಹಿಳಾ ಅರ್ಚಕರ ನೇಮಕಾತಿ’ ಎಂಬಂತಹ ವಿಧಾನಗಳು ಪ್ರಚಲಿತವಾಗುತ್ತಿವೆ !- ಸಂಪಾದಕರು
ಕೋಲಕಾತಾ (ಬಂಗಾಳ) – ಬಂಗಾಲದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಲಾಗುವ ಶ್ರೀ ದುರ್ಗಾದೇವಿಯ ಪೂಜೆಯನ್ನು ಇದೇ ಮೊದಲ ಬಾರಿ ನಾಲ್ಕು ಮಹಿಳಾ ಪೂಜಾರಿಗಳು ಮಾಡಲಿದ್ದಾರೆ. ಇತಿಹಾಸದಲ್ಲಿ ಇಂತಹ ಘಟನೆಯು ಮೊದಲ ಬಾರಿ ನಡೆಯುತ್ತಿದೆ. ಈ ನಿರ್ಣಯವನ್ನು ನಗರದ ‘ಸೌತ್ ಕೋಲಕಾತಾ ಕ್ಲಬ್’ ತೆಗೆದುಕೊಂಡಿದೆ.
1. ಈ ವಿಷಯದಲ್ಲಿ ಪೂಜಾ ಸಮಿತಿಯ ಪ್ರದ್ಯುಮ್ನ ಮುಖರ್ಜಿಯವರು ಮಾತನಾಡುತ್ತಾ, `ಮಂಟಪ ತಯಾರಿಸುವ ಆರಂಭದಲ್ಲಿನ ಪೂಜೆ, ವಿಜಯದಶಮಿಯವರೆಗಿನ ಯಾವುದೇ ಪೂಜೆಯನ್ನು ಈ ಮೊದಲು ಯಾವುದೇ ಮಹಿಳಾ ಅರ್ಚಕರು ಮಾಡಿರಲಿಲ್ಲ. ಆದರೆ ನಮ್ಮ ಕ್ಲಬ್‍ನಲ್ಲಿ 4 ಮಹಿಳಾ ಅರ್ಚಕರ ಗುಂಪು ಪೂಜೆಯನ್ನು ಮಾಡಿ ಹೊಸ ಪರಂಪರೆಯನ್ನು ಆರಂಭಿಸಲಿದೆ. ಪೂಜೆ ಮಾಡುವಲ್ಲಿ ಅವರು ಸ್ವತಂತ್ರ ಶೈಲಿ ಹೊಂದಿದ್ದಾರೆ. (ಈ ಮಹಿಳೆಯರ ಪೂಜೆಯ ಸ್ವತಂತ್ರ ಶೈಲಿಯ ವಿಷಯದಲ್ಲಿ ಅವರು ಬಂಗಾಲದೊಂದಿಗೆ ಜೋಡಿಸಲ್ಪಟ್ಟಿರುವ ಪುರಿ ಪೀಠದ ಶಂಕರಾಚಾರ್ಯರಿಂದ ಮಾರ್ಗದರ್ಶನ ಪಡೆದಿದ್ದಾರೆಯೇ ? ಧರ್ಮಶಾಸ್ತ್ರದ ಮೇಲಾಧಾರಿತ ಪೂಜೆಯನ್ನು ಮಾಡುವುದರಿಂದಲೇ ಯಜಮಾನ ಮತ್ತು ಪುರೋಹಿತರಿಗೆ ಅಧ್ಯಾತ್ಮಿಕ ಮಟ್ಟದಲ್ಲಿ ಲಾಭವಾಗುತ್ತದೆ ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು) ಡಾ. ನಂದಿನಿ ಭೌಮಿಕ, ರೂಮಾ ರಾಯ, ಸೇಮಾಂತಿ ಬ್ಯಾನರ್ಜಿ ಮತ್ತು ಪಲೋಮಿ ಚಕ್ರವರ್ತಿ ಈ ಮಹಿಳೆಯರು ಪೂಜೆ ಮಾಡಲಿದ್ದಾರೆ. ಕಳೆದ ಒಂದು ದಶಕದಿಂದ ನಗರದಲ್ಲಿ ವಿವಾಹ, ಗೃಹಪ್ರವೇಶದಂತಹ ಮಹತ್ವದ ಸಮಾರಂಭಗಳಲ್ಲಿ ಪುರೋಹಿತರೆಂದು ಕೆಲಸ ಮಾಡುತ್ತಿದ್ದಾರೆ; ಪುರೋಹಿತರೆಂದು ಇವರು ಮೊದಲ ಬಾರಿಗೆ ಮೂರ್ತಿಪೂಜೆ ಮಾಡಲಿದ್ದಾರೆ. ಜನರು ಈ ಬದಲಾವಣೆಯನ್ನು ಸ್ವೀಕರಿಸುವರು ಎಂದು ನಾವು ಅಪೇಕ್ಷಿಸುತ್ತೇವೆ’ಎಂದು ಹೇಳಿದರು.
Female priests prepare for historic Durga Puja debut https://t.co/PwMOyNIZAy
— TOI Cities (@TOICitiesNews) August 20, 2021
ಡಾ. ನಂದಿನಿ ಭೌಮಿಕ ರವರು ಮಾತನಾಡುತ್ತಾ, ‘ಇತ್ತೀಚಿಗೆ ಜನರು ಪೂಜಾ ವಿಧಿಗಳಲ್ಲಿ ಇಷ್ಟಪಟ್ಟು ಸಹಭಾಗಿಯಾಗುವ ಬದಲು ಇತರ ಸಂಗತಿಗಳಲ್ಲಿ ಸಹಭಾಗಿಯಾಗುತ್ತಾರೆ. ಇಂತಹ ಜನರು ಪೂಜಾಕಾರ್ಯದಲ್ಲಿ ಇಷ್ಟಪಟ್ಟು ಸಹಭಾಗಿಯಾಗುವಂತೆ ನೋಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ’ ಎಂದು ಹೇಳಿದ್ದಾರೆ.