ಬಾಂಗ್ಲಾದೇಶೀ ನುಸುಳುಕೋರರಿಂದ ಅಸ್ಸಾಂನ 6 ಸಾವಿರ 652 ಚದರ ಕಿಲೋಮಿಟರ್ ಭೂಮಿ ಕಬಳಿಕೆ!

* ಒಂದು ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಕಬಳಿಸುತ್ತಿರುವಾಗ ಪೊಲೀಸರು, ಆಡಳಿತ ಮತ್ತು ಸರಕಾರೀ ವ್ಯವಸ್ಥೆಗಳು ಏನು ಮಾಡುತ್ತಿದ್ದವು? ಈ ಕಬಳಿಕೆ ಹೆಚ್ಚಾಗಲು ಜವಾಬ್ದಾರರಾದ ಎಲ್ಲರ ಮೇಲೆ ಕಠೋರ ಕಾರ್ಯಾಚರಣೆ ನಡೆಸುವುದು ಅವಶ್ಯಕ! – ಸಂಪಾದಕರು 

* ಅಸ್ಸಾಂನಲ್ಲಿ ಬಾಂಗ್ಲಾದೇಶೀ ನುಸುಳುಕೋರರ ಕಬಳಿಸುವಿಕೆಯ ವೇಗವನ್ನು ನೋಡಿದರೆ ಅದೊಂದು ರಾಷ್ಟ್ರೀಯ ಸಮಸ್ಯೆಯಾಗಿದ್ದು ಕೇಂದ್ರ ಸರಕಾರವು ಇದರ ಕಡೆ ಗಮನ ಹರಿಸುವುದು ಅವಶ್ಯಕವಾಗಿದೆ! – ಸಂಪಾದಕರು

ಹೊಸ ದೆಹಲಿ – ಬಾಂಗ್ಲಾದೇಶೀ ನುಸುಳುಕೋರರು ಅಸ್ಸಾಂನ 6 ಸಾವಿರ 652 ಚದರ ಕಿಲೋಮೀಟರ್ ಭೂಮಿಯನ್ನು ಕಬಳಿಸಿದ್ದಾರೆ. ಇದರ ಕ್ಷೇತ್ರಫಲವು ಸುಮಾರು ಗೋವಾ ರಾಜ್ಯದ ಕ್ಷೇತ್ರಫಲದ ದುಪ್ಪಟ್ಟಿನಷ್ಟಿದೆ. ದರಾಂಗ ಜಿಲ್ಲೆಯಲ್ಲಿರುವ ಧೌಲಪುರದಲ್ಲಾಗಿರುವ ಅತಿಕ್ರಮಣದ ಬಗ್ಗೆ ಕಾರ್ಯಾಚರಣೆ ನಡೆಸಲು ಹೋಗಿದ್ದ ಅತಿಕ್ರಮಣ ವಿರೋಧಿ ದಳ ಮತ್ತು ಪೊಲೀಸರ ಮೇಲೆ ಸಾವಿರಾರು ಮತಾಂಧ ಆಂದೋಲನಕಾರರು ಆಕ್ರಮಣ ನಡೆಸಿದರು. ಈ ಆಕ್ರಮಣದಲ್ಲಿ 2 ಆಕ್ರಮಣಕಾರರು ಸತ್ತಿದ್ದು. 11 ಪೊಲೀಸರು ಗಾಯಗೊಂಡಿದ್ದಾರೆ. ಈ ಪ್ರಕರಣದ ವಿಚಾರಣೆಯ ಬಳಿಕ ಈ ಮಾಹಿತಿಯು ಬಹಿರಂಗವಾಗಿದೆ.

1. ನುಸುಳುಕೋರರು ಪ್ರಾಚೀನ ದೇವಸ್ಥಾನದ ಭೂಮಿಯನ್ನು ನೇರವಾಗಿ ಕಬಳಿಸಿಬಿಟ್ಟಿದ್ದಾರೆ. ಅವರು ವೈಷ್ಣವ ಮಠದ ಭೂಮಿಯನ್ನು ಅತ್ಯಧಿಕ ಪ್ರಮಾಣದಲ್ಲಿ ಅತಿಕ್ರಮಿಸಿದ್ದಾರೆ.

2. 2014ರಲ್ಲಿ ಅಸ್ಸಾಂನಲ್ಲಿ ಭಾಜಪವು ಅಧಿಕಾರದಲ್ಲಿತ್ತು. ಆ ಸಮಯದಲ್ಲಿ ಕಾಝಿರಂಗಾ ರಾಷ್ಟ್ರೀಯ ಉದ್ಯಾನವನದ ಭೂಮಿಯನ್ನು ಅತಿಕ್ರಮಿಸಿದವರನ್ನು ತೊಲಗಿಸಲು ಅಭಿಯಾನವನ್ನು ನಡೆಸಲಾಗಿತ್ತು. 15-16 ರ ಶತಮಾನದ ವಿದ್ವಾಂಸ ಶ್ರೀಮಂತ ಶಂಕರದೇವ ಇವರಿಗೆ ಸಂಬಂಧಿತ ಮಠದ ಭೂಮಿಯನ್ನು ಸಹ ನುಸುಳುಕೋರರು ಕಬಳಿಸಿದ್ದರು.

3. ಅತಿಕ್ರಮಿಸಿದವರಲ್ಲಿ ಹೆಚ್ಚಿನವರು ಬಾಂಗ್ಲಾದೇಶಿ ನುಸುಳುಕೋರರಾಗಿದ್ದಾರೆ ಅವರು ಬಂಗಾಲೀ ಭಾಷೆಯನ್ನು ಮಾತನಾಡುತ್ತಾರೆ. 2007ರ ಒಂದು ಸರಕಾರೀ ಗುಂಪಿನ ವರದಿಯಲ್ಲಿ ಹಗಲೂರಾತ್ರಿ ಭೂಮಿಯನ್ನು ಕಬಳಿಸುವುದರಲ್ಲಿ ಕೆಲವು ಜನರು ಮಗ್ನರಾಗಿದ್ದಾರೆ ಎಂದು ಹೇಳಲಾಗಿತ್ತು. ಅವರನ್ನು ವಿರೋಧಿಸುವ ಆದಿವಾಸಿಗಳು ಶಸ್ತ್ರಧಾರೀ ನುಸುಳುಕೋರರನ್ನು ಎದುರಿಸಬೇಕಾಗುತ್ತದೆ. ಈ ರೀತಿ ಬಾಂಗ್ಲಾದೇಶೀ ನುಸುಳುಕೋರರು ಭೂಮಿಯನ್ನು ಕಬಳಿಸಿ ಅನೇಕ ಊರುಗಳಲ್ಲಿ ವಸತಿಯನ್ನು ನಿರ್ಮಿಸಿಕೊಂಡಿದ್ದಾರೆ.

4. ಮಾಹಿತಿ ಹಕ್ಕು ಅಧಿಕಾರದಡಿಯಲ್ಲಿ ಸಿಕ್ಕಿದ ಮಾಹಿತಿಗನುಸಾರ ಅಸ್ಸಾಂನ 4 ಲಕ್ಷ ಹೆಕ್ಟೇರ್ ಅರಣ್ಯಕ್ಷೇತ್ರವನ್ನು ಬಾಂಗ್ಲಾದೇಶಿ ಮತಾಂಧರು ಕಬಳಿಸಿದ್ದಾರೆ. ಇದು ರಾಜ್ಯದ ಒಟ್ಟು ಅರಣ್ಯ ಕ್ಷೇತ್ರದ ಶೇ. 22 ರಷ್ಟಿದೆ. ಒಂದು ಸರಕಾರೀ ಸಮಿತಿಗೆ ಕಂಡಬಂದಂತೆ ಅಸ್ಸಾಂನ 33 ಜಿಲ್ಲೆಗಳಲ್ಲಿ 15 ಜಿಲ್ಲೆಗಳಲ್ಲಿ ಬಾಂಗ್ಲಾದೇಶಿಗಳು ಮುಂಚೂಣಿಯಲ್ಲಿದ್ದಾರೆ.

ಪಿ.ಎಫ್.ಐ.ಯ ಮೇಲೆ ಪೂರ್ಣ ನಿರ್ಬಂಧ ಹೇರುವಂತೆ ಅಸ್ಸಾಂ ಸರಕಾರದಿಂದ ಬೇಡಿಕೆ!

ಈ ರೀತಿಯ ಯಾಕೆ ಬೇಡಿಕೆಯನ್ನು ಮಾಡಬೇಕಾಗುತ್ತದೆ. ಪಿ.ಎಫ್.ಐ. ಈ ಜಿಹಾದಿ ಸಂಘಟನೆಯು ರಾಷ್ಟ್ರಕ್ಕಾಗಿ ಅಪಾಯಕಾರಿಯಾಗಿದೆ; ಹಾಗಾಗಿ ಅದರ ಮೇಲೆ ನಿರ್ಬಂಧ ಹೇರಿ ಈ ಸಂಘಟನೆಯ ಪ್ರಮುಖರನ್ನು ಸೆರೆಮನೆಗಟ್ಟುವುದು ಅವಶ್ಯಕ!- ಸಂಪಾದಕರು

ಅಸ್ಸಾಂ ಸರಕಾರವು ಧೌಲಪುರದ ಹಿಂಸಾಚಾರಕ್ಕೆ ಸಂಬಂಧಿತ ಮಹತ್ವಪೂರ್ಣ ಕಾಗದಪತ್ರಗಳನ್ನು ಕೇಂದ್ರಸರಕಾರಕ್ಕೆ ಕಳಿಸಿದ್ದು ಅದರಲ್ಲಿ ‘ಪಾಪ್ಯುಲರ್ ಫ್ರಂಟ ಆಫ್ ಇಂಡಿಯಾ’ (ಪಿ.ಎಫ್.ಐ) ಎಂಬ ಜಿಹಾದಿ ಸಂಘಟನೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಬೇಡಿಕೆಯನ್ನು ಸಲ್ಲಿಸಿದೆ. ಪಿ.ಎಫ್.ಐ.ಯ ಜಿಹಾದಿಗಳು ಕಳೆದ 3 ತಿಂಗಳುಗಳಲ್ಲಿ ಅತಿಕ್ರಮಣ ಮಾಡುವವರಿಂದ 28 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ. ಅದರ ಬದಲು ಅವರಿಗೆ, ನೀವು ಕಬಳಿಸಿದ ಭೂಮಿಯನ್ನು ವಾಪಾಸು ಮಾಡಬೇಕಾಗಿಲ್ಲ’ ಎಂಬ ಆಶ್ವಾಸನೆಯನ್ನು ನೀಡಿದ್ದಾರೆ.